ಕೋಲಾರದಲ್ಲಿ ಟೊಮೆಟೊ ಬೆಳೆದ ರೈತರ ಬದುಕು ಬಂಗಾರ…!

suddionenews
2 Min Read

 

ಸುದ್ದಿಒನ್

ದೇಶದ ಬಹುತೇಕ ಎಲ್ಲ ರಾಜ್ಯಗಳಲ್ಲಿ ಟೊಮೆಟೊ ಬೆಲೆ ಹೆಚ್ಚುತ್ತಿದೆ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಪ್ರತಿ ಕೆಜಿ ಟೊಮೆಟೊ ಬೆಲೆ ರೂ. 150 ರಿಂದ ರೂ. 200 ವರೆಗೂ ಇದೆ. ಇದರಿಂದ ಶ್ರೀಸಾಮಾನ್ಯನ ಮೇಲೆ ಹೆಚ್ಚಿನ ಹೊರೆ ಬೀಳುತ್ತಿದೆ. ಆದರೆ, ಹೊಲದಲ್ಲಿ ಕಷ್ಟಪಟ್ಟು ಬೆಳೆದ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗುತ್ತದೆ ಎಂದೇ ಹೇಳಬೇಕು.

ಕಳೆದ ತಿಂಗಳಲ್ಲಿ ಟೊಮೇಟೊ ಬೆಲೆ ಶೇ.326.13ರಷ್ಟು ಏರಿಕೆಯಾಗಿದೆ ಎಂದು ಸರ್ಕಾರ ಅಂದಾಜಿಸಿದೆ. ಟೊಮೆಟೊ ಬೆಲೆ ಏರಿಕೆ ಕೆಲ ರೈತರಿಗೆ ವರದಾನವಾಗಿ ಪರಿಣಮಿಸಿದೆ. ಈ ಮೂಲಕ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದಾರೆ.

ಕೋಲಾರದ ರೈತ ಕುಟುಂಬವು ಜುಲೈ 11 ರಂದು ಮಂಗಳವಾರ 2000 ಬಾಕ್ಸ್ ಟೊಮೆಟೊಗಳನ್ನು ಮಾರಾಟ ಮಾಡಿ ರೂ.38 ಲಕ್ಷ ರೂಪಾಯಿ ಗಳಿಸಿದ್ದಾನೆ ಎಂದು
ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

ಬೇತಮಂಗಲದ ಪ್ರಭಾಕರ ಗುಪ್ತಾ ತಮ್ಮ ಸಹೋದರರೊಂದಿಗೆ 40 ಎಕರೆಯಲ್ಲಿ ಕಳೆದ 40 ವರ್ಷಗಳಿಂದ ಟೊಮೆಟೊ ಕೃಷಿ ಮಾಡುತ್ತಿದ್ದಾರೆ. ಎರಡು ವರ್ಷಗಳ ಹಿಂದೆ 15 ಕೆ.ಜಿ ತೂಕದ ಟೊಮೆಟೊ ಚೀಲವನ್ನು 800 ರೂ.ಗೆ ಮಾರಾಟ ಮಾಡಿದ್ದರು. ಆದರೆ, ಮಂಗಳವಾರ, ಜುಲೈ 11 ರಂದು ಪ್ರತಿ ಬಾಕ್ಸ್‌ಗೆ ರೂ.1900 ರಂತೆ  ಮಾರಾಟ ಮಾಡಿದ್ದಾರೆ.

ಚಿಂತಾಮಣಿ ತಾಲೂಕು ವಿಜಕೂರು ಗ್ರಾಮದ ರೈತ ವೆಂಕಟ ರಮಣ ರೆಡ್ಡಿ ಎಂಬುವರು ಜುಲೈ 11ರಂದು 15 ಕೆಜಿ ತೂಕದ ಟೊಮೇಟೊ ಬಾಕ್ಸ್ ಅನ್ನು ರೂ. 2200ಕ್ಕೆ ಮಾರಾಟ ಮಾಡಿದ್ದಾರೆ.

ಕರ್ನಾಟಕದ ಕೋಲಾರದಲ್ಲಿ ಅನೇಕ ರೈತರು ಟೊಮೆಟೊ ಬೆಳೆಯುತ್ತಾರೆ. ಆದರೆ, ಕೆಲ ತಿಂಗಳಿಂದ ಟೊಮೇಟೊ ಬೆಳೆಗೆ ಕೀಟ ಬಾಧೆ ಕಾಣಿಸಿಕೊಂಡು ಇಳುವರಿ ಕಡಿಮೆಯಾಗಿದೆ ಎನ್ನುತ್ತಾರೆ ಈ ಭಾಗದ ರೈತರು. ಆದರೆ, ಕೆಲ ರೈತರು ಟೊಮೆಟೊ ಕೃಷಿ ಮುಂದುವರಿಸಿದ್ದಾರೆ.

ಆದರೆ, ಇತ್ತೀಚಿನ ಬೆಲೆ ಏರಿಕೆಯಿಂದ ರೈತರ ಬದುಕು ಬಂಗಾರವಾಗುತ್ತಿದೆ ಎನ್ನಬಹುದು. ರೈತರು ಟೊಮೇಟೊ ಮಾರಾಟ ಮಾಡಿ ಲಕ್ಷಾಧಿಪತಿಗಳಾಗುತ್ತಿದ್ದಾರೆ. ಕಳೆದ ಮಂಗಳವಾರ ಕೋಲಾರದ ರೈತರೊಬ್ಬರು ಪ್ರತಿ ಪೆಟ್ಟಿಗೆಯನ್ನು ರೂ 1900 ರಂತೆ ಒಟ್ಟು  2000 ಬಾಕ್ಸ್‌ಗಳನ್ನು ಮಾರಾಟ ಮಾಡಿ ರೂ. 38 ಲಕ್ಷ ಗಳಿಸಿದ್ದಾರೆ. ಗುಣಮಟ್ಟದ ಟೊಮೇಟೊ ಬೆಳೆಯುವುದು ಹೇಗೆಂಬುದು ಗೊತ್ತು ಹಾಗಾಗಿಯೇ ಬೆಳೆಯನ್ನು ಕೀಟಬಾಧೆಯಿಂದ ಕಾಪಾಡಿಕೊಂಡಿದ್ದೇವೆ ಎನ್ನುತ್ತಾರೆ ರೈತರು.

ಟೊಮೇಟೊ ಬೆಲೆ ಕೆಲ ಕಾಲ ಇದೇ ರೀತಿ ಇದ್ದರೆ ರೈತರ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾಮಾನ್ಯ ಜನರನ್ನು ಗಮನದಲ್ಲಿಟ್ಟುಕೊಂಡು ಬೆಲೆಗಳ ಹೊರೆಯಿಂದ ಮುಕ್ತಿ ನೀಡುವ ಕ್ರಮಗಳನ್ನು ಕೈಗೊಳ್ಳುತ್ತಿವೆ. ಟೊಮೇಟೊ ಬೆಲೆ ಇಳಿಕೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಕೆಲವೇ ದಿನಗಳಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ರೂ. 300 ದಾಟಲಿದೆ ಎಂದು ಅಂದಾಜಿಸಲಾಗಿದೆ. ಈ ಬೆಲೆಗಳು ಯಾವಾಗ ಕಡಿಮೆಯಾಗುತ್ತವೆ ಎಂಬುದನ್ನು ಕಾದು ನೋಡಬೇಕಾಗಿದೆ.

Share This Article
Leave a Comment

Leave a Reply

Your email address will not be published. Required fields are marked *