ಚಿತ್ರದುರ್ಗ : ಭೋವಿ ಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮಿಜಿ, ಹೊಳಲ್ಕೆರೆ ಶಾಸಕ, ಹೊಸದುರ್ಗ ಶಾಸಕ ಮತ್ತು ಸಮಾಜದ ಇತರೆ ಶಾಸಕರುಗಳು ಹಾಗೂ ಗಣ್ಯ ವ್ಯಕ್ತಿಗಳು
ಸೇರಿ 12 ಜನರಿಗೆ ಕೊಲೆ ಬೆದರಿಕೆ ಹಾಕಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಹೊಳಲ್ಕೆರೆ ಠಾಣೆ ಪೊಲೀಸರು ಡಾ.ತಿಪ್ಪೇರುದ್ರಸ್ವಾಮಿ ಎಂಬುವನನ್ನು ಬಂಧಸಿದ್ದಾರೆ.
ಆರೋಪಿಯು ಜುಲೈ 14 ರಂದು ಕೆಎಸ್ಪಿ ಆಪ್ ಮೂಲಕ ಜಿಲ್ಲಾ ಪೊಲೀಸ್ ಕಚೇರಿಗೆ ಪ್ರಾಣ ಬೆದರಿಕೆಯ ಸಂದೇಶ ರವಾನಿಸಿದ್ದನು. ಈ ವಿಚಾರಕ್ಕೆ ಸಂಬಂಧಿಸಿದಂತೆ ಜುಲೈ 15ರಂದು ಹೊಳಲ್ಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸಿ ಪೊಲೀಸರು ಜುಲೈ 16 ರಂದು ಬೆದರಿಕೆ ಸಂದೇಶ ಕಳುಹಿಸಿದ ಡಾ||ತಿಪ್ಪೇರುದ್ರಸ್ವಾಮಿ ರಾಷ್ಟ್ರೀಯ ವಡ್ಡ ಸೇನೆ ಅಧ್ಯಕ್ಷರನ್ನು
ಬಂಧಿಸಿದ್ದಾರೆ. ಆರೋಪಿಯು ಚಿಕ್ಕಬಳ್ಳಾಪುರ ಜಿಲ್ಲೆ
ಮುದ್ದೇನಹಳ್ಳಿಯ ಸತ್ಯಸಾಯಿ ಸರಳಾ ಸ್ಮಾರಕ ಆಸ್ಪತ್ರೆಯಲ್ಲಿ ವೈದ್ಯರಾಗಿ ಕರ್ತವ್ಯ ನಿರ್ವಹಿಸುತ್ತಿರುವುದು ತಿಳಿದು ಬಂದಿದೆ.
ಆರೋಪಿ ಡಾ|| ತಿಪ್ಪೇರುದ್ರಸ್ವಾಮಿ ಅಖಿಲ ಕರ್ನಾಟಕ ವಡ್ಡಭೋವಿ ಸಂಘಕ್ಕೆ ಪರ್ಯಾಯವಾಗಿ ರಾಷ್ಟ್ರೀಯ
ವಡ್ಡಸೇನೆ ಎಂಬ ಸಂಘಟನೆಯನ್ನು ಹುಟ್ಟು ಹಾಕಿ ಜುಲೈ1 ರಂದು ಧಾರವಾಡದಲ್ಲಿ ಸಮಾವೇಶ ನಡೆಸಿದ್ದು ಈ
ಸಮಾವೇಶ ನಡೆಸಿದ ನಂತರ ಮೇಲ್ಕಂಡ ಅಖಿಲ ಕರ್ನಾಟಕ ವಡ್ಡಭೋವಿ ಸಂಘದವರಾದ ಪ್ರಕಾಶ ನೆಲಮಂಗಲ,
ಕೊಟ್ರೇಶ್ ಬಳ್ಳಾರಿ, ವೆಂಕಟೇಶ್ ಮೌರ್ಯ & ಚಂದ್ರಶೇಖರ್ ಸ್ವಾಮೀಜಿ ರಾಯಭಾಗ ರವರುಗಳು ಪೋನ್ ಮಾಡಿ
ಆರೋಪಿಗೆ ಕಿರುಕಳ ನೀಡಿದ್ದರಿಂದ ಬೇಸತ್ತು ಅವರುಗಳಿಗೆ ತೊಂದರೆ ನೀಡುವ ಉದ್ದೇಶದಿಂದ ಈ ರೀತಿಯ ಸುಳ್ಳು
ಬೆದರಿಕೆ ಸಂದೇಶಗಳನ್ನು ಕಳುಹಿಸಿರುವುದು ಈ ವರೆಗಿನ ತನಿಖೆಯಿಂದ ತಿಳಿದು ಬಂದಿರುತ್ತದೆ. ಆರೋಪಿಯನ್ನು
ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರ್‍ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರಶುರಾಮ್ ಅವರು ಮಾಹಿತಿ ನೀಡಿದ್ದಾರೆ.