ನವದೆಹಲಿ: ದುಡಿವ ಜನರಿಗೆ ಪಿಎಫ್ ಅನ್ನೋದು ಬಹಳ ಮುಖ್ಯ. ಪಿಎಫ್ ಹಣಕ್ಕೆ ಸರ್ಕಾರದಿಂದ ಕೊಡುವ ಬಡ್ಡಿ, ಕಂಪನಿಯಿಂದ ಹಾಕುವ ಬಡ್ಡಿಗಾಗಿ ಸಿಬ್ಬಂದಿಗಳು ಕಾಯುತ್ತಾರೆ. ಆ ಪಿಎಫ್ ಹಣದಲ್ಲಿ ದೊಡ್ಡಮಟ್ಟದ ಯೋಜನೆಯನ್ನೇ ಹಾಕಿಕಿಂಡಿರುತ್ತಾರೆ. ಇದು ಎಲ್ಲಾ ದುಡಿಯುವ ವರ್ಗಕ್ಕೆ ಸಂಬಂಧಪಟ್ಟಂತದ್ದು. ಇದೀಗ ಕೇಂದ್ರ ಸರ್ಕಾರಿ ನೌಕರರಿಗೆ ಪಿಎಫ್ ಹಣದ ವಿಚಾರವಾಗಿ ಗುಡ್ ನ್ಯೂಸ್ ಒಂದು ಸಿಕ್ಕಿದೆ.
ಎಂಪ್ಲಾಯಿ ಪ್ರಾವಿಡೆಂಟ್ ಫಂಡ್ ನ ಬಡ್ಡಿಯನ್ನು ಹೆಚ್ಚಳ ಮಾಡಲಾಗಿದೆ. ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದಿಂದ ಹೊಸ ಆದೇಶ ಹೊರಡಿಸಲಾಗಿದೆ. ಪ್ರತಿ ವರ್ಷ ಬಡ್ಡಿ ದರ ಹೆಚ್ಚಳ ಮಾಡುವ ಇಲಾಖೆ, ಈ ಬಾರಿ ಕಳೆದ ಬಾರಿಗಿಂತ ಬಡ್ಡಿ ದರ ಹೆಚ್ಚಳ ಮಾಡಿದೆ. ಕಳೆದ ಬಾರಿ 8.1ರಷ್ಟಿದ್ದ ಬಡ್ಡಿ ದರ, ಈ ಬಾರಿ 8.15ರಷ್ಟಾಗಿದೆ.
ಇನ್ನು ಈ ಬಡ್ಡಿ ಹೆಚ್ಚಳ ದರ ಇಂದಿನಿಂದಾನೇ ಜಾರಿಗೆ ಬರುವಂತೆ ಆದೇಶ ಹೊರಡಿಸಲಾಗಿದೆ. ದೇಶದಲ್ಲಿರೋ ಶೇಕಡ 75ರಷ್ಟು ಉದ್ಯೋಗಿಗಳಿಗೆ ಇದು ಅನುಕೂಲವಾಗಲಿದೆ. ಬಡ್ಡಿ ದರ ಹೆಚ್ಚಳವಾಗಿದ್ದು, ಕೇಂದ್ರ ಸರ್ಕಾರಿ ನೌಕರರಿಗೂ ಖುಷಿ ತಂದಿದೆ.