ಶಿವಮೊಗ್ಗ: ಪಾಗಲ್ ಪ್ರೇಮಿಗಳು ಏನು ಮಾಡಲು ಹೆದರುವುದಿಲ್ಲ. ಈಗ ನೋಡಿ ವಿಷ ಹಾಕಿದ ಸ್ವೀಟ್ ಗಳನ್ನ ಕೊಟ್ಟು ಪ್ರಾಣವನ್ನೆ ತೆಗೆಯಲು ಮುಂದಾಗಿದ್ದ. ಹೊಸ ವರ್ಷದ ದಿನ ಶಿವಮೊಗ್ಗದ ಮೂವರಿಗೆ ವಿಷದ ಬಾಕ್ಸ್ ಪಾರ್ಸೆಲ್ ಆಗಿತ್ತು. ಅದು ಬಿಜೆಪಿ ಎಂಎಲ್ಸಿ ಧನಂಜಯ ಸರ್ಜಿ ಅವರ ಹೆಸರಲ್ಲಿ. ಅನುಮಾನಗೊಂಡ ವೈದ್ಯರೊಬ್ಬರು ಆ ಸ್ವೀಟ್ ಅನ್ನು ಪರೀಕ್ಷೆ ಮಾಡಿದಾಗ ಅದರಲ್ಲಿ ವಿಷವಿದ್ದದ್ದು ತಿಳಿದು ಬಂದಿತ್ತು. ಈ ಸಂಬಂಧ ಪೊಲೀಸರು ತನಿಖೆ ನಡಸಿದ್ದು, ವಿಷದ ಸ್ವೀಟ್ ಕಳುಹಿಸಿದ್ದವನನ್ನು ಅರೆಸ್ಟ್ ಮಾಡಿದ್ದಾರೆ. ಆದರೆ ಆತನಿಂದ ಕಾರಣಗಳನ್ನು ಕೇಳಿ ಪೊಲೀಸರೇ ಶಾಕ್ ಆಗಿದ್ದಾರೆ.
ಭದ್ರಾವತಿ ಮೂಲದ ಸೌಹಾರ್ದ ಪಟೇಲ್ ಈ ದುಷ್ಕೃತಚಯ ಮಾಡಿದ್ದಾನೆ. ಈ ಹಿಂದೆ ಕಾನೂನು ಪದವಿ ವ್ಯಾಸಂಗ ಮಾಡುತ್ತಿದ್ದ ಈತ ವೈದ್ಯೆಯೊಬ್ಬರ ಮಗಳನ್ನು ಲವ್ ಮಾಡುತ್ತಿದ್ದ. ಆದರೆ ಆ ಪ್ರೀತಿ ಈತನಿಗೆ ಸಿಗಲಿಲ್ಲ. ಇದು ಕಾಲೇಜಿನ ಆಡಳಿತ ಮಂಡಳಿಗೂ ಗೊತ್ತಾಗಿತ್ತು. ಬಳಿಕ ಆತನಿಗೆ ಕಾಲೇಜಿನವರೆಲ್ಲ ಸೇರಿ ಬುದ್ದಿ ಹೇಳಿದ್ದರು. ಇದರಿಂದ ಮಾನಸಿಕವಾಗಿ ನೊಂದಿದ್ದ ಸೌಹಾರ್ದ್, ಸೇಡು ತೀರಿಸಿಕೊಳ್ಳಲು ಈ ರೀತಿ ಮಾಡಿದ್ದಾನೆ. ತನಗೆ ಬುದ್ದಿ ಹೇಳಿದವರಿಗೆ ಹಾಗೂ ವೈದ್ಯರಿಗೆ ವಿಷ ಹಾಕಿದ ಸ್ವೀಟ್ ಕಳುಹಿಸಿದ್ದಾನೆ.
ಸ್ವೀಟ್ ಬಾಕ್ಸ್ ನಲ್ಲಿದ್ದ ಲಡ್ಡುಗಳಿಗೆ ಮಾತ್ರೆಗಳನ್ನು ಬೆರೆಸಿ, ಬೇವಿನ ರಸ ಬೆರೆ, ಮತ್ತೆ ಪ್ಯಾಕ್ ಮಾಡಿ ಹಾಗೇ ಇಟ್ಟಿದ್ದಾನೆ. ಮೂವರ ಅಡ್ರೆಸ್ ಗೆ ಧನಂಜಯ ಸರ್ಜಿ ಅವರ ಹೆಸರಾಕಿ ಕಳುಹಸಿದ್ದಾನೆ. ಈತ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು, ತನಗೆ ಚಿಕಿತ್ಸೆ ನೀಡಿದ ವೈದ್ಯರಿಗೂ ವಿಷ ಹಾಕಿದ ಸ್ವೀಟ್ ಬಾಕ್ಸ್ ಕಳುಹಿಸಿದ್ದಾನೆ.