ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘನೆ ಮಾಡಿದವರಿಗೆ ದಂಡ ಕಟ್ಟುವುದಕ್ಕೆ ಎಷ್ಟೆ ಸಲ ಹೇಳಿದರು, ದಂಡ ಕಟ್ಟುವ ಉಸಾಬರಿಗೆ ಹೋಗಲ್ಲ. ಆದರೆ ಕಳೆದ ಬಾರಿ 50% ಡಿಸ್ಕೌಂಟ್ ನೀಡಲಾಗಿತ್ತು. ಅದು ಲಿಮಿಟೇಷನ್ ಇತ್ತು ಸಮಯ. ಹೀಗಾಗಿ ಸಾಕಷ್ಟು ಕಟ್ಟೋದಕ್ಕೆ ಆಗಲಿಲ್ಲ. ಇದೀಗ ಮತ್ತೆ ಆ ಆಫರ್ ಬಂದಿದೆ.
50% ದಂಡ ಪಾವತಿಮಾಡುವುದಕ್ಕೆ ಅವಕಾಶ ನೀಡಿದ್ದು, ಫೆಬ್ರವರಿ 11ರ 2023ರ ಒಳಗೆ ಇತ್ಯರ್ಥಗೊಳ್ಳುವ ಪ್ರಕರಣಗಳಿಗೆ ಮಾತ್ರ ಅನ್ವಯವಾಗುವಂತೆ ಆದೇಶ ನೀಡಲಾಗಿದೆ. ಇನ್ನು ಈ ರಿಯಾಯಿತಿಯನ್ನು ಸೆಪ್ಟೆಂಬರ್ 9ರವರೆಗೆ ಅವಕಾಶ ನೀಡಲಾಗಿದೆ.
ಹೈಕೋರ್ಟ್ ನ್ಯಾಯಾಧೀಶರು ಮತ್ತು ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರ ನೇತೃತ್ವದಲ್ಲಿ ಜೂನ್ 14ರಂದು ನಡೆದ ಸಭೆಯ ನಡವಳಿಗಳಲ್ಲಿ ಪೂಲೀಸ್ ಇಲಾಖೆಯಲ್ಲಿ ಸಂಚಾರಿ ಇ-ಚಲನ್‌ನಲ್ಲಿ ದಾಖಲಾಗಿರುವ ಪ್ರಕರಣಗಳಿಗೆ ದಂಡದ ಮೊತ್ತಕ್ಕೆ ರಿಯಾಯಿತಿ ನೀಡಲು ಕ್ರಮಕೈಗೊಳ್ಳುವಂತೆ ಕೋರಲಾಗಿತ್ತು. ಅದರಂತೆ ರಿಯಾಯಿತಿ ದರದಲ್ಲಿ ದಂಡ ಪಾವತಿಗೆ ಅವಕಾಶ ನೀಡುವ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.