Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕರ್ನಾಟಕ ಆರ್ಥಿಕತೆಗೆ ಬಿಸಿ ತಟ್ಟಿದ ಇರಾಕ್ ಯುದ್ಧ! ಅದು ಹೇಗೆ ಗೊತ್ತೆ ?  

---Advertisement---

ಇರಾನ್ ಮೇಲೆ ಇಸ್ರೇಲ್ ಹಾಗೂ ಅಮೆರಿಕ ಯುದ್ಧ  ಕೇವಲ ಮೂರು ದಿನಗಳಲ್ಲೇ ಅದರ ನೇರ  ಪರಿಣಾಮ ಕರ್ನಾಟಕದ ಹೈನೋದ್ಯಮ, ಕುಕ್ಕುಟೋದ್ಯಮ ಹಾಗೂ ಕೃಷಿ ವಲಯದ ಮೇಲೆ ಉಂಟಾಗಿದೆ‌. ಯುದ್ಧದಿಂದಾಗಿ ವಿಮಾನಗಳ ಸಂಚಾರ ಹಾಗೂ ಹಡಗು ಮಾರ್ಗಗಳು ಸಂಪೂರ್ಣವಾಗಿ ಸ್ಥಗಿತಗೊಂಡಿವೆ. ಇದರ ಪರಿಣಾಮವಾಗಿ, ಗಲ್ಫ್ ರಾಷ್ಟ್ರಗಳಿಗೆ ರಫ್ತಾಗಬೇಕಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮೊಟ್ಟೆ, ಹಾಲಿನ ಉತ್ಪನ್ನಗಳು ಹಾಗೂ ತಾಜಾ ತರಕಾರಿಗಳು ರಾಜ್ಯದಲ್ಲೇ ಉಳಿಯುವಂತಾಗಿದ್ದು, ವ್ಯಾಪಾರಿಗಳು ಮತ್ತು ರೈತರು ತೀವ್ರ ಕಂಗಾಲಾಗಿದ್ದಾರೆ.

ಸಾಮಾನ್ಯವಾಗಿ ಕರ್ನಾಟಕದಲ್ಲಿ ಬೆಳೆಯಲಾಗುವ ಗುಣಮಟ್ಟದ ತರಕಾರಿ, ಹಣ್ಣು, ಹೂವು, ರೇಷ್ಮೆ, ಮಾಂಸ ಹಾಗೂ ಹಾಲಿನ ಉತ್ಪನ್ನಗಳಿಗೆ ಮಧ್ಯಪ್ರಾಚ್ಯ ರಾಷ್ಟ್ರಗಳೇ ಅತಿ ದೊಡ್ಡ ಹಾಗೂ ಪ್ರಮುಖ ಮಾರುಕಟ್ಟೆಯಾಗಿವೆ. ಪ್ರತಿನಿತ್ಯ ದುಬೈ, ಮಸ್ಕತ್, ಕುವೈತ್, ಸೌದಿ ಅರೇಬಿಯಾ, ಕತಾರ್, ಬಹರೇನ್ ಮತ್ತು ದಕ್ಷಿಣ ಆಫ್ರಿಕಾ ರಾಷ್ಟ್ರಗಳಿಗೆ ಹಡಗು ಹಾಗೂ ಕಾರ್ಗೋ ವಿಮಾನಗಳ ಮೂಲಕ ಈ ಅಗತ್ಯ ವಸ್ತುಗಳನ್ನು ನಿರಂತರವಾಗಿ ರಫ್ತು ಮಾಡಲಾಗುತ್ತಿತ್ತು. ಆದರೆ, ಪ್ರಸ್ತುತ ಯುದ್ಧದ ವಾತಾವರಣದಿಂದಾಗಿ ಈ ಎಲ್ಲಾ ವಾಣಿಜ್ಯ ಸಂಪರ್ಕಗಳು ಕಡಿತಗೊಂಡಿವೆ.

ದಕ್ಷಿಣ ಭಾರತದಿಂದಲೇ 80 ಲಕ್ಷ ಮೊಟ್ಟೆಗಳು ಮಧ್ಯಪ್ರಾಚ್ಯಕ್ಕೆ ರಫ್ತಾಗುತ್ತಿದ್ದವು. ಕರ್ನಾಟಕದಿಂದಲೂ ಸರಿಸುಮಾರು 15-20 ಲಕ್ಷ ಮೊಟ್ಟೆ ರಫ್ತಾಗುತ್ತಿತ್ತು. ಬಳ್ಳಾರಿ, ಮೈಸೂರು, ಮಂಡ್ಯ, ದಾವಣಗೆರೆ ಸೇರಿದಂತೆ ಅನೇಕ ಕಡೆಯಿಂದ ಮೊಟ್ಟೆಗಳನ್ನು ರಫ್ತು ಮಾಡಲಾಗುತ್ತಿತ್ತು. ಆದರೆ, ಯುದ್ಧದ ಕಾರಣ ಫೆಬ್ರವರಿ 27ರಿಂದ ಮೊಟ್ಟೆಗಳ ರಫ್ತು ಸಂಪೂರ್ಣ ಸ್ಥಗಿತವಾಗಿದೆ.
ಲಕ್ಷಾಂತರ ಮೊಟ್ಟೆಗಳು ಕರ್ನಾಟಕದಲ್ಲೇ ಉಳಿದಿದ್ದು, ಕುಕ್ಕುಟೋದ್ಯಮಕ್ಕೆ ಕೋಟ್ಯಂತರ ರೂಪಾಯಿ ಲಾಸ್ ಆಗಿದೆ ಎಂಬುದಾಗಿ ವರದಿಯಾಗಿದೆ.

ತರಕಾರಿ ಮತ್ತು ಹಣ್ಣುಗಳು ಬೇಗನೆ ಕೆಡುವಂತಹ ಸೂಕ್ಷ್ಮ ಪದಾರ್ಥಗಳಾಗಿವೆ. ಇವುಗಳನ್ನು ರಫ್ತು ಮಾಡದೆ ಹಾಗೆಯೇ ಕೋಲ್ಡ್ ಸ್ಟೋರೇಜ್‌ಗಳಲ್ಲಿ ಹೆಚ್ಚು ದಿನಗಳ ಕಾಲ ದಾಸ್ತಾನು ಮಾಡಿ ಇಟ್ಟುಕೊಳ್ಳಲು ಸಾಧ್ಯವಿಲ್ಲ. ರಾಜ್ಯದಲ್ಲಿ ಈ ಹೆಚ್ಚುವರಿ ಉತ್ಪನ್ನಗಳನ್ನು ತಕ್ಷಣವೇ ಮಾರಾಟ ಮಾಡಲು ದೊಡ್ಡ ಮಾರುಕಟ್ಟೆ ವ್ಯವಸ್ಥೆಯೂ ಇಲ್ಲ. “ಈ ಯುದ್ಧದ ಪರಿಣಾಮದಿಂದ ಕರ್ನಾಟಕದ ರೈತರಿಗೆ ತೀವ್ರ ಆರ್ಥಿಕ ಒತ್ತಡ ಎದುರಾಗಿದೆ. ಶೀಘ್ರದಲ್ಲೇ ರಫ್ತು ಪ್ರಾರಂಭವಾಗದಿದ್ದರೆ ತರಕಾರಿ ಬೆಳೆಗಾರರು ತೀವ್ರ ಹೊಡೆತ ಅನುಭವಿಸಬೇಕಾಗುತ್ತದೆ. ರಫ್ತು ಸಂಪೂರ್ಣ ನಿಂತಿರುವುದರಿಂದ ಬೆಲೆ ಕುಸಿತದ ಆತಂಕದಲ್ಲಿ ರೈತರಿದ್ದಾರೆ,” ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಕಳವಳ ವ್ಯಕ್ತಪಡಿಸಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...