ಬೆಂಗಳೂರು: ಸರ್ಕಾರ ರಚನೆಯಾದ ಮೇಲೆ ವಿರೋಧ ಪಕ್ಷಗಳಿಂದ ವರ್ಗಾವಣೆ ಮತ್ತು ಪೋಸ್ಟಿಂಗ್ ದಂಧೆ ಆರೋಪ ಸಾಕಷ್ಟು ಕೇಳಿ ಬಂದಿತ್ತು. ಇದೀಗ ಆ ಆರೋಪಕ್ಕೆ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ ಹೊಸದಾಗಿ ಆದೇಶ ಹೊರಡಿಸಿದೆ. ವರ್ಗಾವಣೆಗೆ ಸಿಎಂ ಅನುಮತಿ ಕಡ್ಡಾಯವಾಗಿದೆ.
ವರ್ಗಾವಣೆ ಮತ್ತು ಪೋಸ್ಟಿಂಗ್ ಮಾಡುವುದಕ್ಕೆ ಸಿಎಂ ಅನುಮತಿ ಕಡ್ಡಾಯವಾಗಿದೆ. ಯಾವುದೇ ಇಲಾಖೆಯಲ್ಲಾದರೂ ವರ್ಗಾವಣೆಯಾಗಬೇಕಾದರೆ ಸಿಎಂ ಅವರ ಅನುಮತಿ ಪಡೆಯಬೇಕಾಗಿರುವುದು ಕಡ್ಡಾಯ ಎಂಬ ಆದೇಶ ಹೊರಡಿಸಲಾಗಿದೆ. ಸಿಎಂ ಅವರ ಅನುಮತಿ ಪಡೆಯದೆ ವರ್ಗಾವಣೆ ಮಾಡಿದರೆ ಅಂಥವರ ವಿರುದ್ಧ ಕಾನೂನಾತ್ಮಕ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಇನ್ನು ಮುಂದೆ ಯಾವುದೇ ವರ್ಗಾವಣೆಯಾಗಬೇಕಾದರೂವ ಸಿಎಂ ಬಳಿಗೆ ವಿಚಾರ ಮುಟ್ಟಿಸಬೇಕಾಗುತ್ತದೆ. ಬಳಿಕ ಅವರ ಗಮನಕ್ಕೆ ತಂದ ನಂತರವಷ್ಟೆ ವರ್ಗಾವಣೆ ಅಥವಾ ಪೋಸ್ಟಿಂಗ್ ಮಾಡಬೇಕಾಗುತ್ತದೆ. ಸಿಎಂ ಕಚೇರಿಗೆ ವಿಷಯ ತಿಳಯದೆ ವರ್ಗಾವಣೆ ಮಾಡಿದರೆ ಅದಕ್ಕೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತದೆ ಎಂದು ಆದೇಶದಲ್ಲಿ ತಿಳಿಸಿದೆ.