ವೃದ್ಧರು, ಅಂಗವಿಕಲರಿಗೆ ಮೊದಲ ಬಾರಿಗೆ ಮನೆಯಿಂದಾನೇ ಮತದಾನ ಮಾಡುವ ಅವಕಾಶ ನೀಡಿದ ಆಯೋಗ..!

 

 

ಬೆಂಗಳೂರು: ಇಂದು ಕೇಂದ್ರ ಚುನಾವಣಾ ಆಯೋಗ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದೆ. ಈ ವೇಳೆ ಕೇಂದ್ರ ಚುನಾವಣಾ ಆಯೋಗದ ಮುಖ್ಯಸ್ಥ ರಾಜೀವ್ ಕುಮಾರ್ ಮಾತನಾಡಿ, ಈ ಬಾರಿ 80 ವರ್ಷ ದಾಟಿದ ವೃದ್ಧರು ಹಾಗೂ ಅಂಗವಿಕಲರಿಗೆ ಮನೆಯಿಂದನೇ ಮತದಾನ ಮಾಡುವ ಅವಕಾಶ ನೀಡಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 12.50 ಲಕ್ಷ 80 ವರ್ಷ ಮೇಲ್ಪಟ್ಟ ವೃದ್ಧರಿದ್ದಾರೆ. 100 ವರ್ಷ ಮೇಲ್ಪಟ್ಟವರು 16,976 ಮತದಾರರಿದ್ದಾರೆ. ಇನ್ನು 5.55 ಲಕ್ಷ ಪಿಡಬ್ಲ್ಯುಡಿ ಮತದಾರರಿದ್ದಾರೆ. ಕರ್ನಾಟಕದಲ್ಲೂ ಶಾಂತಿಯುತ ಮತದಾನವಾಗುವ ಭರವಸೆ ಇದೆ. ಹಣ, ಆಮಿಷಗಳಿಗೆ ಮತದಾರರು ಒಳಗಾಗಬೇಡಿ ಎಂದು ಸಲಹೆ ನೀಡಿದ್ದಾರೆ.

ಚುನಾವಣಾ ಅಕ್ರಮ ತಡೆಯಲು ಎಲ್ಲಾ ತಯಾರಿ ಮಾಡಿಕೊಳ್ಳಲಾಗಿದೆ. ಹದ್ದಿನ ಕಣ್ಣಿಡಲಾಗಿದೆ‌. ಗಡಿ ಪ್ರದೇಶ, ಕರಾವಳಿ ಭಾಗದಲ್ಲಿ ಹೆಚ್ಚಿನ ಎಚ್ಚರಿಕೆ ತೆಗೆದುಕೊಳ್ಳಲಾಗಿದೆ. ಚುನಾವಣಾ ಅಕ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಅಕ್ರಮ ವರ್ಗಾವಣೆಯ ಮೇಲೂ ನಿಗಾ ಇಡಲಾಗಿದೆ. ಎಲ್ಲಾ ಮತಗಟ್ಟೆಗಳಲ್ಲೂ ಮೂಲಭೂತ ಸೌಕರ್ಯವಿರುವಂತೆ ನೋಡಿಕೊಳ್ಳಲಾಗುವುದು. ಮತಗಟ್ಟೆಗೆ ಬರುವ ಅಂಗವಿಕಲರಿಗೆ ವೀಲ್ ಚೇರ್ ವ್ಯವಸ್ಥೆ ಮಾಡಲಾಗಿದೆ ಎಂದಿದ್ದಾರೆ.

Leave a Reply

Your email address will not be published. Required fields are marked *

error: Content is protected !!