ಬೆಂಗಳೂರು: ಪದವೀಧರ ಕ್ಷೇತ್ರದಲ್ಲಿ ಎರಡು ಕ್ಷೇತ್ರದಲ್ಲಿ ಕಾಂಗ್ರೆಸ್ ಗೆಲುವುದ ಸಾಧಿಸಿದೆ. ನಾಲ್ಕು ಕ್ಷೇತ್ರದಲ್ಲಿ ಯಾಕೆ ಗೆಲ್ಲಲಿಲ್ಲ ಎಂಬುದಕ್ಕೆ ಪ್ರತಿಕ್ರಿಯೆ ನೀಡಿದ್ದು, ಅಲ್ಲಿ ಏನು ಇರಲಿಲ್ಲ. ನಾವಿದ್ದು ಅಲ್ಲಿ ಜೀರೋ. ಈಗ ಬಿಜೆಪಿ ಅವರು ಪಶ್ಚಿಮದಲ್ಲಿ ಹೊರಟ್ಟಿಯವರು ಗೆದ್ದಿದ್ದಾರಲ್ಲ, ಅವರು ವೈಯಕ್ತಿಕ ವರ್ಚಸ್ಸಿನಿಂದ ಗೆದ್ದಿರುವುದು. ಬಿಜೆಪಿ ಅಲ್ಲಿ ಗೆದ್ದೆ ಇರಲಿಲ್ಲ. ಜೆಡಿಎಸ್ ನಿಂದ ಮೂರು ಸಾರಿ ಗೆದ್ದಿದ್ದರು ಎಂದಿದ್ದಾರೆ.
ಹೊರಟ್ಟಿ ಮೂರು ಸಲ ಜೆಡಿಎಸ್ ನಲ್ಲಿದ್ದು ಗೆದ್ದವರು. ಹಾಗಂತ ಜೆಡಿಎಸ್ ನಿಂದ ಗೆದ್ದಿದ್ದರು ಎಂದಲ್ಲ, ವೈಯಕ್ತಿಕ ವರ್ಚಸ್ಸಿನ ಗೆಲುವು ಅದು. ಈಗಲೂ ಅದೇ ರೀತಿ ಗೆದ್ದಿರುವುದು ಬಿಜೆಪಿಯಿಂದ ಗೆದ್ದಿದ್ದಾರೆ ಅಂತ ಹೇಳಲು ಬರುವುದಿಲ್ಲ. ಹೀಗಾಗಿ ನಮ್ಮ ಅಭ್ಯರ್ಥಿ ವಿಚಾರದಲ್ಲಿ ಬೆಳಗಾವಿಯಲ್ಲಿ ಪದವಿಧರ ಕ್ಷೇತ್ರದಿಂದ ತುಂಬಾ ಸ್ಟ್ರಾಂಗ್ ಅಭ್ಯರ್ಥಿ ಹಾಕಲು ಸಾಧ್ಯವಾಗಲಿಲ್ಲ. ಕೊನೆಗಳಿಗೆಯಲ್ಲಿ ಅಥಣಿಯಲ್ಲಿ ಒಬ್ಬ ಲಾಯರ್ ನನ್ನು ನಿಲ್ಲಿಸಿದ್ದೆವು ಹಾಗಾಗಿ ಅವರು ಸೋಲುವಂತೆ ಬಂದಿತ್ತು.
ಆದರೆ ನಾವೂ ಗೆದ್ದಿರುವುದೆಲ್ಲಾ ದೊಡ್ಡ ಮಾರ್ಜಿನ್ ನಲ್ಲಿ ಗೆದ್ದಿದ್ದೇವೆ. ಏನು ಇರಲಿಲ್ಲ. ಎರಡು ಕಡೆ ಜೆಡಿಎಸ್, ಎರಡು ಕಡೆ ಬಿಜೆಪಿ. ಅಂಥ ಕಡೆ ಗೆದ್ದಿದ್ದೀವಿ ಅಂದ್ರೆ ಖುಷಿನೇ. ಪ್ರಜಾಪ್ರಭುತ್ವಕ್ಕೆ ಆಪತ್ತು ಬಂದಾಗ, ಸಂವಿಧಾನಕ್ಕೆ ಆಪತ್ತು ಬಂದಾಗ, ದೇಶಕ್ಕೆ ಆಪತ್ತು ಬಙದಾಗ ಅವುಗಳ ರಕ್ಷಣೆಗೆ ನಿಲ್ಲುತ್ತಾರೆ ಎಂಬುದು ಹಿಂದೆನೂ ಸಾಬೀತಾಗಿದೆ, ಈಗಲೂ ಸಾಬೀತಾಗಿದೆ, ಮುಂದೆನು ಸಾಬೀತಾಗುತ್ತದೆ ಎಂದಿದ್ದಾರೆ.