ಬೆಂಗಳೂರು: ಸದ್ಯ ಹಿಜಾಬ್ ವಿವಾದ ಕೊಂಚ ತಣ್ಣಗಾಗಿದೆ. ಉಡುಪಿಯಲ್ಲಿ ಶುರುವಾದ ಹಿಜಾಬ್ ರಾಜ್ಯದೆಲ್ಲೆಡೆ ಆವರಿಸಿತ್ತು, ಕಡೆಗೆ ಕೋರ್ಟ್ ಮೆಟ್ಟಿಲೇರಿದ್ದ ಈ ಕೇಸ್ ಗೆ ಹೈಕೋರ್ಟ್ ಈಗಾಗಲೇ ತೀರ್ಪು ನೀಡಿಯಾಗಿ ಆಗಿದೆ. ಆದ್ರೆ ಇಂದು ಈ ವಿಚಾರವಾಗಿ ಸಚಿವ ಈಶ್ವರಪ್ಪ ಗರಂ ಆಗಿದ್ದಾರೆ.
ಹಿಜಾಬ್ ವಿವಾದ ಸೃಷ್ಟಿ ಮಾಡಿದ್ದೆ ಕಾಂಗ್ರೆಸ್ ನಾಯಕರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಹಿಜಾಬ್ ವಿವಾದದ ಹಿಂದೆ ಕಾಂಗ್ರೆಸ್ ನಾಯಕರಿದ್ದಾರೆ. ವೋಟ್ ಬ್ಯಾಂಕ್ ಗಾಗಿ ಅಲ್ಪಸಂಖ್ಯಾತರನ್ನ ಬಳಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.
ಇನ್ನು ಕಾಂಗ್ರೆಸ್ ನವರು ಅಲ್ಪಸಂಖ್ಯಾತರಿಗೆ ಯಾವುದೇ ರೀತಿಯ ಅನುಕೂಲ ಮಾಡುವುದಿಲ್ಲ. ಶಾಲೆಗೆ ಯಾರೇ ಬಂದರೂ ಹಿಜಾಬ್ ತೆಗೆದಿಟ್ಟು ಬರಬೇಕು. ಹಿಜಾಬ್ ಹಾಕಿಕೊಂಡು ಬರಬಾರದು ಎಂದಿದ್ದಾರೆ.
ಇನ್ನು ಕೋರ್ಟ್ ತೀರ್ಪು ಕೊಟ್ಟ ಬಳಿಕ ಕೆಲವೊಂದು ಜಿಲ್ಲೆಯಲ್ಲಿ ವಿದ್ಯಾರ್ಥಿಗಳು ಈಗಲೂ ಹಿಜಾಬ್ ಧರಿಸಿಯೇ ಬೆಉತ್ತೇವೆ ಎನ್ನುತ್ತಿದ್ದಾರೆ. ಹಿಜಾಬ್ ಇಲ್ಲದೆ ಪರೀಕ್ಷೆ ಬರೆಯಲ್ಲ ಎಂಬುದನ್ನ ಈಗಲೂ ಮುಂದುವರೆಸಿದ್ದಾರೆ.