Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ आध्यात्मिक अन्य

---Advertisement---

ವಾಸ್ತು ಸರಿಯಿಲ್ಲ ಎಂದು ಬಂದ್ ಮಾಡಲಾಗಿದ್ದ ಕಚೇರಿ ಬಾಗಿಲು ಒಪನ್ ಮಾಡಿಸಿದ ಸಿಎಂ

---Advertisement---

ಬೆಂಗಳೂರು: ರಾಜಕೀಯ ವ್ಯಕ್ತಿಗಳು ಕೂಡ ಮೂಢನಂಬಿಕೆಗಳಿಗೆ ಒತ್ತು ಕೊಡ್ತಾರೆ. ಅದರಂತೆ ವಿಧಾನಸೌಧದಲ್ಲಿ ಇದೇ ರೀತಿಯ ಮೂಢನಂಬಿಕೆಯಿಂದಾಗಿ ಒಂದು ಕಚೇರಿಯ ಬಾಗಿಲನ್ನೇ ಹಾಕಿಸಲಾಗಿತ್ತು. ಸ್ವಲ್ಪ ಈ ತರದ ನಂಬಿಕೆಗಳಿಂದ ದೂರವಿರುವ ಸಿಎಂ ಸಿದ್ದರಾಮಯ್ಯ ಅವರು, ಇಂದು ವಿಧಾನಸೌಧದಲ್ಲಿ ಮೂಢನಂಬಿಕೆಯಿಂದ ಬಾಗಿಲು ಮುಚ್ಚಿದ್ದ ಕಚೇರಿಯನ್ನು ತೆಗೆಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಇಂದು ಅಧಿಕಾರಿಗಳ ಜೊತೆಗೆ ಸಭೆ ನಡೆಸಲು ವಿಧಾನಸೌಧಕ್ಕೆ ಬಂದರು. ಈ ವೇಳೆ ಕಚೇರಿಯ ಪಶ್ಚಿಮ ಭಾಗದ ಬಾಗಿಲು ಮುಚ್ಚಲಾಗಿತ್ತು. ಈ ಬಗ್ಗೆ ಅಲ್ಲೆ ಇದ್ದ ಅಧಿಕಾರಿಗಳನ್ನು ಕೇಳಿದಾಗ, ವಾಸ್ತು ಸರಿ ಇಲ್ಲ ಎಂಬ ಕಾರಣಕ್ಕೆ ಬಾಗಿಲು ಹಾಕಲಾಗಿದೆ ಎಂದು ತಿಳಿಸಲಾಗಿತ್ತು.

 

ಆರೋಗ್ಯಕರ ಮನಸ್ಸು, ಸ್ವಚ್ಚ ಹೃದಯ, ಜನಪರ ಕಾಳಜಿ, ಒಳ್ಳೆ ಗಾಳಿ ಬೆಳಕು ಬಂದರೆ ಅದುವೇ ಉತ್ತಮ ವಾಸ್ತು ಎಂದು ಹೇಳುವ ಮೂಲಕ, ಪಶ್ಚಿಮ ದ್ವಾರದ ಮೂಲಕವೇ ತಮ್ಮ ಕಚೇರಿ ಪ್ರವೇಶಿಸಿದರು.

Join WhatsApp

Join Now

Join Telegram

Join Now

Leave a Comment