ಡಿಸೆಂಬರ್ 25.. ಕ್ರಿಸ್ಮಸ್ ಹಬ್ಬದಂದು ಕಿಚ್ಚ ಸುದೀಪ್ ಅಭಿನಯದ ಮ್ಯಾಕ್ಸ್ ಸಿನಿಮಾ ರಿಲೀಸ್ ಆಗಿತ್ತು. ಮೊದಲ ದಿನವೇ ದೊಡ್ಡಮಟ್ಟದಲ್ಲಿ ಯಶಸ್ಸನ್ನು ಗಳಿಸಿದೆ. ಮ್ಯಾಕ್ಸಿಮಮ್ ಮಾಸ್ ಸಿನಿಮಾವನ್ನು ಮಾಸ್ ಪ್ರಿಯರು ಹೊಗಳುತ್ತಿದ್ದಾರೆ. ಭರ್ಹರಿ ರೆಸ್ಪಾನ್ಸ್ ಸಿಕ್ಕ ಖುಷಿಯಲ್ಲಿ ಕಿಚ್ಚ ಸುದೀಪ್ ಆತ್ಮೀಯರೊಟ್ಟಿಗೆ ಪಾರ್ಟಿ ಮಾಡಿದ್ದಾರೆ. ಈ ಪಾರ್ಟಿ ಫೋಟೋ ಎಲ್ಲೆಡೆ ವೈರಲ್ ಆಗಿದೆ.
ಯಾಕಂದ್ರೆ ಕಿಚ್ಚ ಸುದೀಪ್ ಅವರ ಸಿನಿಮಾ ಬಂದು ಎರಡೂವರೆ ವರ್ಷವಾಗಿತ್ತು. ತಡವಾದರೂ ಒಂದೊಳ್ಳೆ ಸಿನಿಮಾ ನೀಡಿದ್ದಾರೆಂದು ಫ್ಯಾನ್ಸ್ ಖುಷಿ ಪಟ್ಟಿದ್ದಾರೆ. ಸಕ್ಸಸ್ ಪಾರ್ಟಿಯಲ್ಲಿ ಕೇಕ್ ಒಂದನ್ನ ಕಟ್ ಮಾಡಿಸಿದ್ದು, ಆ ಕೇಕ್ ಈಗ ಗಮನ ಸೆಳೆಯುತ್ತಿದೆ. ಅದರಲ್ಲಿ ‘ಬಾಸಿಸಂ ಕಾಲ ಮುಗೀತು.. ಮ್ಯಾಕ್ಸಿಮಮ್ ಮಾಸ್ ಕಾಲ ಶುರುವಾಯ್ತು’ ಎಂದು ಬರೆದ ಕೇಕ್ ಕಟ್ ಮಾಡಿದ್ದಾರೆ. ಈ ಪಾರ್ಟಿ ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಪಾರ್ಟಿಯಲ್ಲಿ ಜಯರಾಮ್ ಕಾರ್ತಿಕ್, ಕಾರ್ತಿಕ್ ಮಹೇಶ್, ಸಪ್ತಮಿ ಗೌಡ ಸೇರಿದಂತೆ ಅನೇಕ ಆತ್ಮೀಯರು ಭಾಗಿಯಾಗಿದ್ದರು. ಇನ್ನು ಸಿನಿಮಾಗೂ ಮುಂಚೆ ಪ್ರಮೋಷನ್ ಗೂ ಇಡೀ ಇಂಡಸ್ಟ್ರಿಯ ಸ್ಟಾರ್ ಗಳೆಲ್ಲಾ ಜೊತೆಗೂಡಿ ಸಿನಿಮಾ ಪ್ರಮೋಷನ್ ಮಾಡಿದ್ದರು. ಒಗ್ಗಟ್ಟನ್ನ ಪ್ರದರ್ಶಿಸಿದ್ದರು.
ಮ್ಯಾಕ್ಸ್ ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರ ನಿರ್ವಹಿಸಿದ್ದಾರೆ. ಸಿನಿಮಾದ ಕಥೆ ರೆಗ್ಯುಲರ್ ಆಗುದ್ದರು ಇಷ್ಟೊಂದು ಸಕ್ಸಸ್ ಆಗುವುದಕ್ಕೆ ಕಾರಣ ಸುದೀಪ್ ನಟನೆ. ತಮ್ಮ ಕಲೆಯಿಂದಾನೇ ಕಥೆಗೊಂದು ತೂಕ ತರಿಸಿದ್ದಾರೆ. ಇದೇ ಎಲ್ಲರನ್ನು ಸೆಳೆದಿದೆ. ತಮಿಳಿನ ವಿಜಯ್ ಕಾರ್ತಿಕೇಯನ್ ಮ್ಯಾಕ್ಸ್ ಸಿನಿಮಾವನ್ನು ನಿರ್ದೇಶನ ಮಾಡಿದ್ದಾರೆ.