ಚಿತ್ರದುರ್ಗ : ಸಿಡಿಲು ಬಡಿದು ಕುರಿಗಾಹಿಯೊಬ್ಬ ಸ್ಥಳದಲ್ಲೆ ಮೃತಪಟ್ಟ ಘಟನೆ ಜಿಲ್ಲೆಯ ಚಳ್ಳಕೆರೆ ತಾಲ್ಲೂಕು ತಳಕು ಹೋಬಳಿಯ ದೇವರೆಡ್ಡಿಹಳ್ಳಿ ಗ್ರಾಮದಲ್ಲಿ ಭಾನುವಾರ ಸಂಜೆ ನಡೆದಿದೆ.
ಮೃತ ಯುವಕ ಯಶವಂತ(19).
ಭಾನುವಾರ ಸಂಜೆ 4:00 ಗಂಟೆಗೆ ಈ ಘಟನೆ ನಡೆದಿದ್ದು, ಕುರಿಕಾಯಲು ಹೋಗಿದ್ದ ಯುವಕ ಕುರಿಗಳನ್ನು ಮರಳಿ ಮನೆಕಡೆಗೆ ವಾಪಸ್ ಬರುವಾಗ ದೇವರೆಡ್ಡಿ ಹಳ್ಳಿ ಗ್ರಾಮದ ಹೊರವಲಯದಲ್ಲಿ ಹುಣಸೆಮರದ ಕೆಳಗಡೆ ನಿಂತಿದ್ದಾನೆ.
ಇದೇವೇಳೆ ಸಿಡಿಲು ಬಡಿದು ಸ್ಥಳದಲ್ಲೆ ಮೃತಪಟ್ಟಿದ್ದಾನೆ. ವಿಷಯ ತಿಳಿದು ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ, ತಳಕು ಪಿಎಸ್ ಐ. ಮಾರುತಿ ಸ್ಥಳಕ್ಕೆ ಭೇಟಿನೀಡಿ ಪರಿಶೀಲಿಸಿದ್ದಾರೆ.






GIPHY App Key not set. Please check settings