ನವದೆಹಲಿ: ದಾವಣಗೆರೆ ಬೆಣ್ಣೆ ದೋಸೆಯನ್ನ ಯಾರು ತಿಂದಿಲ್ಲ ಹೇಳಿ. ಎಲ್ಲರೂ ಕೂಡ ಟೇಸ್ಟ್ ಮಾಡೋಣಾ ಅಂತ ನೋಡಿ, ಆಮೇಲೆ ನಾಲಿಗೆಗೆ ರುಚಿ ಹತ್ತಿ ಅದನ್ನೇ ತಿನ್ನುತ್ತಿರುವವರು ಜಾಸ್ತಿ. ದೋಸೆ ಮೇಲೊಂದಿಷ್ಟು ಬೆಣ್ಣೆ, ಗಟ್ಟಿ ಚಟ್ನಿ ಆಹಾ ಅದರ ಟೇಸ್ಡು.. ಅದರ ಘಮಲು ನೆನೆಸಿಕೊಂಡರೇನೆ ಮೂಗಿಗೆ ಹೊಡೆಯುತ್ತೆ. ಅಷ್ಟು ಇಷ್ಟ ಎಲ್ಲರಿಗೂ. ಶತ ಶತಮಾನಗಳಿಂದಾನೂ ದಾವಣಗೆರೆ ಬೆಣ್ಣೆ ದೋಸೆ ಎಲ್ಲೆಡೆ ಫೇಮಸ್ ಆಗಿದೆ. ಈ ದೋಸೆಫೇಮಸ್ ಆದ ಕಾರಣ ದಾವಣಗೆರೆ ಮಂದಿ ಕೇಂದ್ರ ಸರ್ಕಾರದ ಮುಂದೆ ಬೇಡಿಕೆಯೊಂದನ್ನು ಇಟ್ಟಿದ್ದರು. ದಾವಣಗೆರೆ ಬೆಣ್ಣೆ ದೋಸೆನಗರಿ ಎಂಬ ಭೌಗೋಳಿಕ ಸೂಚ್ಯಂಕ ನೀಡಲು ಬೇಡಿಕೆ ಇಟ್ಟಿದ್ದರು. ಆದರೆ ಕೇಂದ್ರ ಸರ್ಕಾರ ಇದನ್ನು ತಿರಸ್ಕಾರ ಮಾಡಿದೆ. ಇದು ದಾವಣಗೆರೆ ಮಂದಿಗೆ ಬೇಸರ ಮಾಡಿದೆ.
ಕೇಂದ್ರ ಸರ್ಕಾರ ಇದಕ್ಕೆ ನೀಡಿರುವ ಕಾರಣ ದಾವಣಗೆರೆ ಬೆಣ್ಣೆ ದೋಸೆ ಅನ್ನೋದು ಕೇವಲ ಒಂದು ಜಿಲ್ಲೆಗೆ ಮಾತ್ರ ಸೀಮಿತವಾಗಿಲ್ಲ. ಅದು ಕರ್ನಾಟಕದ ಹಲವು ಜಿಲ್ಲೆಗಳಲ್ಲಿಯೂ ಕೂಡ ರೂಢಿಯಲ್ಲಿದೆ. ವಿವಿಧ ಜಿಲ್ಲೆಗಳಲ್ಲಿ ಈ ದೋಸೆಯನ್ನು ತಯಾರು ಮಾಡುತ್ತಾರೆ. ದಾವಣಗೆರೆ ಮಾತ್ರ ಸೇರುವುದಿಲ್ಲ. ಹೀಗಾಗಿ ಇದಕ್ಕೆ ಜಿಯಾಗ್ರಾಫಿಕಲ್ ಟ್ಯಾಗ್ ಎಂದು ದಾವಣಗೆರೆಗೆ ನೀಡಲು ಸಾಧ್ಯವಿಲ್ಲ ಎಂದು ಕೇಂದ್ರ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕಾ ರಾಜಗಯ ಸಚಿವ ಜಿತಿನ್ ಪ್ರಸಾದ್ ಉತ್ತರ ನೀಡಿದ್ದಾರೆ.
ದಾವಣಗೆರೆಯ ಸಂಸದೆ ಪ್ರಭಾ ಮಲ್ಲಿಕಾರ್ಜುನ್ ಅವರಿಂದ ಕೇಂದ್ರ ಸರ್ಕಾರಕ್ಕೆ ಈ ಬೇಡಿಕೆ ಇಡಲಾಗಿತ್ತು. ಈ ಬಗ್ಗೆ ಪ್ರಭಾ ಮಲ್ಲಿಕಾರ್ಜುನ ಮಾತನಾಡು, ಈಗಾಗಲೇ ದಾವಣಗೆರೆಯ ಉಪ ಆಯುಕ್ತರಿಗೆ ಬೌಗೋಳಿಕ ಸೂಚ್ಯಂಕದ ನೋಂದಣಿ ಇಲಾಖೆಗೆ ಒಂದು ಅರ್ಜಿ ಸಲ್ಲಿಸಲು ಹೇಳಿದ್ದೇನೆ. ಈಗಾಗಲೇ ದೇಶದ ಎಲ್ಲಾ ಕಡೆ ಮಾರಾಟವಾಗುವ ರಸಗುಲ್ಲಾ, ಚಿಕ್ಕಿಗಳು ಒಂದೊಂದು ನಗರಕ್ಕೆ ಭೌಗೋಳಿಕ ಸೂಚ್ಯಂಕವಾಗಿ ಗುರುತಿಸಿಕೊಂಡಿವೆ. ಅದೇ ರೀತಿ ಬೆಣ್ಣೆ ದೋಸೆ ಕೂಡ. ಬೇರೆ ಕಡೆಯಲ್ಲೆಲ್ಲಾ ತಯಾರಾಗುತ್ತದೆ ಎಂಬ ಕಾರಣಕ್ಕೆ ಜಿಐ ಟ್ಯಾಗ್ ಕೊಡಲ್ಲ ಎಂದು ಹೇಳುವುದು ಸರಿಯಲ್ಲ ಎಂದಿದ್ದಾರೆ.