ಫೆಬ್ರವರಿ 17ರಂದು ಕಂಕಣ ಸೂರ್ಯಗ್ರಹಣ ಸಂಭವಿಸಲಿದೆ.ಸೂರ್ಯಗ್ರಹಣ ಭಾರತೀಯ ಕಾಲಮಾನದ ಪ್ರಕಾರ ಮಧ್ಯಾಹ್ನ 3:26ಕ್ಕೆ ಆರಂಭವಾಗಿ ಸಂಜೆ 7:57ಕ್ಕೆ ಮುಕ್ತಾಯಗೊಳ್ಳುತ್ತದೆ.ಗರಿಷ್ಠ ಹಂತವು ಸುಮಾರು 2 ನಿಮಿಷ 20 ಸೆಕೆಂಡುಗಳ ಕಾಲ ಮುಂದುವರಿದು, ಬಳಿಕ ಗ್ರಹಣ ಕ್ರಮೇಣ ಕ್ಷೀಣಿಸಿ ಅಂತ್ಯಗೊಳ್ಳುತ್ತದೆ.
ಭಾರತದಲ್ಲಿ ಈ ಗ್ರಹಣ ಗೋಚರಿಸದ ಕಾರಣ ಸೂತಕ ಇರುವುದಿಲ್ಲ. ಅಮೆರಿಕದ ನಾಸಾ ಸಂಸ್ಥೆ ಇದರ ನೇರಪ್ರಸಾರ ಮಾಡುವ ಸಾಧ್ಯತೆಯಿದೆ, ಮನೆಯಲ್ಲೇ ಆನ್‌ಲೈನ್ ಮೂಲಕ ವೀಕ್ಷಿಸಬಹುದು.
ಕಂಕಣ ಸೂರ್ಯಗ್ರಹಣವು ಸೂರ್ಯ, ಚಂದ್ರ ಮತ್ತು ಭೂಮಿ ಒಂದೇ ಸರಳ ರೇಖೆಯಲ್ಲಿ ಬಂದಾಗ ಉಂಟಾಗುತ್ತದೆ. ಆದರೆ ಚಂದ್ರನು ಭೂಮಿಯಿಂದ ಸ್ವಲ್ಪ ದೂರದಲ್ಲಿರುವ ಕಾರಣ ಸೂರ್ಯನಿಗಿಂತ ಸಣ್ಣದಾಗಿ ಕಾಣುತ್ತದೆ. ಈ ಕಾರಣದಿಂದ ಸೂರ್ಯನನ್ನು ಸಂಪೂರ್ಣ ಮುಚ್ಚಲು ಸಾಧ್ಯವಾಗದೆ, ಸೂರ್ಯನ ಸುತ್ತಲೂ ಉಂಗುರದ ಆಕಾರದಲ್ಲಿ ಬೆಳಕು ಕಾಣಿಸುತ್ತದೆ. ಈ ವೇಳೆ ಚಂದ್ರನು ಸೂರ್ಯನನ್ನು ಸಂಪೂರ್ಣ ಮುಚ್ಚದೆ, ಸೂರ್ಯನ ಅಂಚುಗಳು ಬೆಂಕಿಯ ಉಂಗುರದಂತೆ ಹೊಳೆಯುತ್ತವೆ. ಈ ದೃಶ್ಯವನ್ನು “ರಿಂಗ್ ಆಫ್ ಫೈರ್” ಎಂದು ಕರೆಯಲ್ಪಡುತ್ತದೆ.


