ನವದೆಹಲಿ: ಕಾಂಗ್ರೆಸ್ ಸರ್ಕಾರದಲ್ಲಿ ಹೇಗೋ ಮಾಡಿ ಸಿಎಂ ಮತ್ತು ಡಿಸಿಎಂ ಹುದ್ದೆಯನ್ನ ಫೈನಲ್ ಮಾಡಿದ್ದಾಯ್ತು. ಮುನಿಸನ್ನು ಬದಿಗೊತ್ತು ಸಂಧಾನ ಮಾಡಿದ್ದಾಯ್ತು. ಈಗ ಹೊಸ ತಲೆ ನೋವು ಎಂದರೆ ಅದು ಸಚಿವ ಸಂಪುಟಕ್ಕೆ ಶಾಸಕರ ಆಯ್ಕೆ ಮತ್ತು ಅವರಿಗೆ ನೀಡುವ ಖಾತೆಗಳ ಬಗ್ಗೆ. ಈಗಾಗಲೇ ಸಿಎಂ ಮತ್ತು ಡಿಸಿಎಂ ಪ್ರಮಾಣವಚನದ ವೇಳೆಯೇ 8 ಶಾಸಕರು ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.
ಇಂದು ಸಚಿವ ಸಂಪುಟದ ಫೈನಲ್ ಲೀಸ್ಟ್ ರೆಡಿ ಮಾಡಲು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಸಭೆ ಸೇರಿದ್ದಾರೆ. ಈಗಾಗಲೇ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ದೆಹಲಿಯಲ್ಲಿಯೇ ಇದ್ದಾರೆ. ವೇಣುಗೋಪಾಲ್ ಹಾಗೂ ಸುರ್ಜೇವಾಲ್ ನೇತೃತ್ವದಲ್ಲಿ ಸಭೆ ನಡೆಯಲಿದ್ದು, ಇಂದೇ ಫೈನಲ್ ಆಗಬಹುದು ಎನ್ನಲಾಗುತ್ತಿದೆ.
ಇನ್ನು ಭೈರತಿ ಸುರೇಶ್, ಸಂತೋಷ್ ಲಾಡ್, ಅಶೋಕ್ ಪಟ್ಟಣ್, ಪ್ರಕಾಶ್ ರಾಠೋಡ್, ವಿಜಯಾನಂದ ಕಾಶಪ್ಪನವರ್, ಡಾ. ಅಜಯ್ ಸಿಂಗ್, ಡಾ. ಶ್ರೀನಿವಾಸ್, ರಘುಮೂರ್ತಿ, ಎಂ ಕೆ ತಮ್ಮಣ್ಣ, ಅನಿಲ್ ಚಿಕ್ಕಮಾದು ಸೇರಿದಂತೆ ಹಲವು ಆಕಾಂಕ್ಷಿತ ಶಾಸಕರು ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ.