Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಜುಲೈ 12ಕ್ಕೆ ವಿಧಾನಪರಿಷತ್ ಗೆ ನಡೆಯಲಿದೆ ಉಪಚುನಾವಣೆ..!

Facebook
Twitter
Telegram
WhatsApp

ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ತೆರವಾದ ವಿಧಾನಪರಿಷತ್ ಸ್ಥಾನಕ್ಕೂ ಚುನಾವಣೆಯ ದಿನಾಂಕವನ್ನು ಘೋಷಣೆ ಮಾಡಲಾಗಿದೆ. ಮರಳಿ ಬಿಜೆಪಿಗೆ ಹೋದಂತ ಜಗದೀಶ್ ಶೆಟ್ಟರ್ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ್ದಾರೆ. ಹೀಗಾಗಿ ತೆರವಾಗಿದ್ದಂತ ವಿಧಾನಪರಿಷತ್ ಉಪ ಚುನಾವಣೆಗೆ ದಿನಾಂಕ ನಿಗಧಿಯಾಗಿದೆ. ಕರ್ನಾಟಕದ ಒಂದು ವಿಧಾನಪರಿಷತ್ ಚುನಾವಣೆ ಸೇರಿದಂತೆ ಮೂರು ರಾಜ್ಯಗಳಲ್ಲಿ ತೆರವಾದಂತ ಕ್ಷೇತ್ರಗಳಿಗೆ ದಿನಾಂಕ ಘೋಷಣೆ ಮಾಡಲಾಗಿದೆ.

ವಿಧಾನಸಭೆಯಿಂದ ವಿಧಾನಪರಿಷತ್ ಗೆ ಆಯ್ಕೆ ಮಾಡಲು ನಡೆಯುವಂತ ಚುನಾವಣೆ ಇದಾಗಿದೆ. ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಹಾಗೂ ಆಂಧ್ರಪ್ರದೇಶದಲ್ಲಿ ಉಪಚುನಾವಣೆ ನಡೆಯಲಿದ್ದು, ಜುಲೈ 22 ರಂದು ಉಪಚುನಾವಣೆಗೆ ದಿನಾಂಕ ನಿಗಧಿ ಮಾಡಲಾಗಿದೆ. ಜುಲೈ 2 ನಾಮಪತ್ರ ಸಲ್ಲಿಕೆ ಮಾಡಲು ಕಡೆಯ‌ ದಿನವಾಗಿದ್ದು, ಜುಲೈ 3 ನಾಮಪತ್ರ ಪರಿಶೀಲನೆ ನಡೆಯಲಿದೆ. ಜುಲೈ 5 ಕ್ಕೆ ನಾಮಪತ್ರ ವಾಪಸ್ ಪಡೆಯಲು ಕಡೆಯ ದಿನಾಂಕವಾಗಿದೆ. ಕರ್ನಾಟಕದ ವಿಧಾನಸಭೆಯ ಮತದಾರರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ವಿಧಾನಸೌಧದಲ್ಲಿಯೇ ಮತದಾನದ ನಡೆಯಲಿದೆ.

ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಬಿಜೆಪಿಯಲ್ಲಿ ಟಿಕೆಟ್ ಸಿಗದ ಕಾರಣ ಕಾಂಗ್ರೆಸ್ ಗೆ ಬಂದರು. ಅಲ್ಲಿ ಟಿಎಕಟ್ ಪಡೆದರು ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡರು. ಆದರೂ ಕಾಂಗ್ರೆಸ್ ಹಿರಿಯ ನಾಯಕನಿಗೆ ಗೌರವ ಕೊಡಬೇಕೆಂಬ ಕಾರಣಕ್ಕೆ ಜಗದೀಶ್ ಶೆಟ್ಟರ್ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಿತ್ತು. ಲೋಕಸಭಾ ಚುನಾವಣೆ ಬರುತ್ತಿದ್ದಂತೆ ಕಾಂಗ್ರೆಸ್ ನಿಂದ ಹಾರಿ ಮತ್ತೆ ಬಿಜೆಪಿಗೆ ಹೋದರು. ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿ, ಗೆದ್ದುರು. ಇದೀಗ ಆ ತೆರವಾಗಿರುವ ವಿಧಾನಪರಿಷತ್ ಹುದ್ದೆಗೆ ಉಪಚುನಾವಣೆ ಘೋಷಣೆಯಾಗಿದೆ. ಈಗಾಗಲೇ ಆಡಳಿತ ಪಕ್ಷ ಕಾಂಗ್ರೆಸ್ ಈ ಸ್ಥಾನಕ್ಕೆ ಬಸನಗೌಡ ಬಾದರ್ಲಿ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ಇನ್ನು ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರಾಗ್ತಾರೆ ಎಂಬ ಕುತೂಹಲವಿದೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

Kamala Harris: ಅಮೇರಿಕಾ ಅಧ್ಯಕ್ಷ ಸ್ಥಾನದ ಸನಿಹದಲ್ಲಿ ಭಾರತೀಯ ಮೂಲದ ಕಮಲಾ ಹ್ಯಾರಿಸ್..!

ಸುದ್ದಿಒನ್ : ವಿಶ್ವದ ದೊಡ್ಡಣ್ಣ ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆಯ ಕಾವು ಜೋರಾಗಿದೆ. ಅಧ್ಯಕ್ಷೀಯ ರೇಸ್‌ಗೆ ಅಂತಿಮವಾಗಿ ಯಾರು ನಿಲ್ಲುತ್ತಾರೆ ಮತ್ತು ಯಾರು ಯಾರನ್ನು ಎದುರಿಸುತ್ತಾರೆ ಎಂಬ ವಿಷಯ ತೀವ್ರ ಕುತೂಹಲ ಮೂಡಿಸಿದೆ. ಪ್ರಸ್ತುತ ಡೆಮಾಕ್ರಟಿಕ್

ಮೊಬೈಲ್ ನಲ್ಲಿ Cashexpand-U ಅಪ್ಲಿಕೇಷನ್ ಇದ್ದರೆ ಕೂಡಲೇ ಡಿಲೀಟ್ ಮಾಡಿ : ಸರ್ಕಾರದಿಂದ ಎಚ್ಚರಿಕೆಯ ಸಂದೇಶ..!

ಬೆಂಗಳೂರು: ಇತ್ತಿಚಿನ ದಿನಗಳಲ್ಲಿ ಸೈಬರ್ ಕ್ರೈಮ್ ಸಿಕ್ಕಾಪಟ್ಟೆ ಜಾಸ್ತಿಯಾಗ್ತಾ ಇದೆ. ಒಂದು ಸೆಕೆಂಡ್ ಯಾಮಾರಿದರು ಅಕೌಂಟ್ ನಲ್ಲಿ ಇರುವ ಹಣ ಪಕ್ಕನೇ ಮಾಯವಾಗಿ ಬಿಡುತ್ತದೆ. ಸೈಬರ್ ಕ್ರೈಂಗೆ ದೂರು ನೀಡಿದರು ಆ ಹಣ ಮರಳಿ

Dengue fever : ಡೆಂಗ್ಯೂ ಜ್ವರ ಇದ್ದರೆ, ನೀವು ಯಾವ ಹಣ್ಣುಗಳನ್ನು ತಿನ್ನಬೇಕು ? ಎಳ ನೀರು ಒಳ್ಳೆಯದೇ ?

  ಸುದ್ದಿಒನ್ : ಮಳೆಗಾಲ ರೋಗಗಳ ಕಾಲ. ಮಳೆಗಾಲದಲ್ಲಿ ಡೆಂಗ್ಯೂ ಭೀತಿ ಹೆಚ್ಚು. ಮಳೆಗಾಲದಲ್ಲಿ ಹಲವೆಡೆ ನೀರು ನಿಂತು ಸೊಳ್ಳೆಗಳ ಕಾಟ ಹೆಚ್ಚುತ್ತದೆ. ಈ ಸೊಳ್ಳೆಗಳು ಮಲೇರಿಯಾ, ಚಿಕೂನ್‌ಗುನ್ಯಾ, ಡೆಂಗ್ಯೂ ಮುಂತಾದ ಅಪಾಯಕಾರಿ ರೋಗಗಳನ್ನು

error: Content is protected !!