Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಹಿಂದೂ ಜಾತಿ ಹೆಸರಿನ ಜೊತೆಗೆ ಕ್ರಿಶ್ಚಿಯನ್ ಹೆಸರು ಸೇರ್ಪಡೆಗೆ ಸರ್ಕಾರದಿಂದಾನೇ ಬ್ರೇಕ್..!

---Advertisement---

ಬೆಂಗಳೂರು: ಹಿಂದೂ ಹೆಸರಿನ ಜೊತೆಯಲ್ಲಿ ಕ್ರಿಶ್ಚಿಯನ್ ಹೆಸರನ್ನು ಸೇರಿಸುವ ಸರ್ಕಾರದ ನಿರ್ಧಾರಕ್ಕೆ ಸಾಕಷ್ಟು ವಿರೋಧ ವ್ಯಕ್ತವಾಗಿತ್ತು. ಇದೀಗ ಆ ನಿರ್ಧಾರವನ್ನ ಸರ್ಕಾರವೇ ಹಿಂತೆಗೆದುಕೊಂಡಿದೆ. ಹಿಂದೂ ಧರ್ಮದ ವಿವಿಧ ಜಾತಿಗಳಿಂದ ಕ್ರಿಶ್ಚಿಯನ್ ಧರ್ಮದ ಮತಾಂತರವಾದವರು ಹಿಂದೂ ಜಾತಿಯ ಜೊತೆಗರ ಕ್ರಿಶ್ಚಿಯನ್ ಧರ್ಮದ ಹೆಸರಿನಿಂದಲೂ ಕರೆದುಕೊಳ್ಳಲು ಸಮೀಕ್ಷೆಯ ಕಾಲಂನಲ್ಲಿ ಅವಕಾಶ ನೀಡಲಾಗಿದೆ. ಒಕ್ಕಲಿಗ ಕ್ರಿಶ್ಚಿಯನ್, ದಲಿತ ಕ್ರಿಶ್ಚಿಯನ್ ಎಂದೆಲ್ಲಾ ಉಲ್ಲೇಖ ಮಾಡಲಾಗಿತ್ತು. ವಿರೋಧ ವ್ಯಕ್ತವಾದ ಬೆನ್ನಲ್ಲೇ ಸರ್ಕಾರವೇ ಹಿಂದಕ್ಕೆ ತೆಗೆದುಕೊಂಡಿದೆ.

ಹಿಂದೂ ಧರ್ಮದಲ್ಲಿ ಇದ್ದವರು ಕೂಡ ಹಲವರು ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತಗೊಂಡಿದ್ದಾರೆ. ಈ ಸಮೀಕ್ಷೆಯಿಂದ ಹಿಂದೂ ಧರ್ಮಕ್ಕೇನೆ ಸೇರಿಸುವ ‌ನಿರ್ಧಾರ ಮಾಡಲಾಗಿತ್ತು. ಒಮ್ಮೆ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆದವರು ಸಂಪೂರ್ಣ ಕ್ರಿಶ್ಚಿಯನ್. ಅಂಥವರನ್ನು ಹಿಂದೂ ಧರ್ಮದ ಜಾತಿಗಳ ಹೆದರಿನಿಂದ ಗುರುತಿಸುವುದು ಸರಿಯಲ್ಲ ಎಂಬ ಆಕ್ಷೇಪ ವ್ಯಕ್ತವಾಗಿತ್ತು.

ಈ ಬಗ್ಗೆ ರಾಜಭವನದ ಮೆಟ್ಟಿಲು ಹತ್ತಿ ಬಿಜೆಪಿ ನಾಯಕರು ಲಿಖಿತ ದೂರು ಸಲ್ಲಿಸಿದ್ದರು. ಈ ಅಂತಿಮವಾಗಿ ಹಿಂದೂ ಜಾತಿಗಳ ಜೊತೆಗೆ ಕ್ರೈಸ್ತ್ ಪದ ಹಾಗೂ ಹೆಚ್ಚುವರಿ ಜಾತಿಗಳ ಸೇರ್ಪಡೆಯನ್ನು ಕೈ ಬಿಡುವಂತೆ ಸಿಎಂ ಸಿದ್ದರಾಮಯ್ಯ ಸೂಚನೆ ನೀಡಿದ್ದಾರೆ. ಜನರ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ನಡೆಸುತ್ತಿರುವ ಶಾಶ್ವತ ಹಿಂದುಳಿದ ವರ್ಗಗಳ ಆಯೋಗಕ್ಕೆ ಕುರುಬ ಕ್ರಿಶ್ಚಿಯನ್, ಒಕ್ಕಲಿಗ ಕ್ರಿಶ್ಚಿಯನ್ ಎಂದೆಲ್ಲಾ ಜಾತಿ ಹೆಸರು ನಮೂದಿಸುವುದನ್ನು ಕೈ ಬಿಡುವಂತೆ ಸೂಚನೆ ನೀಡಿದ್ದಾರೆ. ಜೊತೆಗೆ ಯಾವುದೇ ಹೊಸ ಜಾತಿಗಳ ಹೆಸರನ್ನು ಸಮೀಕ್ಷೆ ವೇಳೆ ಸೇರ್ಪಡೆ ಮಾಡಬಾರದೆಂದು ಸ್ಪಷ್ಟ ಸೂಚನೆ ನೀಡಿದ್ದಾರೆ. ಶಾಶ್ಚತ ಹಿಂದುಳಿದ ವರ್ಗಗಳ ಆಯೋಗಕ್ಕೆ ಸೂಚನೆಯನ್ನ ನೀಡಲಾಗಿದೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now
🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...