ಭಾರತದಂತಹ ದೇಶಕ್ಕೆ ಕೃತಕ ಬುದ್ಧಿವಂತಿಕೆ ಕೊಡುಗೆ ಅಪಾರ : ಡಾ ಸತ್ಯನಾರಾಯಣ

1 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ, ಮಾರ್ಚ್ . 01 : ಮುಂದಿನ ದಿನಗಳಲ್ಲಿ ಆರ್ಥಿಕವಾಗಿ ಮುಂದುವರಿಯುತ್ತಿರುವ ಭಾರತದಂತಹ ದೇಶಕ್ಕೆ ಕೃತಕ ಬುದ್ಧಿವಂತಿಕೆ ಕೊಡುಗೆ ಅಪಾರ. ಮಾರುಕಟ್ಟೆಯಲ್ಲಿ ಗ್ರಾಹಕರ ಅಭಿರುಚಿ, ವರ್ತನೆ, ಹವ್ಯಾಸಗಳನ್ನು ನಿರ್ಧಾರಿಸಲು ಮತ್ತು ಸಂಸ್ಥೆಯ ಉತ್ಪನ್ನಗಳನ್ನು ತಯಾರು ಮಾಡಲು ಕೃತಕ ಬುದ್ಧಿವಂತಿಕೆ ಹೆಚ್ಚು ಪರಿಣಾಮಕಾರಿ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ ಸತ್ಯನಾರಾಯಣ ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಕಲಾ ಕಾಲೇಜು (ಸ್ವಾಯತ್ತ) ಸ್ನಾತಕೋತ್ತರ ವಾಣಿಜ್ಯ ಮತ್ತು ಅರ್ಥಶಾಸ್ತ್ರ ವಿಭಾಗದ ವತಿಯಿಂದ ವಿದ್ಯಾರ್ಥಿಗಳಿಗೆ  ಹಮ್ಮಿಕೊಂಡಿದ್ದ ಒಂದು ದಿನದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು

ಕಾಲೇಜಿನ ಪ್ರಾಂಶುಪಾಲ ಪ್ರೋ. ಬಿ ಟಿ ತಿಪ್ಪೇರುದ್ರಸ್ವಾಮಿ ಮಾತನಾಡಿ, ಪ್ರಸ್ತುತ ಸಂದರ್ಭದಲ್ಲಿ ಕೃತಕ ಬುದ್ಧಿವಂತಿಕೆಯನ್ನು ಹಲವಾರು ಕ್ಷೇತ್ರಗಳಲ್ಲಿ  ಉಪಯೋಗಿಸುತ್ತಾರೆ. ಲಭ್ಯವಿರುವ ಸಂಪನ್ಮೂಲಗಳ ಪರಿಪೂರ್ಣ ಬಳಕೆ ಇದು ಹೆಚ್ಚು ಸಹಕಾರಿ ಆಗುತ್ತದೆ ಎಂದು ಅಭಿಪ್ರಾಯಪಟ್ಟರು.

ಅಧ್ಯಕ್ಷತೆಯನ್ನು ವಹಿಸಿದ ಪ್ರೋ. ರಾಜಶೇಖರಪ್ಪ ಜಿ.ಎಲ್ ಮಾನವನ ಸಂಬಂಧವನ್ನು ಇನ್ನು ಹತ್ತಿರ ತರಬಲ್ಲ ಸಾಧನವಾಗಿ ಕೃತಕ ಬುದ್ಧಿವಂತಿಕೆಯನ್ನು ಬಳಸಿಕೊಳ್ಳ ಬೇಕು ಎಂದು ಕಾರ್ಯಕ್ರಮ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.

ಸ್ನಾತಕೋತ್ತರ ವಾಣಿಜ್ಯ  ವಿಭಾಗದ ಮುಖ್ಯಸ್ಥರಾದ ಡಾ.ಲೀಲಾವತಿ ಕೆ ಮತ್ತು ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ ಗಂಗಾಧರ ಆರ್ ಮಾತಾಡಿದರು. ಆಂತರಿಕ ಗುಣಮಟ್ಟ ಕೋಶದ ಸಂಚಾಲಕರಾದ ಪ್ರೋ. ಸುರೇಶ್ ಜಿ ಡಿ, ಪ್ರಾಧ್ಯಾಪಕ ಡಾ ಭಾನುಪ್ರಕಾಶ ಕೆ.ಎ ಉಪಸ್ಥಿತರಿದ್ಧರು. ಡಾ.ಶಿವಕುಮಾರ್ ಬಿ ಸ್ವಾಗತಿಸಿದರು ಕು.ಫಾತಿಮ ಸುಫಿಯ ನಿರೂಪಿಸಿದರು. ಡಾ.ಗಂಗಾಧರ ವಂದಿಸಿದರು.

Share This Article
Leave a Comment

Leave a Reply

Your email address will not be published. Required fields are marked *