ದೇಶದ್ರೋಹಿಗಳನ್ನು ಸದೆ ಬಡಿಯದಿದ್ದರೆ ದೇಶಕ್ಕೆ ಅಪಾಯವಿದೆ : ಡಾ. ಸಿದ್ದಾರ್ಥ ಗುಂಡಾರ್ಪಿ

ವರದಿ ಮತ್ತು ಫೋಟೋ :
ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 7899864552

ಚಿತ್ರದುರ್ಗ,(ಸೆ.25) : ವಿಶ್ವದಲ್ಲಿ ಬಿಜೆಪಿ ದೊಡ್ಡ ಪಕ್ಷವಾಗಿ ಬೆಳೆಯಲು ಪಂಡಿತ್ ದೀನ್ ದಯಾಳ್ ಉಪಾಧ್ಯ ಕಾರಣರು ಎಂದು ವಿಧಾನಪರಿಷತ್ ಸದಸ್ಯ ಕೆ.ಎಸ್.ನವೀನ್ ಹೇಳಿದರು.

ನಗರ ಮಂಡಲ ಅಧ್ಯಕ್ಷ ನವೀನ್ ಚಾಲುಕ್ಯ ಅಧ್ಯಕ್ಷತೆಯಲ್ಲಿ ಬಿಜೆಪಿ ಕಚೇರಿಯಲ್ಲಿ ಭಾನುವಾರ ನಡೆದ ಪಂಡಿತ್ ದೀನ್ ದಯಾಳ್ ಉಪಾಧ್ಯರವರ 108 ನೇ ಜಯಂತಿಯಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಪಕ್ಷದ ಆರು ಕಾರ್ಯಕ್ರಮಗಳಲ್ಲಿ ಪಂಡಿತ್ ದೀನ್ ದಯಾಳ್ ಉಪಾಧ್ಯರವರ ಜಯಂತಿಯೂ ಒಂದು. ಪ್ರತಿ ಬೂತ್‍ನಲ್ಲಿ ನಡೆಯುತ್ತದೆ. ದೇಶಭಕ್ತಿ, ರಾಷ್ಟ್ರಭಕ್ತಿಯುಳ್ಳವರಾಗಿದ್ದ ಅವರದು ಸರಳ ಜೀವನ. ಬಡತನ ನಿವಾರಣೆಗೆ ಸದಾ ಚಿಂತಿಸುತ್ತಿದ್ದರು. ಅಂತ್ಯೋದಯ, ಏಕ ಮಾನವತಾವಾದದ ಮೂಲಕ ಭಾರತವನ್ನು ವಿಶ್ವಗುರವನ್ನಾಗಿಸಬೇಕೆಂಬ ಕನಸು ಕಂಡಿದ್ದರು. ಅವರ ವಿಚಾರಗಳೇ ಪಕ್ಷದ ಕಾರ್ಯಕರ್ತರಿಗೆ ಹಾಗೂ ಮುಖಂಡರುಗಳಿಗೆ ತಳಹದಿಯಾಗಬೇಕು. ಪಕ್ಷದ ಎಲ್ಲರೂ ಪಂಡಿತ್ ದೀನ್ ದಯಾಳ್ ಉಪಾಧ್ಯರವರಂತಾಗಬೇಕು ಎಂದು ತಿಳಿಸಿದರು.

ಬಿಜೆಪಿ.ರಾಜ್ಯ ಕಾರ್ಯಕಾರಿಣಿ ಸದಸ್ಯ ಟಿ.ಜಿ.ನರೇಂದ್ರನಾಥ್ ಮಾತನಾಡಿ ಪಂಡಿತ್ ದೀನ ದಯಾಳ್ ಉಪಾಧ್ಯರವರು ಅಧಿಕಾರಕ್ಕಿಂತ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ಕೊಡುತ್ತಿದ್ದರೆಂದು ಹೇಳಿದರು.

ಭಾರತೀಯ ಜನಸಂಘದ ಮೂಲಕ ಬೆಳೆದ ಅವರು ಚಿಕ್ಕಂದಿನಲ್ಲಿಯೇ ತಂದೆ ತಾಯಿಯನ್ನು ಕಳೆದುಕೊಂಡು ಅನೇಕ ಕಷ್ಟಗಳನ್ನು ಎದುರಿಸಿ ರಾಷ್ಟ್ರೀಯತೆಯನ್ನು ಮೈಗೂಡಿಸಿಕೊಂಡು ನಿಂತವರು. ಅನೇಕ ವಿಚಾರಗಳನ್ನು ತಿಳಿದುಕೊಂಡಿದ್ದರು ಎಂದು ಸ್ಮರಿಸಿದರು.

ಸರಳ ಜೀವನ, ಸಂಘಟನೆಯ ಚತುರತೆಯುಳ್ಳವರಾಗಿದ್ದ ಅವರಲ್ಲಿ ಸಂಸ್ಕಾರ ಸಂಸ್ಕøತಿಯಿತ್ತು. ಪಾರ್ಟಿ ಕಟ್ಟಿದ ಕೆಲವೇ ಕೆಲವರಲ್ಲಿ ಪಂಡಿತ್ ದೀನ ದಯಾಳ್ ಉಪಾಧ್ಯ ಒಬ್ಬರಾಗಿದ್ದರು. ಕಾಂಗ್ರೆಸ್ ಬರೀ ಓಟ್ ಬ್ಯಾಂಕ್ ರಾಜಕಾರಣ ಮಾಡಿಕೊಂಡು ಬಂದಿತು. ಕಾರ್ಯಕರ್ತರ ಜೊತೆ ಸದಾ ಖುಷಿಯಾಗಿರುತ್ತಿದ್ದರು. ಎಲ್ಲಿಯೂ ಅಹಂಕಾರ ಮಾಡುತ್ತಿರಲಿಲ್ಲ. ದೇಶಕ್ಕೆ ಅಪಾರ ಕೊಡುಗೆ ನೀಡಿದ್ದ ಅವರ ಆದರ್ಶ ತತ್ವ ಸಿದ್ದಾಂತಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಕಾರ್ಯಕರ್ತರಿಗೆ ತಿಳಿಸಿದರು.

ಯುವ ಮುಖಂಡ ಡಾ.ಸಿದ್ದಾರ್ಥ ಗುಂಡಾರ್ಪಿ ಮಾತನಾಡುತ್ತ ಯುವಕರಿಗೆ ಪಂಡಿತ್ ದೀನ ದಯಾಳ್ ಉಪಾಧ್ಯರವರ ವಿಚಾರ ಧಾರೆಗಳನ್ನು ತಿಳಿಸಬೇಕು. ದೇಶ ಮತ್ತು ಪಕ್ಷಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಅವರ ಸಾವು ಮಾತ್ರ ಇಂದಿಗೂ ನಿಗೂಢವಾಗಿದೆ. ಪಕ್ಷವನ್ನು ಸಂಘಟನೆ ಮಾಡಿ ದೇಶದ್ರೋಹಿಗಳನ್ನು ಸದೆ ಬಡಿಯದಿದ್ದರೆ ಮುಂದೆ ದೇಶ ಅಪಾಯವನ್ನು ಎದುರಿಸಬೇಕಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ ಒಳ್ಳೆ ಕೆಲಸಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸುವ ಮೂಲಕ ಮುಂಬರುವ ಎಲ್ಲಾ ಚುನಾವಣೆಗಳಲ್ಲಿಯೂ ಭಾರತೀಯ ಜನತಾಪಕ್ಷವನ್ನು ಗೆಲ್ಲಿಸುವ ನಿಟ್ಟಿನಲ್ಲಿ ಕಾರ್ಯಕರ್ತರು ಈಗಿನಿಂದಲೇ ಪ್ರಾಮಾಣಿಕವಾಗಿ ಕೆಲಸ ಮಾಡುವಂತೆ ಕರೆ ನೀಡಿದರು.

ಜಿಜೆಪಿ.ಜಿಲ್ಲಾಧ್ಯಕ್ಷ ಎ.ಮುರಳಿ ಮಾತನಾಡಿ ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ.ಅಧಿಕಾರದಲ್ಲಿದೆ ಎಂದರೆ ಅದು ಪಂಡಿತ್ ದೀನ್ ದಯಾಳ್‍ರವರು ಪಟ್ಟ ಶ್ರಮದ ಫಲ. ಅವರ ಜೀವನ ಚರಿತ್ರೆಯನ್ನು ಓದಿದರೆ ಬಿಜೆಪಿ.ಯನ್ನು ತಿಳಿದುಕೊಂಡಂತಾಗುತ್ತದೆ. ಏಕಾತ್ಮ ಮಾನವತಾವಾದ ಅವರದು. ಚಿಕ್ಕ ವಯಸ್ಸಿನಲ್ಲಿ ಅಪ್ಪ ಅಮ್ಮನನ್ನು ಕಳೆದುಕೊಂಡು ಮಾನವ ಆಸರೆಯಲ್ಲಿ ಬೆಳೆದ ಪಂಡಿತ್ ದೀನ್ ದಯಾಳ್ ಉಪಾಧ್ಯ ಸಾಕಷ್ಟು ಕಷ್ಟ ಅನುಭವಿಸಿದರೂ ಓದಿನಲ್ಲಿ ಚುರುಕಾಗಿದ್ದರು. ಒಕ್ಕೂಟದ ವ್ಯವಸ್ಥೆಯಲ್ಲಿ ದೇಶವನ್ನು ಮುನ್ನಡೆಸಬೇಕೆಂಬ ಆಸೆ ಅವರದಾಗಿತ್ತು ಎಂದರು.

ದುರ್ಬಲರ ಸೇವೆಗಾಗಿ ಜೀವನವನ್ನೇ ಮುಡುಪಾಗಿಟ್ಟ ಪಂಡಿತ್ ದೀನ್ ದಯಾಳ್ ಉಪಾಧ್ಯ ಅಂತ್ಯೋದಯದ ಕನಸು ಕಂಡಿದ್ದರು. ಅದನ್ನು ಈಗಿನ ಪ್ರಧಾನಿ ಮೋದಿ ನೆರವೇರಿಸಿದ್ದಾರೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಚಾಕರಾಗಿ ಕೆಲಸ ಮಾಡಿದರು. ನಿರಂತರ ಪುಸ್ತಕ ಓದುತ್ತಿದ್ದ ಅವರಲ್ಲಿ ಬದ್ದತೆ, ಶಿಸ್ತಿತ್ತು. ಇಡಿ ಸಮಾಜಕ್ಕೆ ಜಾಗೃತಿ ಮೂಡಿಸುತ್ತಿದ್ದರು. ಅಭ್ಯಾಸ ವರ್ಗಗಳನ್ನು ನಡೆಸುತ್ತಿದ್ದರು. ಮಾಶಾಸನ, ವೃದ್ದಾಪ್ಯ ವೇತನ, ದೀನ ದುರ್ಬಲರಿಗೆ ಸಹಾಯ ಮಾಡಬೇಕೆಂಬ ತುಡಿತವಿತ್ತು. ಅವರ ಸಿದ್ದಾಂತ, ಮಾರ್ಗದಲ್ಲಿ ಪಕ್ಷ ಇಂದಿಗೂ ಮುನ್ನಡೆಯುತ್ತಿದೆ. ಸಮರ್ಪಣೆ, ತ್ಯಾಗ ಮನೋಭಾವವಿತ್ತು. ಜಾತಿ ವ್ಯವಸ್ಥೆ ಮೇಲೆ ಚುನಾವಣೆ ನಡೆಯಬಾರದು ಎನ್ನುವ ಪರಿಕಲ್ಪನೆಯುಳ್ಳವರಾಗಿದ್ದರು. ಬಿಜೆಪಿ.ಕೇವಲ ಚುನಾವಣೆ, ಅಧಿಕಾರಕ್ಕಾಗಿ ಅಲ್ಲ. ದೇಶದ ಅಖಂಡತೆ ಮುಖ್ಯ ಎನ್ನುವುದನ್ನು ಸಾರಿದ್ದರು ಎಂದು ಹೇಳಿದರು.

ಹಿರಿಯ ಮುಖಂಡ ಕೆ.ಶಿವಣ್ಣಾಚಾರ್ ಮಾತನಾಡಿದರು.
ಪ್ರಧಾನ ಕಾರ್ಯದರ್ಶಿ ನರೇಂದ್ರ, ಉಪಾಧ್ಯಕ್ಷೆ ಚಂದ್ರಿಕಾ ಲೋಕನಾಥ್, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್‍ಸಿದ್ದಾಪುರ, ವಕ್ತಾರ ನಾಗರಾಜ್‍ಬೇದ್ರೆ ವೇದಿಕೆಯಲ್ಲಿದ್ದರು.

ಕೋಶಾಧ್ಯಕ್ಷ ಮಾದುರಿ ಗಿರೀಶ್, ನಗರಸಭೆ ಉಪಾಧ್ಯಕ್ಷೆ ಮಂಜುಳ ವೇದಮೂರ್ತಿ, ವಕ್ತಾರ ನಾಗರಾಜ್‍ಬೇದ್ರೆ  ಸ್ಥಾಯಿ ಸಮಿತಿ ಅಧ್ಯಕ್ಷ ಶ್ರೀನಿವಾಸ್, ಸದಸ್ಯರುಗಳಾದ ವೆಂಕಟೇಶ್, ಸುರೇಶ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶೈಲಜಾರೆಡ್ಡಿ, ಮಾಜಿ ಅಧ್ಯಕ್ಷೆ ಶ್ಯಾಮಲ ಶಿವಪ್ರಕಾಶ್, ಬಿಜೆಪಿ.ನಗರ ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕಿರಣ್, ವೆಂಕಟೇಶ್, ಸಂಪತ್, ಕಲ್ಲೇಶಯ್ಯ ಇನ್ನು ಮುಂತಾದವರು ಈ ಸಂದರ್ಭದಲ್ಲಿ ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!