ರಾಯರ ಮಠಕ್ಕೂ ತಟ್ಟಿದ ಭಾಷೆಯ ವಿವಾದ..!

1 Min Read

ರಾಯಚೂರು: ರಾಯರ ಮಠದಲ್ಲಿ ಈಗ ಭಾಷೆಯ ಗಲಾಟೆ ಶುರುವಾಗಿದೆ. ರಾಯರ ಮಠಕ್ಕೆ ಎಂಟ್ರಿಯಾದ ಕೂಡಲೇ ರಾಯರ ಶ್ಲೋಕವನ್ನ ಹಾಕಲಾಗಿದೆ. ಎಲ್ಲರೂ ಒಂದು ಸಲ ಆ ಸಾಲುಗಳನ್ನ ಪಠಿಸಿಯೇ ರಾಯರ ದರ್ಶನಕ್ಕೆ ಹೋಗುವುದು. ಈಗ ಅದೇ ಸಾಲುಗಳ ಬಗ್ಗೆ ತೆಲುಗು ಭಾಷಿಕರು ತಗಾದೆ ತೆಗೆದಿದ್ದಾರೆ. ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಎಂಬ ಸಾಲುಗಳು.

ಈ ಶ್ಲೋಕವನ್ನ ಕನ್ನಡದಲ್ಲಿ ಹಾಕಲಾಗಿದೆ. ಆ ಕಾರಣದಿಂದಾನೇ ಈಗ ವಿವಾದ ಉಂಟಾಗಿದೆ. ಮಂತ್ರಾಲಯ ಇರುವುದು ರಾಯಚೂರಿನ ಕರ್ನೂಲ್ ನಲ್ಲಿ. ಈ ಕರ್ನೂಲ್ ಬಂದು ಆಂಧ್ರಗೆ ಸೇರುತ್ತದೆ. ಹೀಗಾಗಿ ಈ ಶ್ಲೋಕವನ್ನ ತೆಲುಗಿನಲ್ಲಿ ಬರೆಯಬೇಕಿತ್ತು. ಕನ್ನಡದಲ್ಲಿ ಯಾಕೆ ಬರೆದಿದ್ದೀರಿ ಎಂದು ತೆಲುಗು ಭಾಷಿಕರು ವಿರೋಧ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಟ್ವೀಟ್ ಮೂಲಕ ಸಿಎಂ – ಡಿಸಿಎಂ ಅವರಿಗೆ ಪ್ರಶ್ನೆ ಮಾಡುತ್ತಿದ್ದಾರೆ. ಇಲ್ಲಿ ತೆಲುಗು ಆಡಳಿತ ಮಂಡಳಿಯೂ ಇಲ್ಲ, ತೆಲುಗು ಭಾಷೆಗೆ ಪ್ರಾಮುಖ್ಯತದ ಕೂಡ ಇಲ್ವಲ್ಲ ಎಂಬ ಪ್ರಶ್ನೆಯನ್ನ ಕೇಳುತ್ತಿದ್ದಾರೆ. ರಾಯರ ದ್ವಾರದ ಬಳಿ ಬರೆದಿರುವ ಶ್ಲೋಕ ಇಂದು ನಿನ್ನೆಯದ್ದಲ್ಲ. ಬಹಳ ವರ್ಷಗಳಿಂದಾನು ಈ ಶ್ಲೋಕವನ್ನ ಕನ್ನಡದಲ್ಲಿಯೇ ಮಠದ ಅಂಗಳದಲ್ಲಿ ಹಾಕಲಾಗಿದೆ. ಆದರೆ ಈಗ ಯಾಕೆ ಈ ರೀತಿಯ ವಿವಾದವನ್ನ ಹುಟ್ಟು ಹಾಕುತ್ತಿದ್ದಾರೆ ಎಂಬ ಪ್ರಶ್ನೆಯೂ ಹಲವರನ್ನ ಕಾಡುತ್ತಿದೆ. ಹಾಗೇ ಈ ವಿವಾದದ ಸಂಬಂಧ ಮಠದ ಆಡಳಿತ ಮಂಡಳಿ ಇನ್ನು ಕೂಡ ಪ್ರತಿಕ್ರಿಯೆ ನೀಡಿಲ್ಲ.

ರಾಯರಿಗೆ ಭಕ್ತರ ಗಣ ಜಾಸ್ತಿ ಇದೆ. ಅದರಲ್ಲೂ ಕರ್ನಾಟಕದಿಂದಾನೇ ಹೆಚ್ಚಿನ ಸಂಖ್ಯೆಯಲ್ಲಿ ಹೋಗುತ್ತಾರೆ. ನಮ್ಮ ಕರ್ನಾಟಕದ ಸೆಲೆಬ್ರಿಟಿಗಳು ಕೂಡ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರಿದ್ದಾರೆ. ಇದೀಗ ತೆಲುಗು ಭಾಷಿಗರ ವಿರೋಧಕ್ಕೆ ಮಠದ ಆಡಳಿತ ಮಂಡಳಿ ಯಾವ ರೀತಿ ಪ್ರತಿಕ್ರಿಯೆ ನೀಡುತ್ತೆ ಎಂಬುದನ್ನ ನೋಡಬೇಕಿದೆ.

Share This Article
Enable Notifications OK No thanks