ಚಿಕ್ಕಮಗಳೂರು: ದತ್ತಪೀಠಕ್ಕೆ ಆಗಮಿಸಿದ್ದ ರಿಷಿಕುಮಾರ್ ಸ್ವಾಮೀಜಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಹಿಂದೂ ಧರ್ಮವನ್ನ ಕಾಂಗ್ರೆಸ್ ಆಗ್ಲೀ, ಜೆಡಿಎಸ್ ಪಕ್ಷವಾಗಲೀ ಹಾಳು ಮಾಡ್ತಿಲ್ಲ. ಬಿಜೆಪಿ ಸರ್ಕಾರವೇ ಹಿಂದೂ ಧರ್ಮವನ್ನ ಸರ್ವನಾಶ ಮಾಡುತ್ತಿದೆ ಎಂದು ಹರಿಹಾಯ್ದಿದ್ದಾರೆ.
ಇಂದು ದತ್ತಪೀಠಕ್ಕೆ ಭೇಟಿ ಕೊಟ್ಟ ರಿಷಿ ಕುಮಾರ್ ಸ್ವಾಮೀಝ ಸೇರಿದಂತೆ ಹಲವರು, ಬಿಜೆಪಿ ವಿರುದ್ಧ ಆಕ್ರೋಶ ಹಿರ ಹಾಕಿದ್ದಾರೆ. ಇಂದು ಗುರುವಾಗಿರೋ ಕಾರಣ ದತ್ತಪೀಠಕ್ಕೆ ಪೂಜೆ ಸಲ್ಲಿಸಲು ಬಂದಿದ್ದೆವು. ಆದ್ರೆ ದರ್ಶನಕ್ಕಷ್ಟೆ ಅನುಮತಿ ನೀಡಲಾಗಿದೆ. ದತ್ತಪೀಠಕ್ಕೆ ಪೂಜೆ ಮಾಡಲು ಅವಕಾಶವನ್ನೇ ನೀಡಿಲ್ಲ ಎಂದು ಹರಿಹಾಯ್ದರು.
ಈ ವೇಳೆ ರೊಚ್ಚಿಗೆದ್ದ ರಿಷಿಕುಮಾರ್ ಸ್ವಾಮೀಜಿ, ಋಷಿಕುಮಾರ ಸ್ವಾಮಿಜಿ, ಶ್ರೀರಾಮಸೇನೆ ರಾಜ್ಯ ಸಂಚಾಲಕ ಗಂಗಾಧರ್ ಕುಲಕರ್ಣಿ ಸೇರಿದಂತೆ ಎರಡ್ಮೂರು ಸ್ವಾಮೀಜಿಗಳು ಹಾಗೂ ಶ್ರೀರಾಮಸೇನೆ ಕಾರ್ಯಕರ್ತರು ದತ್ತ ಗುಹೆಯೊಳಗೆ ಧರಣಿಗೆ ಕೂತರು. ಸಾಧು-ಸಂತರಿಗೆ ಪೂಜೆಗೆ ಅವಕಾಶ ಇಲ್ಲವೆಂದು ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಕೂಡ ಹೇಳಿಲ್ಲ. ಆದರೆ, ನೀವು ಹೊಸ ಸಂಪ್ರದಾಯ ಹುಟ್ಟುಹಾಕಿದ್ದೀರಾ ಎಂದು ಆಕ್ರೋಶ ಹೊರ ಹಾಕಿದ್ರು. ಮುಂದಿನ ದಿನಗಳಲ್ಲಿ ಅವಕಾಶ ನೀಡದಿದ್ದರೆ ರಾಜ್ಯದ ಎಲ್ಲಾ ಮಠಾಧೀಶರು ಜಾಗೃತರಾಗಿ, ನಾವೆಲ್ಲಾ ಸಣ್ಣ-ಪುಟ್ಟ ಮಠದವರು. ಬಾಳೆಹೊನ್ನೂರು-ಆದಿಚುಂಚನಗಿರಿ ಪೀಠಕ್ಕಿಂತ ದೊಡ್ಡ ಮಠ ಬೇಕಾ ಒಂದೇ ಒಂದು ಕರೆ ನೀಡಿದರೆ ಕೇಂದ್ರ ಸರ್ಕಾರವೇ ಅಲ್ಲಾಡುತ್ತೆ ಎಂದು ಎಚ್ಚರಿಸಿದ್ದಾರೆ.