ಬೆಳಗಾವಿ: ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ಯಾವಾಗಲೂ ಕೆಂಡಕಾರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಈ ಬಾರಿಯ ಚುನಾವಣೆಯಲ್ಲಿ ಒಂದೊಂದು ಮತಕ್ಕೆ ಆರು ಸಾವಿರ ಹಣ ಕೊಡುತ್ತೇನೆ ಎಂದಿದ್ದ ವಿಚಾರ ವೈರಲ್ ಆಗಿತ್ತು. ಆ ವಿಚಾರ ಸಾಕಷ್ಟು ಚರ್ಚೆಗೂ ಗ್ರಾಸವಾಗಿತ್ತು. ಅದೇ ಸುದ್ದಿಯನ್ನು ಆಧಾರವಾಗಿಟ್ಟುಕೊಂಡು ಇದೀಗ ಕಾಂಗ್ರೆಸ್ ನಾಯಕರು ಬೆಂಗಳೂರಿನಲ್ಲಿ ದೂರನ್ನು ದಾಖಲಿಸಿದ್ದಾರೆ.
ದೂರು ದಾಖಲಾದ ಬೆನ್ನಲ್ಲೇ, ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸುದ್ದಿಗೋಷ್ಟಿ ಕರೆದು ಸ್ಪಷ್ಟನೆ ನೀಡಿದ್ದಾರೆ. ಜೊತೆಗೆ ಡಿಕೆ ಶಿವಕುಮಾರ್ ಅವರ ರಾಜಕೀಯ ಭವಿಷ್ಯಕ್ಕೆ ನಾನೇ ಅಂತ್ಯವಾಡುವುದು ಎಂದು ಸವಾಲನ್ನು ಹಾಕಿದ್ದಾರೆ.
ನಾನು ಒಂದು ವೋಟಿಗೆ ಆರು ಸಾವಿರ ಹಣ ಕೊಡುತ್ತೀನಿ ಅಂತ ಹೇಳಿಲ್ಲ. ನಾನು ಆರನೇ ಅವಧಿಗೆ ಶಾಸನಾಗಿದ್ದೇನೆ. ನನಗೂ ಕಾನೂನಿನ ಅರಿವಿದೆ. ಬೆಳಗಾವಿ ಗ್ರಾಮೀಣ ಶಾಸಕರು ನೇರವಾಗಿಯೇ ಹಣ ಹಂಚುತ್ತಿದ್ದಾರೆ. ಹಾಗಾದರೆ ಅದಿ ಆಮಿಷವೊಡ್ಡಿದ್ದಂತೆ ಅಲ್ವಾ. ನಾನು ಹೇಳಿದ ಹೇಳಿಕೆಯನ್ನು ಟ್ವಿಸ್ಟ್ ಮಾಡಲಾಗಿದೆ. ನಾನು ಅಭಿವೃದ್ಧಿಗಾಗಿ ಹಣ ಕೊಡುತ್ತೇನೆ ಅಂತ ಹೇಳಿದ್ದು. ಆರು ಸಾವಿರದಿಂದ ಹತ್ತು ಸಾವಿರ ಕೋಟಿ ತನಕ ಹಣ ಖರ್ಚಾಗಲಿ ಅಂತ ಬೇರೆ ಉದ್ದೇಶಕ್ಕೆ ಹೇಳಿದ್ದು.
ಇನ್ನು ನನ್ನ ಒಬ್ಬನ ಮೇಲೆಯೇ ಕೇಸ್ ಮಾಡಬಹುದಿತ್ತು. ಮುಖ್ಯಮಂತ್ರಿಯ ಮೇಲೆ ಯಾಕೆ ಮಾಡಬೇಕಿತ್ತು. ಡಿಕೆ ಶಿವಕುಮಾರ್ ಅವರಿಗೆ ರಮೇಶ್ ಜಾರಕಿಹೊಳಿ ಕಂಡರೆ ಹೆದರಿಕೆ ಇದೆಯಲ್ಲ. ಅದು ಬಹಳ ಸಂತೋಷ. ನಾನು ಮಂತ್ರಿ ಬೇಡ ಅಂತ ಹೇಳಿದ್ದೇನೆ. ಪೂರ್ಣ ಪ್ರಮಾಣದಲ್ಲಿ ಪಕ್ಷ ಅಧಿಕಾರಕ್ಕೆ ಬಂದ ನಂತರವಷ್ಟೆ ಮಂತ್ರಿ ಸ್ಥಾನ ಕೇಳುತ್ತೇನೆ ಎಂದಿದ್ದಾರೆ.