ವಿಜೃಂಭಣೆಯಿಂದ ಜರುಗಿದ ನಿಡುಮಾಮಿಡೇಶ್ವರಿ, ಕೊಲ್ಲಾಪುರದಮ್ಮ, ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವ

1 Min Read

 

ವರದಿ ಮತ್ತು ಫೋಟೋ ಕೃಪೆ
ಕೆ.ಎಂ. ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಏಪ್ರಿಲ್. 19 : ಭೀಮಸಮುದ್ರ ಸಮೀಪವಿರುವ ವಿ.ಪಾಳ್ಯದಲ್ಲಿ ನಿಡುಮಾಮಿಡೇಶ್ವರಿ, ಕೊಲ್ಲಾಪುರದಮ್ಮ, ಆಂಜನೇಯಸ್ವಾಮಿಯ ಜಾತ್ರಾ ಮಹೋತ್ಸವ ಹಾಗೂ ನಾಲ್ಕನೆ ವರ್ಷದ ರಥೋತ್ಸವ ಶುಕ್ರವಾರ ವಿಜೃಂಭಣೆಯಿಂದ ನಡೆಯಿತು.

ಬಾಳೆಕಂದು, ಹೊಂಬಾಳೆ, ಮಲ್ಲಿಗೆ, ಸುಗಂಧರಾಜ, ಕನಕಾಂಬರ, ಸೇವಂತಿಗೆ, ಗುಲಾಬಿ, ಹಸಿರು ಪತ್ರೆ, ಬೃಹಧಾಕಾರವಾದ ಹಾರ ಹಾಗೂ ವಿವಿಧ ವರ್ಣಗಳ ಬಾವುಟಗಳಿಂದ ರಥವನ್ನು ಅಲಂಕರಿಸಲಾಗಿತ್ತು.

ನಿಡಮಾಮಿಡೇಶ್ವರಿ, ಆಂಜನೇಯ, ಕೊಲ್ಲಾಪುರದಮ್ಮ, ಕರಿಮಾರಮ್ಮ, ಯಲ್ಲಮ್ಮ, ಕುಕ್ಕುವಾಡೇಶ್ವರಿ, ದುರುಗಮ್ಮ ದೇವರುಗಳನ್ನು ವಿಶೇಷವಾಗಿ ಸಿಂಗರಿಸಿ ರಥದಲ್ಲಿ ಕೂರಿಸಿದ ನಂತರ ನೂರಾರು ಭಕ್ತರು ರಥವನ್ನು ಎಳೆದರು. ರಥೋತ್ಸವ ವೇಳೆಯಲ್ಲಿ ಜಮಾಯಿಸಿದ್ದ ಭಕ್ತರು ರಥದ ಕಳಸಕ್ಕೆ ಬಾಳೆಹಣ್ಣುಗಳನ್ನು ಎಸೆದು ಹರಕೆ ತೀರಿಸಿಕೊಂಡರು.

ರಥೋತ್ಸವಕ್ಕೆ ಆಗಮಿಸಿದ್ದ ಭಕ್ತರಿಗೆ ಅಲ್ಲಲ್ಲಿ ತಂಪಾದ ಮಜ್ಜಿಗೆಯನ್ನು ವಿತರಿಸಲಾಯಿತು. ಸುತ್ತಮುತ್ತಲಿನ ಹತ್ತಾರು ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಜಾತ್ರೆಯಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ನಿಡುಮಾಮಿಡೇಶ್ವರಿ ದೇವಸ್ಥಾನ ಜೀರ್ಣೋದ್ದಾರ ಸೇವಾ ಸಮಿತಿ ಅಧ್ಯಕ್ಷ ನವೀನ್‍ಕುಮಾರ್, ಜಂಟಿ ಕಾರ್ಯದರ್ಶಿ ಸ್ವಾಮಿ, ಖಜಾಂಚಿ ಕೃಷ್ಣಪ್ಪ, ವಿ.ಪಾಳ್ಯದ ಮುಖಂಡರುಗಳಾದ ಕೊಟ್ರೇಶಪ್ಪ, ಸತೀಶ್, ನಾಗಪ್ಪ, ಹನುಮಂತಪ್ಪ, ಕರಿಯಪ್ಪ, ಕೆಂಚವೀರಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯೆ ಕೆ.ಎಸ್.ಜಯಪ್ರತಿಭಾ ರಥೋತ್ಸವದಲ್ಲಿ ಪಾಲ್ಗೊಂಡಿದ್ದರು.

Share This Article
Leave a Comment

Leave a Reply

Your email address will not be published. Required fields are marked *

Enable Notifications OK No thanks