ಡಯಾಲಿಸಿಸ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಸಭೆ ಕರೆದು ಪರಿಹರಿಸಲಾಗುವುದು : ಕೆ.ಎಸ್.ನವೀನ್

2 Min Read

ಫೋಟೋ ಮತ್ತು ವರದಿ : ಸುರೇಶ್ ಪಟ್ಟಣ್ 

ಚಿತ್ರದುರ್ಗ, (ಮೇ.23) : ಜಿಲ್ಲಾ ಆಸ್ಪತ್ರೆಯಲ್ಲಿನ ಡಯಾಲಿಸಿಸ್ ಗೆ ಸಂಬಂಧಪಟ್ಟಂತೆ ಮುಂದಿನ ವಾರದಲ್ಲಿ ಸಭೆಯನ್ನು ಕರೆದು ಇರುವ ಸಮಸ್ಯೆಗಳ ಬಗ್ಗೆ ಗಮನ ನೀಡಿ ಪರಿಹಾರ ಮಾಡಲಾಗುವುದೆಂದು ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ತಿಳಿಸಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಡಯಾಲಿಸಿಸ್‌ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿನ ಪರಿಸ್ಥಿತಿಯನ್ನು ಅವಲೋಕನ ಮಾಡಿ ಡಯಾಲಿಸಿಸ್‌ ಪಡೆಯುವವರ ಜೊತೆ ಮಾತನಾಡಿದ ನಂಗರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಲ್ಲಿ ಸುಮಾರು 12 ಡಯಾಲಿಸಿಸ್‌ ಯಂತ್ರಗಳು ಕಾರ್ಯ ನಿರ್ವಹಿಸಬೇಕಿತ್ತು ಆದರಲ್ಲಿ ಈಗ 9 ಮಾತ್ರ ಕಾರ್ಯ ನಿರ್ವಹಿಸುತ್ತಿದ್ದು ಉಳಿದ 3 ಯಂತ್ರಗಳು ರೀಪೇರಿಯಲ್ಲಿದೆ. ಇಲ್ಲಿ ದಿನಕ್ಕೆ ಹಲವಾರು ಜನ ಡಯಾಲಿಸಿಸ್‌ ಮಾಡಿಸುತ್ತಿದ್ದಾರೆ.

ಇದರಿಂದ ತಿಂಗಳಿಗೆ 100 ರಿಂದ 150 ಜನ ಡಯಾಲಿಸಿಸ್‌ ಮಾಡಿಸುತ್ತಿದ್ದಾರೆ. ಇನ್ನೂ ಯಂತ್ರಗಳ ಬೇಡಿಕೆ ಇದೆ ಎಂದರು.
ಡಯಾಲಿಸಿಸ್‌ ಕೇಂದ್ರದಲ್ಲಿ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ ಶೌಚಾಲಯದ ವ್ಯವಸ್ಥೆ ಇಲ್ಲ ಇದರಿಂದ ಡಯಾಲಿಸಿಸ್‌ ಮಾಡಿಸುವವರಿಗೆ ತುಂಬಾ ತೊಂದರೆಯಾಗಲಿದೆ.

ಅಲ್ಲದೇ ಇದರ ನಿರ್ವಹಣೆಯನ್ನು ಮಾಡುತ್ತಿರುವ ಸಂಸ್ಥೆಯೂ ಸಹಾ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡುತ್ತಿಲ್ಲ. ರೋಗಿಗಳಿಗೆ ನೀಡಬೇಕಾದ ಇಂಜಕ್ಷನ್‌ನನ್ನು ಕಳೆದ 2 ತಿಂಗಳಿಂದ ನೀಡಿಲ್ಲ, ಅಲ್ಲದೆ ಹಾಸಿಗೆ ಹಾಸುವ ಬೆಡ್‌ಶೀಟ್‌ನ್ನು ಸಹಾ ಬದಲಾಯಿಸುತ್ತಿಲ್ಲ ಎಂದು ರೋಗಿಗಳ ಸಂಬಂಧಿಗಳು ದೂರಿದ್ದಾರೆ.

ಸರ್ಕಾರಿ ಆಸ್ಪತ್ರೆ ಎಂದು ಬಡ ಜನತೆ ಇಲ್ಲಿಗೆ ಬರುತ್ತಾರೆ ಅವರಿಗೆ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುವುದು ಜಿಲ್ಲಾ ಸರ್ಜನ್ ಆದ ನಿಮ್ಮ ಹೊಣೆಯಾಗಿದೆ ಎಂದ ಅವರು ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರ ಒದಗಿಸಲಿದೆ ಎಂದು ತಿಳಿಸಿದರು.

ಇಲ್ಲಿ ಎಲ್ಲವು ಸರಿಯಾಗಿ ಇದೆ ಎನ್ನುವುದಕ್ಕೆ ಅಗುವುದಿಲ್ಲ ಕೆಲವು ತೊಂದರೆ ಇದೆ. ಇದಕ್ಕೆ ಸಂಬಂಧಪಟ್ಟಂತೆ ಮುಂದಿನ ವಾರ ಸಭೆಯನ್ನು ಕರೆಯುವಂತೆ ಜಿಲ್ಲಾ ಸರ್ಜನ್ ರವರಿಗೆ ಸೂಚನೆ ನೀಡಿದ ಶಾಸಕ ನವೀನ್ ಅಗ ಇದಕ್ಕೆ ಸಂಬಂಧಪಟ್ಟ ಎಲ್ಲರು ಸಹಾ ಇರಬೇಕಿದೆ, ಡಯಾಲಿಸಿಸಿ ಟೆಂಡರ್ ಪಡೆದವರು, ಡಿ.ಎಚ್.ಓ. ಮತ್ತು ಜಿಲ್ಲಾ ಸರ್ಜನ್ ಅದು ಹಾಜರಿದ್ದು ಇರುವ ಸಮಸ್ಯೆಯ ಬಗ್ಗೆ ತಿಳಿಸಿ ಅದನ್ನು ಪರಿಹಾರ ಮಾಡುವ ನಿಟ್ಟಿನಲ್ಲಿ ಕೆಲಸವಾಗಬೇಕಿದೆ ಎಂದು ಅವರು ತಾಕೀತು ಮಾಡಿದರು.

ಜಿಲ್ಲಾ ಕೇಂದ್ರ ಆಗಿದ್ದು ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸೌಲಭ್ಯ ಸಿಗುತ್ತದೆ ಎಂದು ವಿವಿಧ ರೀತಿಯ ರೋಗಿಗಳು ಆಸ್ಪತ್ರೆಗೆ ಬರುತ್ತಾರೆ. ಇಲ್ಲಿ ಎಲ್ಲಾ ರೀತಿಯ ರೋಗಗಕ್ಕೂ ಚಿಕಿತ್ಸೆಗೂ ಸಿಗಬೇಕಿದೆ. ಬೇರೆ ಕಡೆಗೆ ಕಳುಹಿಸುವ ಕೆಲಸವಾಗಬಾರದು. ಇದಕ್ಕೆ ಬೇಕಾದ ಸೌಲಭ್ಯವನ್ನು ಸರ್ಕಾರದಿಂದ ಪಡೆದು ರೋಗಿಗಳಿಗೆ ನೀಡಬೇಕಿದೆ ಎಂದು ನವೀನ್ ಜಿಲ್ಲಾ ಸರ್ಜನ್ ರವರಿಗೆ ಸೂಚನೆ ನೀಡಿದರು.

Share This Article
Leave a Comment

Leave a Reply

Your email address will not be published. Required fields are marked *