ಮೈಸೂರು: ದಸರಾ ಹಬ್ಬ ಅಂದ್ರೆ ಇಡೀ ನಾಡಿಗೆ ಹಬ್ಬ. ಈ ಸಂದರ್ಭದಲ್ಲಿ ಹೊಟ್ಟೆಪಾಡಿಗಾಗಿ ಎಲ್ಲೆಲ್ಲಿಂದಾನೋ ವ್ಯಾಪಾರಿಗಳು ಬರ್ತಾರೆ. ಮೂರು ಕಾಸು ದುಡಿದುಕೊಂಡು ಹೋಗೋಣಾ ಅಂತ ಬೀದಿಯಲ್ಲಿಯೇ ಬದುಕುತ್ತಾರೆ. ಅಂಥವರ ಮೇಲೆಯೇ ರಾಕ್ಷಸ ಕೃತ್ಯ ಮೆರೆದರೆ ಹೇಗೆ..? ಅಂತದ್ದೊಂದು ಘಟನೆ ನಿನ್ನೆ ಮೈಸೂರು ನಗರಿಯಲ್ಲಿ ಬೆಳಕಿಗೆ ಬಂದಿತ್ತು. ಕಲಬುರಗಿಯಿಂದ ಮೈಸೂರಿಗೆ ವ್ಯಾಪಾರಕ್ಕೆಂದು ಬಂದಿದ್ದ ಪುಟ್ಟ ಬಾಲಕಿಯ ಮೇಲೆ ಅಮಾನುಷ ಕೃತ್ಯ ಎಸಗಿದ್ದ. ಆ ಬಾಲಕಿ ಆತನ ಅಟ್ಟಹಾಸಕ್ಕೆ ಪ್ರಾಣವನ್ನೇ ಬಿಟ್ಟಿದ್ದಳು. ನಿನ್ನೆ ಶವ ಪತ್ತೆಯಾಗಿತ್ತು. ಇಂದು ಆರೋಪಿಯನ್ನ ಪತ್ತೆ ಹಚ್ಚಿದ ಪೊಲೀಸರು, ಕಾಲುಗೆ ಗುಂಡೇಟು ಹೊಡೆದು ಮಲಗಿಸಿದ್ದಾರೆ.
ನಿನ್ನೆ ಈ ರೀತಿಯ ಘಟನೆ ಬೆಳಕಿಗೆ ಬಂದೊಡನೆ ಪೊಲೀಸರು ಅಲರ್ಟ್ ಆಗಿದ್ದರು. ಘಟನೆ ನಡೆದ ಸುತ್ತಮುತ್ತ ಇರುವ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಿದ್ದರು. ಬಳಿಕ ಆ ಕೃತ್ಯ ನಡೆಸಿದವ ಕಾರ್ತಿಕ್ ಎಂಬುದು ಗೊತ್ತಾಗಿತ್ತು. ಆತನ ಹುಡುಕಾಟ ಶುರು ಮಾಡಿದ ಪೊಲೀಸರಿಗೆ ಕೊಳ್ಳೆಗಾಲದಲ್ಲಿ ಸಿಕ್ಕಿಬಿದ್ದ. ಸದ್ಯ ಆತನನ್ನ ಬಂಧಿಸಿ, ಮೈಸೂರಿಗೆ ಕರೆತಂದಿದ್ದಾರೆ.
ಆತನನ್ನು ಹಿಡಿಯಲು ಹೋದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ್ದಾನೆ. ತಕ್ಷಣ ತಮ್ಮಲ್ಲಿದ್ದ ತಮ್ಮ ಬಳಿ ಇದ್ದ ಪಿಸ್ತೂಲ್ ಮೂಲಕ ಕಾಲಿಗೆ ಗುಂಡು ಹಾರಿಸಿ, ಆತನನ್ನ ಸೆರೆಹಿಡಿದಿದ್ದಾರೆ. ಹೊಟ್ಟೆ ಪಾಡಿಗಾಗಿ ಬಂದಿದ್ದ ಆ ಪುಟ್ಟ ಬಾಲಕಿಯ ಮೇಲೆ ಕ್ರೌರ್ಯ ಮೆರೆದು ಆ ಮಗುವಿನ ಜೀವವನ್ನೇ ತೆಗೆದ. ಆ ತಾಯಿಯ ಸಂಕಟ ನಿನ್ನೆಯೆಲ್ಲಾ ನೋಡೋಕೆ ಆಗದಂತಿತ್ತು. ಬದುಕಿಗೊಂದಿಷ್ಟು ಹಣ ಮಾಡಿಕೊಳ್ಳೋಣಾ ಎಂದು ಬಂದಿದ್ದ ತಾಯಿ ಮಗಳನ್ನೇ ಬಲಿ ಕೊಟ್ಟಂತಾಯ್ತು.






