ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಚಿತ್ರದುರ್ಗ, (ಜ.28): ದೂರದರ್ಶಕಗಳ ಆವಿಷ್ಕಾರದ ನಂತರ ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಸಂಶೋಧನೆಗಳನ್ನು ಕೈಗೊಳ್ಳಲು ಖಗೋಳ ವಿಜ್ಞಾನಿಗಳಿಗೆ ಅನುಕೂಲವಾಯಿತೆಂದು ಹವ್ಯಾಸಿ ಖಗೋಳ ವೀಕ್ಷಕರು ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ರಾಜ್ಯ ಖಚಾಂಚಿ ಎಚ್.ಎಸ್.ಟಿ.ಸ್ವಾಮಿ ತಿಳಿಸಿದರು.
ಇಲ್ಲಿನ ಡಾನ್‍ಬೋಸ್ಕೋ ಶಾಲೆಯಲ್ಲಿ ಬೃಹತ್ ದೂರದರ್ಶಕ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡುತ್ತ ಖಗೋಳ ವಿಜ್ಞಾನ ತುಂಬಾ ಅಭಿವೃದ್ದಿ ಪಥದಲ್ಲಿ ಸಾಗುತ್ತಿದೆ. ಕ್ರಿ.ಶ. 1610 ರಲ್ಲಿ ಗೆಲಿಲಿಯೋ ದೂರದರ್ಶಕವನ್ನು ತಯಾರಿಸಿ ಜಗತ್ತೆ ಬೆರಗಾಗುವಂತೆ ಮಾಡಿದ್ದಾನೆ.
ಈಗ ಸಂಶೋಧನೆಗಳಿಗೆ ನೆರವಾಗಲು ಹೆಚ್ಚು ಸಾಮರ್ಥ್ಯವನ್ನು ದೂರದರ್ಶಕಗಳು ಮಾರುಕಟ್ಟೆಯಲ್ಲಿ ಬಳಕೆಗೆ ಸಿಗುತ್ತಿವೆ. ಅವುಗಳ ಮೂಲಕ ಕೋಟಿ ಕೋಟಿ ಕಿ.ಮೀ. ದೂರದಲ್ಲಿರುವ ಆಕಾಶಕಾಯಗಳನ್ನು ತುಂಬಾ ಹತ್ತಿರದಿಂದ ವೀಕ್ಷಿಸಬಹುದಾಗಿದೆ.
ಗ್ರಹಗಳು, ಉಪಗ್ರಹಗಳು, ಧೂಮಕೇತುಗಳು,ನೆಬುಲಾಗಳು, ಗ್ಯಾಲಕ್ಸಿಗಳನ್ನು ನೋಡಿ ಆನಂದಿಸಬಹುದಾಗಿದೆ ಎಂದು ಮಕ್ಕಳಲ್ಲಿ ಕುತೂಹಲ ಮೂಡಿಸಿದರು.
ಪ್ರಾಂಶುಪಾಲ ಫಾದರ್ ವಿಜಯ ಮಾರ್ಟಿನ್ ಮಾತನಾಡಿ ನಮ್ಮ ಜಿಲ್ಲೆಯಲ್ಲಿಯೇ ಅತಿ ದೊಡ್ಡ ದೂರದರ್ಶಕ ಇದಾಗಿದ್ದು, ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳುವಂತೆ ತಿಳಿಸಿದರು.
ಡಾನ್‍ಬೋಸ್ಕೋ ಶಾಲೆಯ ವಿಜ್ಞಾನ ಶಿಕ್ಷಕರಾದ ಸಂದೀಪ್, ಇಂಧೂದರ್, ಮಾನಸ, ಲಕ್ಷ್ಮಿದೇವಿ, ಪಂಕಜ, ದೀಪ, ಸುಷ್ಮಾ, ಶ್ವೇತ ಹಾಗೂ ಎಲ್ಲಾ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿದ್ದರು.