ಸುದ್ದಿಒನ್ : ಚಿತ್ರದುರ್ಗ, ನ. 07 : ರಾಜ್ಯದಲ್ಲಿ ಬರ ಆವರಿಸಿದ್ದು ಇದರ ಪರಿಹಾರಕ್ಕೆ ರಾಜ್ಯ ಸರ್ಕಾರ ಮುಂದಾಗಿಲ್ಲ, ಇದರ ಬದಲು ಆಧಿಕಾರಕ್ಕಾಗಿ ಕಿತ್ತಾಟವನ್ನು ನಡೆಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯರವರಿಗೆ ತಮ್ಮ ಸ್ಥಾನ ಉಳಿಸಿಕೊಳ್ಳುವ ಚಿಂತೆಯಾದರೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರವರಿಗೆ ಮುಂದೆ ಯಾವ ರೀತಿ ಮುಖ್ಯಮಂತ್ರಿಯಾಗಬೇಕೆಂಬುದರ ಬಗ್ಗೆ ಚಿಂತೆ ಮಾಡುತ್ತಿದ್ದಾರೆ ಯಾರಿಗೂ ಸಹಾ ರಾಜ್ಯದ ರೈತರ, ಜನರ ಬಗ್ಗೆ ಕಾಳಜಿ ಇಲ್ಲ ಎಂದು ವಿಧಾನಸಭೆಯ ಮಾಜಿ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಚಿತ್ರದುರ್ಗ ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಪೂರ್ಣ ಪ್ರಮಾಣದಲ್ಲಿ ಬರ ಆವರಿಸಿದೆ. ಮಳೆಯ ಪ್ರಮಾಣ ಕಡಿಮೆಯಾಗಿದೆ ಇದರಿಂದ ಬೆಳೆಗಳು ಬಂದಿಲ್ಲ, ಈ ಹಿನ್ನಲೆಯಲ್ಲಿ ರೈತ ಕಂಗಲಾಗಿದ್ದಾನೆ, ಮುಂದಿನ ಜೀವನ ಯಾವ ರೀತಿ ಎಂದು ಗೊಂದಲಕ್ಕೆ ಈಡಾಗಿದ್ದಾನೆ ಇದರ ಬಗ್ಗೆ ರಾಜ್ಯ ಸರ್ಕಾರದ ಚುನಾಯಿತ ಪ್ರತಿನಿಧಿಗಳ ಕಾಳಜಿ ಇಲ್ಲ ಇದರೊಂದಿಗೆ ಅಧಿಕಾರಿಗಳು ಸಹಾ ಆರಾಮಾಗಿ ಇದ್ದಾರೆ. ರಾಜ್ಯದಲ್ಲಿ ಬರ ಆವರಿಸಿದೆ ಇದರೊಂದಿಗೆ ವಿದ್ಯುತ್ ಸಹಾ ಸಿಗದಂತ ಪರಿಸ್ಥಿತಿ ನಿರ್ಮಾಣವಾಗಿದೆ, ರೈತನಿಗೆ ರಾತ್ರಿ ಸಮಯದಲ್ಲಿ ವಿದ್ಯುತ್ ನೀಡುತ್ತಾರೆ ಈ ಸಮಯದಲ್ಲಿ ನೀರನ್ನು ಹಾಯಿಸಲು ಹೋಗಿ ಹಲವಾರು ಮಂದಿ ಸಂತೇಬೆನ್ನೂರಿನಲ್ಲಿ ವಿವಿಧ ವಿಷ ಜಂತುಗಳಿಂದ ಕಡಿಸಿಕೊಂಡು ಚಿಕಿತ್ಸೆಯನ್ನು ಪಡೆಯುತ್ತಿದ್ದಾರೆ. ಇದರಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಸರ್ಕಾರದ ಕಾರ್ಯವೈಖರಿಯನ್ನು ಟೀಕಿಸಿದರು.
ರಾಜ್ಯದೆಲ್ಲೇಡೆ ಭೀಕರ ಬರಗಾಲ ತಾಂಡವ ಆಡುತ್ತಿದೆ. ಇದರ ಬಗ್ಗೆ ಪ್ರವಾಸ ಮಾಡಿ ರೈತರ ಸಮಸ್ಯೆಗಳನ್ನು ಆಲಿಸಿ ಪರಿಹಾರ ನೀಡುವುದನ್ನು ಬಿಟ್ಟು ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರ ನಮಗೆ ಸ್ಪಂದಿಸುತ್ತಿಲ್ಲ, ಹಣ ನೀಡುತ್ತಿಲ್ಲ ಎಂದು ಆರೋಪಿಸುವ ಕೆಲಸ ಮಾಡುವುದಾದರೆ, ೬.೫ ಕೋಟಿ ಜನರಿಂದ ಆಯ್ಕೆಯಾಗಿ ರಾಜ್ಯದಲ್ಲಿ ಸರ್ಕಾರ ನಡೆಸುತ್ತಿರುವ ಕಾಂಗ್ರೇಸ್ ನವರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿ ರಾಜ್ಯದ ೩೧ ಜಿಲ್ಲೆಗಳಲ್ಲಿ ಭೀಕರ ಬರ ಪರಿಸ್ಥಿತಿ ಆವರಿಸಿದ್ದು, ಇದನ್ನು ಸಮರ್ಕಪಕವಾಗಿ ನಿಭಾಯಿಸುವಲ್ಲಿ ಸಂಪೂರ್ಣ ಹಳಿ ತಪ್ಪಿರುವ ಕಾಂಗ್ರೆಸ್ ಸರ್ಕಾರ, ರೈತರ ಸಮಸ್ಯೆಗಳನ್ನು ಆಲಿಸದೆ ಅಧಿಕಾರಕ್ಕಾಗಿ ದಿನನಿತ್ಯ ಬಡಿದಾಟ ಮಾಡುತ್ತಿದೆ. ಸಚಿವರು ಕೇವಲ ಅಧಿಕಾರ ಹಂಚಿಕೆಯ ಚಿಂತನೆಯಲ್ಲೇ ತೊಡಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಬರದಲ್ಲಿ ತನ್ನ ಪಾಲನ್ನು ಬಿಡುಗಡೆ ಮಾಡುವುದನ್ನು ಬಿಟ್ಟು ಕೇಂದ್ರ ಸರ್ಕಾರದ ಕಡೆಗೆ ಕೈ ತೋರಿಸುತ್ತಿದ್ದಾರೆ. ಕೇಂದ್ರ ಸರ್ಕಾರ ಏನು ಮಾಡಿಲ್ಲ ಏನು ಮಾಡಿಲ್ಲ ಎಂದು ಜನತೆಯ ದಾರಿಯನ್ನು ತಪ್ಪಿಸುವ ಕಾರ್ಯವನ್ನು ಮಾಡುತ್ತಿದ್ದಾರೆ, ಇವರನ್ನು ಆಯ್ಕೆ ಮಾಡಿದ ಮತದಾರರಿಗೆ ಇವರ ಸರ್ಕಾರದಿಂದ ಬರ ಸಂಬಂಧ ಏನು ಮಾಡಿದ್ದಾರೆ, ಯಾವ ಸಚಿವರು ಪ್ರವಾಸವನ್ನು ಮಾಡಿದ್ದಾರೆ ಎಂಬುದನ್ನು ತೋರಿಸಲಿ ಎಂದ ಕಾಗೇರಿಯವರು, ಬರದ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ನೀಡುವುದನ್ನು ಮುಂದಿನ ದಿನದಲ್ಲಿ ನೀಡುತ್ತದೆ ಆದರೆ ರಾಜ್ಯ ಸರ್ಕಾರವಾಗಿ ಏನು ಸಹಾ ಮಾಡಿಲ್ಲ ನಾವು ಪ್ರವಾಸವನ್ನು ಕೈಗೊಂಡ ಮೇಲೆ ಸರ್ಕಾರ ಜಿಲ್ಲಾವಾರು ಹಣವನ್ನು ಬಿಡುಗಡೆ ಮಾಡಿದೆ ಎಂಬ ಮಾಹಿತಿ ಬಂದಿದೆ ಎಂದು ಕಾಗೇರಿ ತಿಳಿಸಿದರು.
ಬರದಿಂದಾಗಿ ಜನ ಮತ್ತುನ ಜಾನುವಾರುಗಳಿಗೆ ತುಂಬಾ ತೊಂದರೆಯಾಗಿದೆ ಕುಡಿಯುವ ನೀರು, ಮೇವಿನ ಕೂರತೆಯಾಗಿದೆ. ಸರ್ಕಾರ ಬರಗಾಲದ ಗಂಭೀರತೆಯನ್ನು ಪರಿಗಣಿಸಿಲ್ಲ, ಸದಾ ಅಧಿಕಾರದ ಹಂಚಿಕೆಯಲ್ಲಿ ಕಾಲ ಕಳೆಯುತ್ತಿದೆ. ರೈತರ ಪೆರವಾಗಿ ಬಿಜೆಪಿ ಕೆಲಸವನ್ನು ಮಾಡುತ್ತಿದೆ ಸದನದ ಒಳಗಡೆ ಮತ್ತು ಹೂರಗಡೆಯಲ್ಲಿಯೂ ಸಹಾ ಅವರ ಪರವಾಗಿ ನಿಲ್ಲುವ ಕಾರ್ಯವನ್ನು ಮಾಡುತ್ತದೆ. ಬೆಳಗಾವಿಯಲ್ಲಿ ನಡೆಯುವ ಅಧಿವೇಶನದಲ್ಲಿ ಇದರ ಬಗ್ಗೆ ಧ್ವನಿಯನ್ನು ಎತ್ತಲಾಗುವುದು ಅಲ್ಲದೆ ಸದ್ನದ ಹೂರಗಡೆಯೂ ಸಹಾ ಕೆಲಸವನ್ನು ಮಾಡಲಾಗುತ್ತದೆ ರೈತರ ಪರವಾಗಿ ಬಿಜೆಪಿ ಇದೆ ಎಂಬದನ್ನು ಮರೆಯಬೇಡಿ ಎಂದರು.
ಪತ್ರಿಕಾಗೋಷ್ಠಿಯಲ್ಲಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ್, ಶಾಸಕ ಎಂ.ಚಂದ್ರಪ್ಪ, ಬಿ.ಪಿ.ಹರೀಶ್,ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಮಾಜಿ ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಬಿಜೆಪಿ ಜಿಲ್ಲಾದ್ಯಕ್ಷ ಮುರುಳಿ, ಯುವ ಮುಖಂಡ ಅನಿತ್ ಕುಮಾರ್, ರೈತ ಮೋರ್ಚಾದ ಉಪಾಧ್ಯಕ್ಷರಾದ ದುಂಡಪ್ಪ ಬಂಡವಾಡ, ಸಂಪತ್ ಕುಮಾರ್, ವೆಂಕಟೇಶ್ ಯಾದವ್, ನರೇಂದ್ರ, ಮಾಧುರಿ ಗೀರಿಶ್, ದಗ್ಗೆ ಶಿವಪ್ರಕಾಶ್, ನಾಗರಾಜ್ ಬೇದ್ರೆ ಉಪಸ್ಥಿತರಿದ್ದರು.