ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿ ಸಾಮಾನ್ಯ ಜನ ತತ್ತರಿಸಿ ಹೋಗಿದ್ದಾರೆ. ಇದೀಗ ಗೃಹ ಬಳಕೆ ಅನಿಲ ಕೂಡ ಬೆಲೆ ಏರಿಕೆಯಾಗಿದೆ. ಒಂದೆರಡು ರೂಪಾಯಿ ಅಲ್ಲ ಐವತ್ತು ರೂಪಾಯಿ ಏರಿಕೆಯಾಗಿ ಶಾಕ್ ನೀಡಿದೆ. ಕೇಂದ್ರ ಸರ್ಕಾರ ಈ ಪರಿಷ್ಕೃತ ದರ ಇಂದಿನಿಂದಲೇ ಜಾರಿಗೆ ಬಂದಿದೆ. ಇದು ಸಾಮಾನ್ಯ ಸಿಲಿಂಡರ್ ಜೊತೆಗೆ ಉಜ್ವಲ ಯೋಜನೆಗೂ ಅನ್ವಯವಾಗಲಿದೆ. ಈ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದಿಪ್ ಸಿಂಗ್ ಪುರಿ ಮಾಹಿತಿ ನೀಡಿದ್ದಾರೆ. ಅಡುಗೆ ಅನಿಲದ ದರವನ್ನು ಉಜ್ವಲಾ ಯೋಜನೆ ಮತ್ತು ಸಾಮಾನ್ಯ ವರ್ಗದ ಗ್ರಾಹಕರಿಗೆ ಹೆಚ್ಚಿಸಲಾಗಿದೆ.
ಹೊಸ ದರದ ಅನ್ವಯ 14.2 ಕೆಜಿ ಅನಿಲ ದರವು 803 ರೂಪಾಯಿಯಿಂದ ಹಿಡಿದು 853 ರೂಪಾಯಿವರೆಗೆ ಏರಿಕೆಯಾಗಿದೆ. ಉಜ್ವಲಾ ಯೋಜನೆಯ ಫಲಾನುಭವಿಗಳಿಗೆ 503 ರಿಂದ 553 ಕ್ಕೆ ಏರಿಕೆ ಮಾಡಲಾಗಿದೆ. ದೆಹಲಿ ಸೇರಿದಂತೆ ಹಲವು ನಗರಗಳಲ್ಲಿ ಸಿಎನ್ಜಿ ದರವನ್ನು ಒಂದು ಕೆಜಿಗೆ ಎರಡು ರೂಪಾಯಿ ಏರಿಕೆ ಮಾಡಲಾಗಿದೆ. ಇದರಿಂದ ಸಿಎನ್ಜಿ ದರ 75.09 ರೂಪಾಯಿಗೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಕಷ್ಟು ಹೊರೆಯಾದಂತೆ ಆಗಿದೆ.
ಈಗಾಗಲೇ ಏನೆಲ್ಲಾ ಅಗತ್ಯ ವಸ್ತುಗಳು ಇವೆಯೋ ಆ ಎಲ್ಲಾ ವಸ್ತುಗಳ ಬೆಲೆ ಏರಿಕೆಯಾಗಿದೆ. ಇದರಿಂದ ಸಾಮಾನ್ಯ ಜನರಿಗೆ ಸಾಜಷ್ಟು ಹೊರೆಯಾಗುತ್ತಿದೆ. ಈಗಾಗಲೇ ಹಾಲಿನ ದರ ಎರಡು ಬಾರಿ ಏರಿಕೆಯಾಗಿದೆ. ವಿದ್ಯುತ್ ದರವಂತು ಇನ್ನಷ್ಟು ಏರಿಕೆಯಾಗಿದೆ. ಈಗ ನೋಡಿದರೆ ಸಿಲಿಂಡರ್ ಬೆಲೆಯು ಏರಿಕೆಯಾಗಿದೆ. ಈ ಬೆಲೆ ಏರಿಕೆಯನ್ನು ನೋಡಿನೆ ಜನ ಸುಸ್ತಾಗಿ ಹೋಗಿದ್ದಾರೆ. ಒಂದು ಕಾಫಿ, ಟೀ ಹೋದ್ರು ದರ ಏರಿಕೆಯ ಬಿಸಿನೇ ತಾಕುತ್ತಿದೆ.
