ನಮ್ಮ ಹಿಂದೂಗಳ ಹತ್ಯೆಯಾಗಿದೆ, ಸ್ವಾಭಿಮಾನದ ಧಕ್ಕೆಯಾಗಿದೆ : ರೇಣಿಕಾಚಾರ್ಯ

suddionenews
1 Min Read

ವಿಜಯನಗರ: ಡಿಕೆ ಶಿವಕುಮಾರ್ ಅವರು, ಸಿದ್ದರಾಮಯ್ಯ ಅವರು, ಕಾಂಗ್ರೆಸ್ ಮುಖಂಡರು ಈ ರೀತಿ ಪ್ರಚೋದನಾ ಹೇಳಿಕೆ ನೀಡುತ್ತಿದ್ದಾರೆ. ಅಲ್ಲಿ ತ್ರಿವರ್ಣ ಧ್ವಜ ತೆಗೆದು ಕೇಸರಿ ಧ್ವಜ ಹಾರಿಸಿರುವುದು ಸುಳ್ಳು ಕಟ್ಟು ಕಥೆ ಕಟ್ಟಿದ್ದಾರೆ. ಅವರು ನಿಸ್ಸೀಮರು, ಈ ರೀತಿಯ ಸುಳ್ಳಿನ ಕಥೆ ಕಟ್ಟಲು. ನಮ್ಮ ಹಿಂದೂಗಳ ಹತ್ಯೆಯಾಗಿದೆ, ಸ್ವಾಭಿಮಾನದ ಧಕ್ಕೆಯಾಗಿದೆ. ಅದರೂ ತಾಳ್ಮೆಯಿಂದ ಇದ್ದೇವೆ. ಹರ್ಷ ಒಬ್ಬ ಹಿಂದೂ ಯುವಕ. ಭಜರಂಗದಳದ ಕಾರ್ಯಕರ್ತ. ಅವನನ್ನು ಹತ್ಯೆ ಮಾಡಿದ್ದು. ಇದಕ್ಕೆ ಕಾರಣ ಕಾಂಗ್ರೆಸ್ ಮುಖಂಡರ ಹೇಳಿಕೆಗಳು ಎಂದು ಕಾಂಗ್ರೆಸ್ ಮೇಲೆ ಗರಂ ಆಗಿದ್ದಾರೆ.

ನಮ್ಮ ಸರ್ಕಾರ ವಿಫಲವಾಗಿಲ್ಲ. ನರೇಂದ್ರ ಮೋದಿ ಸಮ್ಮುಖದಲ್ಲಿ ಆಡಳಿತ ನೀಡಿದ್ದೀವಿ. ಅಂದು ಕಾಂಗ್ರೆಸ್ ನವರು ಅಪಪ್ರಚಾರ ಏನಂತ ಮಾಡಿದ್ದರು, ನರೇಂದ್ರ ಮೋದಿಯವರು ಭಾರತದಲ್ಲಿ ಅಧಿಕಾರಕ್ಕೆ ಬಂದ ಮೇಲೆ ಗೋದ್ರಾ ಘಟನೆಯನ್ನು ತಳುಕು ಹಾಕಿದ್ದರು, ಅಲ್ಪಸಂಖ್ಯಾತರನ್ನು ಪಾಕಿಸ್ತಾನಕ್ಕೆ ಕಳಿಸಿಬಿಡುತ್ತಾರೆ ಎಂದೆಲ್ಲಾ ಹೇಳಿದ್ದರು. ಇದೆಲ್ಲವನ್ನು ಕಾಂಗ್ರೆಸ್ ನವರೇ ಹುಟ್ಟು ಹಾಕಿದ್ರು. ದೇಶದ ಜನ ಕಾಂಗ್ರೆಸ್ ನವರ ಹೇಳಿಕೆಯನ್ನು ಸಂಪೂರ್ಣವಾಗಿ ತಿರಸ್ಕಾರ ಮಾಡಿದ್ದರು. ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿಯೇ ಎರಡು ಬಾರಿ ಬಂತು. ಎಲ್ಲಾ ಧರ್ಮಗಳಿಗೂ ಸಮಾನ ಅವಕಾಶ ಕೊಟ್ಟಿದ್ದರು.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೂ ಈ ರೀತಿ ಘಟನೆಗಳು ನಡೆದಿರಲಿಲ್ಲ. ಬೊಮ್ಮಾಯಿ ಅವರು ಕೂಡ ಮುಸ್ಲಿಂರಿಗೂ ಸಮಾನ ಅವಕಾಶ ನೀಡಿದ್ದರು. ಕಾಂಗ್ರೆಸ್ ನೇತೃತ್ವದ ಸರ್ಕಾರ ಅಂದು ಟಿಪ್ಪು ಜಯಂತಿಯನ್ನು ಆಚರಿಸಿದರು. ಇವರ ಸ್ವಾರ್ಥಕ್ಕೋಸ್ಕರ, ವೋಟ್ ಬ್ಯಾಂಕಿಗೋಸ್ಕರ ಟಿಪ್ಪು ಜಯಂತಿ ಆಚರಿಸಿದರು. ಅಂದಿನಿಂದ ಇಂದಿನವರೆಗೆ ಕೆಲವು ಘಟನೆಗಳು ನಡೆಯುತ್ತಲೆ ಇದೆ. ಇದಕ್ಕೆಲ್ಲಾ ಯಾರು ಕಾರಣ ಕಾಂಗ್ರೆಸ್ ನವರೇ ಕಾರಣ. ಡಿಜೆ ಹಳ್ಳಿ ಕೆಜೆ ಹಳ್ಳಿಯಲ್ಲಿ ಏನಯ್ತು, ಮತಾಂಧ ಜಮೀರ್ ಹಲ್ಲೆ ಮಾಡಿಸಿದ್ದರು. ಭಾರತದಲ್ಲಿ ಕರ್ನಾಟಕದಲ್ಲಿ ಕೇಸರಿ ಧ್ವಜ ಸ್ಟೇಟಸ್ ಹಾಕುವುದು ತಪ್ಪೇನಿದೆ ಎಂದು ಪ್ರಶ್ನಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *