ದಕ್ಷಿಣ ಕನ್ನಡ: ಕಳೆದ ಕೆಲವು ತಿಂಗಳಿನಿಂದ ರಾಜ್ಯದಲ್ಲಿ ಹಲವು ವಿಚಾರಗಳು ಚರ್ಚೆಗೆ ಗ್ರಾಸವಾಗಿವೆ. ರಾಷ್ಟ್ರಮಟ್ಟದಲ್ಲೂ ಸದ್ದು ಮಾಡಿದೆ. ಅದರಲ್ಲಿ ಹಿಂದೂಯೇತರರನ್ನು ಜಾತ್ರೆಗಳಲ್ಲಿ ನಿರ್ಬಂಧಿಸಿದ್ದು ಕೂಡ ಒಂದು. ಇದೀಗ ಅದೆಲ್ಲವೂ ತಣ್ಣಗಾಗಿದ್ದು, ಮತ್ತೆ ದಕ್ಷಿಣ ಕನ್ನಡದ ಪ್ರಖ್ಯಾತ ದೇವಸ್ಥಾನ ಸೌತಡ್ಕ ಗಣಪತಿ ದೇವಾಲಯಕ್ಕೆ ಅನ್ಯಕೋಮಿನವರ ನಿರ್ಬಂಧ ಹೇರಲಾಗಿದೆ.
ದೇವಸ್ಥಾನದ ಮುಂಭಾಗವೇ ಈ ಸಂಬಂಧ ಬ್ಯಾನರ್ ಹಾಕಿದ್ದಾರೆ. ಹಿಂದೂಯೇತರ ಅನ್ಯಕೋಮಿನ ಆಟೋ, ಟ್ತಾಕ್ಸಿ ಸೇರಿದಂತೆ ಇತರೆ ವಾಹನಗಳಿಗೆ ನಿರ್ಬಂಧಿಸಲಾಗಿದೆ ಎಂದು ಬರೆದಿದ್ದಾರೆ. ಹಿಂದೂಗಳ ಶ್ರದ್ಧಾ ಕೇಂದ್ರವಾದ ಸೌತಡ್ಕದಲ್ಲಿ ಅನ್ಯಕೋಮಿನವರು ಪ್ರವೇಶ ಮಾಡಿ ಭಕ್ತಾಧಿಗಳನ್ನು ಲವ್ ಜಿಹಾದ್ ಮತ್ತು ದುಷ್ಕೃತ್ಯ ನಡೆಸಿರುವುದು ಕಂಡು ಬಂದಿರುವಿದರಿಂದ ಹಿಂದೂಯೇತರ ಆಟೋ, ಟ್ಯಾಕ್ಸಿ ಇನ್ನಿತರ ಯಾವುದೇ ವಾಹನಗಳ ಪ್ತವೇಶಕ್ಕೆ ನಿರ್ಬಂಧ ವಿಧಿಸಲಾಗಿದೆ ಎಂದು ಬ್ಯಾನರ್ ನಲ್ಲಿ ಮುದ್ರಿಸಲಾಗಿದೆ.
ಕೆಲ ದಿನಗಳ ಹಿಂದೆ ಇಲ್ಲಿ ಮುಸ್ಲಿಂ ಯುವಕನೊಬ್ಬ ಲವ್ ಜಿಹಾದ್ ಎಸಗಿದ್ದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆ ಭಜರಂಗದಳದ ಹೆಸರಿನಲ್ಲಿ ಈ ಫಲಕ ಹಾಕಿದ್ದಾರೆ. ಸೌತಡ್ಕ ಗಣಪತಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದು, ಆಡಳಿತ ಮಂಡಳಿ ಫಲಕ ಹಾಕಿಲ್ಲ ಎಂದು ಸ್ಪಷ್ಟಪಡಿಸಿದೆ.