ರಾಜ್ಯ ರಾಜಕಾರಣ ಮಾತ್ರ ಅಲ್ಲ ರಾಷ್ಟ್ರ ರಾಜಕಾರಣದಲ್ಲೂ ಆಡಿಯೋವೊಂದು ಸಂಚಲನ ಮೂಡಿಸಿದೆ. ಬಿಜೆಪಿ, ಜೆಡಿಎಸ್, ಅಮಿತ್ ಶಾ ಬಗ್ಗೆ ಸಿಪಿ ಯೋಗೀಶ್ವರ್ ಮಾತನಾಡಿದ್ದಾರೆ ಎಂಬ ಆಡಿಯೋ ವೈರಲ್ ಆಗಿದೆ.
ಆ ಆಡಿಯೋದಲ್ಲಿ ಈ ರೀತಿ ಇದೆ “ನಾನು ಕುಮಾರಸ್ವಾಮಿ ವಿರುದ್ಧ ಸ್ಪರ್ಧೆ ಮಾಡ್ತಿದ್ದೀನಿ. ಮಾಡಲು ಒಪ್ಪಿಕೊಂಡಿದ್ದೀನಿ. ಅಶೋಕ್ ಅವರು ಡಿಕೆ ಶಿವಕುಮಾರ್ ಮೇಲೆ ಮಾಡಲಿ, ಅಶ್ವತ್ಥ್ ನಾರಾಯಣ್ ಅವರು ಕುಮಾರಸ್ವಾಮಿಯವರ ಮಗನ ಮೇಲೆ ಮಾಡಲಿ. ಹೊಇರಾಟ ಆಗ್ಲಿ, ಪಾರ್ಟಿ ನಮ್ಮ ರಕ್ಷಣೆಗೆ ಬಂದೇ ಬರುತ್ತೆ. ನಾನು ಸೋತರೂ ನನ್ನ ಮಂತ್ರಿ ಮಾಡ್ಲಿಲ್ಲವಾ..? ಹಂಗೇ ಅವರನ್ನು ಮಾಡ್ತಾರೆ. ಹಾಗೆ ಕಟ್ಟಿ ಹಾಕಬೇಕು ರಾಜಕೀಯದಲ್ಲಿ”.
“ಅಮಿತ್ ಶಾ ಹೇಳಿದ್ದಾರೆ. ಹೊಂದಾಣಿಕೆ ರಾಜಕೀಯ ಬೇಡ ಅಂತಾ. ತಾಯಿಗೆ ದ್ರೋಹ ಮಾಡಿದ ಹಾಗೆ ಅಂತ ಹೇಳ್ಬಿಟ್ಟು. ಬಹಳ ಕೆಟ್ಟದಾಗಿ ಹೇಳಿದ್ರು. ಅಮಿತ್ ಶಾ ಒಂಥರ ರೌಡಿ ಇದ್ದ ಹಾಗೆ ಕಣಯ್ಯ. ಅಲ್ಲಿ ಹಾಗೆ ಮಾತಾಡ್ತಾರೆ ಅಂತನಾ. ಬಹಳ ಕೆಟ್ಟದಾಗಿ ಮಾತನಾಡುತ್ತಾರೆ. ಅಂದ್ರೆ ಯಾರಾದ್ರೂ ಪಾರ್ಟಿ ವಿರುದ್ಧ ಅಂಡರ್ ಸ್ಟ್ಯಾಂಡಿಂಗ್ ಮಾಡಿಕೊಂಡ್ರೆ ಅವರ ಬುಡ ಬಿಡುವುದಿಲ್ಲ ಅಂತ ಹೇಳಿದ್ದಾರೆ. ಬರೀ 30 ಜನ ಕರೆದಿದ್ರು. ಹೀಗೆ ಕೂರಿಸಿಕೊಂಡು ಹೇಳಿದ್ರು. ನನಗೆ ಗೊತ್ತು ಯಾರು ಪಾರ್ಟಿಗೆ ದ್ರೋಹ ಮಾಡುತ್ತಿದ್ದಾರೆ, ಅಂಡರ್ಸ ಸ್ಟ್ಯಾಂಡಿಂಗ್ ಯಾರ್ಯಾರಿಗೆ ಇದೆ ಅಂತ ಗೊತ್ತು ಅಂತ ಹೇಳಿದ್ರು. ಎಲ್ಲಾ ನೀಟಾಗಿ ಹೇಳಿದ್ರು”.
ಇನ್ನು ಈ ಬಾರಿ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಜನಾಭಿಪ್ರಾಯವೇ ಬೇರೆ ಇದೆ. ಜೆಡಿಎಸ್ ಕೂಡ ಬರಲ್ಲ ಎಂದಿದ್ದಾರೆ. ಇದೇ ವೇಳೆ ಕೋಲಾರದಲ್ಲಿ ಸಿದ್ದರಾಮಯ್ಯ ಸೋಲುತ್ತಾರೆ ಅಂತ ನಾನು ಹೇಳುವುದಿಲ್ಲ. ಅವರು ಗೆಲ್ಲಬೇಕು. ಮುಖ್ಯಮಂತ್ರಿಯಾಗಿದ್ದವರು ಸೋಲಬೇಕು ಅಂತ ನಾನು ಹೇಳುವುದಿಲ್ಲ ಎಂದಿದ್ದಾರೆ.