ಮೈಸೂರು: ನಟ ಡಾಲಿ ಧನಂಜಯ ಹಾಗೂ ಡಾಕ್ಟರ್ ಧನ್ಯತಾ ಅದ್ದೂರಿಯಾಗಿ ನವ ಜೀವನಕ್ಕೆ ಕಾಲಿಟ್ಟಿದ್ದಾರೆ. ಕುಟುಂಬಸ್ಥರು, ಬಂಧು ಬಳಗ, ಸೆಲೆಬ್ರೆಟಿಗಳು, ರಾಜಕೀಯ ಗಣ್ಯರ ಆಶೀರ್ವಾದ ಪಡೆದು, ದಾಂಪತ್ಯ ಜೀವನಕ್ಕೆ ಅಡಿಯಿಟ್ಟಿದ್ದಾರೆ. ಮದುವೆಯ ಬಳಿಕ ಮಾತನಾಡಿರುವ ಡಾಲಿ ಧನಂಜಯ, ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ.

ಮದುವೆ ಕಾರ್ಯಕ್ರಮ ಶಾಂತಿಯುತವಾಗಿ ನಡೆದಿದೆ. ಆರತಕ್ಷತೆಗೆ ಜನ ಬಂದಿದ್ದು ಖುಷಿ ಆಯ್ತು. ನಾನು ಅಂದುಕೊಂಡಂತೆ ಎಲ್ಲವೂ ಆಗಿದ್ದು, ಎಲ್ಲರೂ ಖುಷಿಯಾಗಿದ್ದಾರೆ. ಚಿತ್ರರಂಗದ ಕುಟುಂಬಕ್ಕೆ ನಾನು ಆಬಾರಿಯಾಗಿದ್ದೇನೆ. ಅಭಿಮಾನಿಗಳ ಪ್ರೀತಿಗೆ ಏನು ಹೇಳಬೇಕೋ ಗೊತ್ತಿಲ್ಲ. ತುಂಬಾ ಶಾಂತಿಯುತವಾಗಿ ಫ್ಯಾನ್ಸ್ ನಡೆದುಕೊಂಡಿದ್ದಾರೆ. ನಾನು ಜೀವನ ಕಂಡುಕೊಂಡಿದ್ದು ಮೈಸೂರಿನಲ್ಲಿ, ಇಲ್ಲಿಯೇ ಮದುವೆಯಾಗಿದ್ದು ಖುಷಿ ಆಯ್ತು. ಕಲಾವಿದರು, ಸ್ನೇಹಿತರೆಲ್ಲ ಮದುವೆಗೆ ಬಂದದ್ದು ತುಂಬಾನೇ ಖುಷಿ ಆಯ್ತು.

ನಿನ್ನೆ ಸಂಜೆ ಸಾವಿರಾರು ಸಂಖ್ಯೆಯಲ್ಲಿ ಜನ ಬಂದಿದ್ದು ನೋಡಿ ಭಯ ಆಯ್ತು. ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳು ಒಟ್ಟಿಗೆ ಬಂದಾಗ ಅದನ್ನು ನಿಯಂತ್ರಿಸೋದು ಕಷ್ಟ. ಹೀಗಾಗಿ ಏನಾದರೂ ಹೆಚ್ಚು ಕಡಿಮೆ ಆದರೆ ಎಂಬ ಭಯ ಅದು. ಹೇಗೋ ಎಲ್ಲಾ ಸರಾಗವಾಗಿ ನಡೆಯಿತು. ತುಂಬಾನೇ ಖುಷಿಯಾಯ್ತು ಎಂದಿದ್ದಾರೆ.
ಇದೇ ವೇಳೆ ತಮ್ಮ ಮನೆಯ ಸಂಪ್ರದಾಯ, ಆಚಾರ ವಿಚಾರಗಳ ಬಗ್ಗೆ ಮಾತನಾಡಿ, ಕುಟುಂಬದವರ ಬಹುದಿನದ ಕನಸು ನನಸಾಗಿದೆ. ತಾಳಿ ಕಟ್ಟುವಾಗ ನನಗೆ ಯಾವ ಭಯವೂ ಆಗಿಲ್ಲ ಎಂದಿದ್ದಾರೆ. ಇದೇ ವೇಳೆ ಡಾ.ಧನ್ಯತಾ ಮಾತನಾಡಿ, ಡಾಲಿ ಕುಟುಂಬ ಈಗ ನನ್ನ ಕುಟುಂಬ. ನನ್ನ ಮನೆಗೆ ಹೋಗೋದಕ್ಕೆ ತುಂಬಾ ಖುಷಿಯಾಗಿದ್ದೀನಿ. ಇಷ್ಟು ಜನರನ್ನ ನಾನು ನೋಡಿಲ್ಲ. ನೋಡಿದಾಗ ತುಂಬಾ ಭಾವುಕಳಾದೆ ಎಂದಿದ್ದಾರೆ.

