ರಾಯಚೂರು: ಮಂತ್ರಾಲಯದ ಆವರಣದಲ್ಲಿದ್ದ ಹಳೆಯ ಮರ ಉರುಳಿದೆ. ಈ ಮರಕ್ಕೆ ಬಹಳಷ್ಟು ವರ್ಷಗಳ ಇತಿಹಾಸವಿತ್ತು ಎನ್ನಲಾಗಿದೆ. ಮಠದ ಪ್ರಾಂಗಣದಲ್ಲಿಯೇ ಬಿದ್ದಿದೆ. ಈ ಮಠದ ಇತಿಹಾಸ ಸಾಕಷ್ಟು ವರ್ಷಗಳ ಹಳೆಯದ್ದಾಗಿದೆ.
ಈ ಮರ ಸುಮಾರು 250 ವರ್ಷಗಳ ಇತಿಹಾಸವಿರುವ ಮರವಾಗಿದೆ. ಈ ಬೃಹತ್ ಮರ ಜಮ್ಮಿ ಮರ ಎನ್ನಲಾಗಿದೆ. ಈ ಮರಕ್ಕೆ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳು ಪೂಜೆ ಮಾಡುತ್ತಿದ್ದರಂತೆ. ಮಠಕ್ಕೆ ಹೋದವರೆಲ್ಲಾ ರಾಯರ ದರ್ಶನ ಪಡೆದು, ಬಳಿಕ ಈ ಮರದ ದರ್ಶನ ಪಡೆಯುತ್ತಿದ್ದರು. ಇದೀಗ ಈ ಮರ ಉರುಳಿ ಬಿದ್ದಿದ್ದು, ಭಕ್ತರೆಲ್ಲ ಬಂದು ದರ್ಶನ ಪಡೆದಿದ್ದಾರೆ.
ಬೃಹತ್ ಮರವಾಗಿದ್ದು, ಬಿದ್ದಾಗ ಮರದ ಕೆಳಗೆ ಯಾವುದೇ ಭಕ್ತರು ಇರಲಿಲ್ಲ. ಹೀಗಾಗಿ ಯಾವುದೇ ಅನಾಹುತ ಸಂಭವಿಸಿಲ್ಲ. ಸದ್ಯ ಮಠದ ಪ್ರಾಂಗಣದಲ್ಲಿ ಬಿದ್ದ ಮರವನ್ನು ಭಕ್ತರು ಮತ್ತು ಸಿಬ್ಬಂದಿಗಳ ಸಹಾಯದಿಂದ ತೆರವುಗೊಳಿಸಿದ್ದಾರೆ. ಈ ಮರ ಸುಮಾರು 250 ವರ್ಷಗಳ ಹಳೆಯದ್ದಾಗಿದೆ.