Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಚಿತ್ರದುರ್ಗದ ಕೋಟೆಯನ್ನು ಬಲಾಢ್ಯಗೊಳಿಸಿದವರು ಪಾಳೆಯಗಾರರು : ಸಂಶೋಧಕ ಡಾ.ಬಿ.ರಾಜಶೇಖರಪ್ಪ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552

ಸುದ್ದಿಒನ್, ಚಿತ್ರದುರ್ಗ, ಜನವರಿ.27 : ಕಲೆ, ಸಾಹಿತ್ಯ, ನೃತ್ಯ, ಜಾನಪದ, ವಚನಗಳು ಕಡಿಮೆಯಾಗುತ್ತಿರುವುದರಿಂದ ಸರ್ಕಾರ ಪ್ರೋತ್ಸಾಹ ನೀಡಬೇಕೆಂದು ಹಿರಿಯ ನ್ಯಾಯವಾದಿ ಚಿನ್ಮೂಲಾದ್ರಿ ಸಾಹಿತ್ಯ ವೇದಿಕೆ ಗೌರವಾಧ್ಯಕ್ಷ ಬಿ.ಕೆ.ರಹಮತ್‍ವುಲ್ಲಾ ಮನವಿ ಮಾಡಿದರು.

ಕನ್ನಡ ಸಾಹಿತ್ಯ-ಸಂಸ್ಕøತಿ ಮತ್ತು ಅಭಿವೃದ್ದಿ ಟ್ರಸ್ಟ್, ಕುಕನೂರು, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಹಯೋಗದೊಂದಿಗೆ ಪತ್ರಕರ್ತರ ಭವನದಲ್ಲಿ ಶನಿವಾರ ನಡೆದ ಅಖಿಲ ಕರ್ನಾಟಕ ಏಳನೆ ಸಾಂಸ್ಕøತಿಕ ಸಮ್ಮೇಳನ, ಚುಟುಕು ಸಾಹಿತ್ಯೋತ್ಸವ, ವಿಚಾರ ಸಂಕಿರಣ, ಕವಿಗೋಷ್ಠಿ, ಸಾಧಕರಿಗೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಗಾಟಿಸಿ ಮಾತನಾಡಿದರು.

ಪ್ರಪಂಚದಲ್ಲಿ ಮೊದಲು ಮನುಷ್ಯ ಜನ್ಮತಾಳಿದಾಗ ವ್ಯಾಜ್ಯ, ಅರಾಜಕತೆ ಉಂಟಾಯಿತು. ಆಗ ಮುಖಂಡರು, ಧರ್ಮಗುರುಗಳು ಪೂಜೆ, ಪುನಸ್ಕಾರದ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದರು. ಇತ್ತೀಚಿನ ದಿನಗಳಲ್ಲಿ ಹಿಂದಿನ ಕಾಲದ ಕಲೆಗಳು ನಶಿಸುತ್ತಿವೆ. ಪದ್ಮಭೂಷಣ ಡಾ.ರಾಜ್‍ಕುಮಾರ್‍ರವರ ಕಾಲದಲ್ಲಿನ ಚಿತ್ರಗಳು ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು. ಈಗ ಮುಂಗಾರು ಮಳೆ, ಚೆಲುವಿನ ಚಿತ್ತಾರದಂತ ಚಿತ್ರಗಳು ಮೂಡಿ ಬರುತ್ತಿವೆ. ಪೋಕ್ಸೋ ಕೇಸ್‍ಗಳು ಜಾಸ್ತಿಯಾಗುತ್ತಿದೆ. ಎಲ್ಲರೂ ಮೊಬೈಲ್ ಲೋಕದಲ್ಲಿ ಮುಳುಗಿದ್ದಾರೆಂದು ವಿಷಾಧಿಸಿದರು.

ನಾಟಕ ಕಲೆಗೆ ಸಮಾಜ ಸುಧಾರಣೆಯ ಶಕ್ತಿಯಿದೆ. ಶಾಸಕಾಂಗ, ಕಾರ್ಯಾಂಗದ ಮೇಲೆ ಜನ ನಂಬಿಕೆ ಕಳೆದುಕೊಳ್ಳಿತ್ತಿರುವ ಇಂದಿನ ದಿನಮಾನಗಳಲ್ಲಿ ನ್ಯಾಯಾಲಯ ಅತ್ಯುತ್ತಮ ತೀರ್ಪುಗಳನ್ನು ನೀಡುತ್ತಿದೆ. ರಾಮ ಮಂದಿರ, ಬಾಬ್ರಿ ಮಸೀದಿ ವಿಚಾರದಲ್ಲಿ ರಾಮ ಮಂದಿರದ ಪರವಾಗಿ ಐತಿಹಾಸಿಕ ತೀರ್ಪು ನೀಡಿದೆ. ಬಲ್ಕಿಸ್‍ಭಾನು ಪ್ರಕರಣ ನ್ಯಾಯಾಂಗದ ಮೇಲೆ ಜನತೆಯಲ್ಲಿ ನಂಬಿಕೆ ಹೆಚ್ಚಾಗಲು ಕಾರಣವಾಗಿದೆ ಎಂದು ಹೇಳಿದರು.

ಸಂಶೋಧಕ ಡಾ.ಬಿ.ರಾಜಶೇಖರಪ್ಪ ಚಿತ್ರದುರ್ಗದ ಕೋಟೆ ಐತಿಹಾಸಿಕ ಹಿನ್ನೆಲೆ ಕುರಿತು ಉಪನ್ಯಾಸ ನೀಡುತ್ತ ಹನ್ನೊಂದನೆ ಶತಮಾನ ಕಲ್ಯಾಣ ಚಾಲುಕ್ಯರ ಕಾಲದಲ್ಲಿಯೇ ಚಿತ್ರದುರ್ಗದಲ್ಲಿ ಏಳು ಸುತ್ತಿನ ಕೋಟೆಯಿತ್ತು. ಹೆಬ್ಬಾಗಿಲು, ಬಥೇರಿಗಳಿದೆ. ಚಿತ್ರದುರ್ಗದ ಕೋಟೆಯನ್ನು ಬಲಾಢ್ಯಗೊಳಿಸಿದವರು ಪಾಳೆಯಗಾರರು. ಹಿರೇಗುಂಟನೂರು, ಹುಲ್ಲೂರಿನಲ್ಲಿರುವ ಶಾಸನದಲ್ಲಿ ಸುಳಿವು ಸಿಕ್ಕಿದೆ. ಮತ್ತಿ ತಿಮ್ಮಣ್ಣನಾಯಕ ಚಿತ್ರದುರ್ಗ ಪಾಳೆಯಗಾರರ ಮೂಲ ಪುರುಷ ಎನ್ನುವ ಮಾಹಿತಿ ನೀಡಿದರು.

ಆರು ಮೆದಕೇರಿ ನಾಯಕರು ಚಿತ್ರದುರ್ಗದ ಕೋಟೆಯನ್ನು ಆಳಿದ್ದಾರೆ. ಚಿತ್ರದುರ್ಗ ಕೋಟೆಯ ರಚನೆ ನಿರಂತರವಾಗಿ ಸಾಗಿತ್ತು. ಮೆದಕೇರಿನಾಯಕನ ಮಗ ಜಂಪಣ್ಣನಾಯಕ ಕಟ್ಟಿಸಿದ್ದು, ಜಂಪಣ್ಣನಾಯಕನ ಕೋಟೆ. ಪಾಳೆಯಗಾರರ ಕಾಲದಲ್ಲಿ ಬೇರೆ ಬೇರೆ ಕಡೆ ಅನೇಕ ಕೋಟೆಗಳನ್ನು ಕಟ್ಟಲಾಗಿದೆ. ಆಲಘಟ್ಟದ ಕೋಟೆ, ಸಿದ್ದಯ್ಯನಕೋಟೆಯನ್ನು ನೆನಪಿಸಿದ ಡಾ.ಬಿ.ರಾಜಶೇಖರಪ್ಪ ಕೋಟೆಗಳನ್ನು ವ್ಯವಸ್ಥಿತವಾಗಿ ನೋಡಿಕೊಳ್ಳಲು ಕಿಲ್ಲೆದಾರರುಗಳನ್ನು ನೇಮಿಸಲಾಗಿತ್ತು. ಚಿತ್ರದುರ್ಗದ ಕೋಟೆ ಅತ್ಯಂತ ಮುಖ್ಯವಾದುದು. ಅದರಂತೆ ಅಂಕಲಿಮಠ, ದವಳಪ್ಪನಗುಡ್ಡ ಕೂಡ ಪ್ರಾಮುಖ್ಯತೆ ಪಡೆದುಕೊಂಡಿದೆ ಎಂದು ಚಿತ್ರದುರ್ಗದ ಕೋಟೆಗಿರುವ ಪ್ರಸಿದ್ದಿಯನ್ನು ವಿವರಿಸಿದರು.
ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಎಸ್.ಎಚ್.ಶಫಿವುಲ್ಲಾ(ಕುಟೇಶ) ಹಿರಿಯ ಸಾಹಿತಿ ಶ್ರೀಮತಿ ಸತ್ಯಪ್ರಭಾ ವಸಂತಕುಮಾರ್, ಡಾ.ರಾಜ್‍ಕುಮಾರ್ ಸಾಂಸ್ಕøತಿಕ ವೇದಿಕೆ ಅಧ್ಯಕ್ಷ ಪರಶುರಾಮ್ ಗೊರಪ್ಪರ್, ಚಿನ್ಮುಲಾದ್ರಿ ಸಾಹಿತ್ಯ ವೇದಿಕೆ ಸಂಸ್ಥಾಪಕ ಅಧ್ಯಕ್ಷೆ ಶ್ರೀಮತಿ ದಯಾ ಪುತ್ತೂರ್ಕರ್, ರಮೇಶ್ ಸುರ್ವೆ, ಶರಣಪ್ಪ ಕೊಪ್ಪದ, ಎಂ.ಹೆಚ್.ಉಜ್ಜಪ್ಪ, ಎಂ.ಎಸ್.ಕಳ್ಳಿ, ಉಮಾಪತಿ, ಗಜೇಂದ್ರಗಡ ತಳ್ಳಿಹಾಳ ಸಂಸ್ಥಾನ ಕೋಡಿಮಠದ ಡಾ.ಶರಣಬಸವೇಶ್ವರ ಮಹಾಸ್ವಾಮಿ, ಉಡುಪಿ ದೊಡ್ಡನಗುಡ್ಡೆ ಕ್ಷೇತ್ರದ ಪೀಠಾಧ್ಯಕ್ಷ ರಮಾನಂದ ಗುರೂಜಿ ವೇದಿಕೆಯಲ್ಲಿದ್ದರು.
ಭಜನೆ, ಜಾನಪದ ಹಾಡು, ಭಾವಗೀತೆ, ತತ್ವಪದ ಗಾಯನ, ವಚನ ಗಾಯನ, ಭರತನಾಟ್ಯ, ಬುಡಕಟ್ಟು ನೃತ್ಯ, ಹಾಸ್ಯ, ಏಕಪಾತ್ರಾಭಿನಯ, ಜನಪದ ನೃತ್ಯ ಪ್ರದರ್ಶನಗೊಂಡಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್ ಡಿ ರೇವಣ್ಣಗೆ ಬಿಗ್ ರಿಲೀಫ್..!

ಬೆಂಗಳೂರು: ಮಾಜಿ ಸಚಿವ ಹೆಚ್ ಡಿ ರೇವಣ್ಣಗೆ ಕೋರ್ಟ್ ಬಿಗ್ ರಿಲೀಫ್ ನೀಡಿದೆ. 42ನೇ ಎಸಿಎಂಎಂ ಕೋರ್ಟ್ ನಿಂದ ಜಾಮೀನು ಮಂಜೂರಾಗಿದೆ. ಯುವತಿಯ ಕಿಡ್ನ್ಯಾಪ್ ಪ್ರಕರಣ ಸಂಬಂಧ ಜೈಲು ಪಾಲಾಗಿದ್ದ ರೇವಣ್ಣ ಅವರು ಮಧ್ಯಂತರ

ಚಿತ್ರದುರ್ಗದಲ್ಲಿ ಹೊಸ ಡಯಾಲಿಸಿಸ್ ಕೇಂದ್ರ ಪ್ರಾರಂಭ : ನೊಂದಾಯಿತ ರೋಗಿಗಳಿಗೆ ಉಚಿತ ಸೇವೆ

ಚಿತ್ರದುರ್ಗ. ಮೇ.20: ನಗರದ ಜಿಲ್ಲಾಸ್ಪತ್ರೆಯಲ್ಲಿ ಫೆಬ್ರುವರಿ 5 ರಿಂದ ಅಂತರಾಷ್ಟ್ರೀಯ ಗುಣಮಟ್ಟದ 15 ಹೊಸ ಡಯಾಲಿಸೀಸ್ ಯಂತ್ರಗಳೊಂದಿಗೆ ಡಯಾಲಿಸೀಸ್ ಕೇಂದ್ರವನ್ನು ಪ್ರಾರಂಭಿಸಲಾಗಿದೆ. ಎಲ್ಲಾ ನೊಂದಾಯಿತ ರೋಗಿಗಳಿಗೆ ಉಚಿತವಾಗಿ ಹಾಗೂ ಪ್ರತಿಯೊಬ್ಬ ರೋಗಿಗೂ ಪ್ರತ್ಯೇಕಾವಾದ ಡಿಸ್ಪೋಸಿಬಲ್

error: Content is protected !!