ಹುಬ್ಬಳ್ಳಿ: ಗುತ್ತಿಗೆದಾರ ಎ ಬಸವರಾಜ್ ಎಂಬುವವರು ದಯಾಮರಣ ಕೋರಿ ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಅರ್ಜಿ ಸಲ್ಲಿಸಿರುವ ಘಟನೆ ನಡೆದಿದೆ. ಬಿಲ್ ಪಾವತಿ ಮಾಡುವುದಕ್ಕೆ ಪರ್ಸಂಟೇಜ್ ಕೇಳುತ್ತಿದ್ದಾರೆ ಎಂದು ಆರೋಪವರಿಸಿ, ದಯಾ ಮರಣಕ್ಕೆ ಅರ್ಜಿ ಹಾಕಿದ್ದಾರೆ.
ಬಸವರಾಜ್ ರಾಜ್ಯ ಸರ್ಕಾರದ ಆದೇಶದಂತೆ ಕೋವಿಡ್ ಸಮಯದಲ್ಲಿ, ಚಿಕ್ಕಮಗಳೂರಿನ ಕಡೂರು, ಮೂಡಿಗೆರೆ ಗ್ರಾಮಗಳ ಸುಮಾರು 69 ಗ್ರಾಮಗಳಿಗೆ ಕೋವಿಡ್ ಪರಿಕರಗಳನ್ನು ಪೂರೈಸಿದ್ದರಂತೆ. ಆದರೆ ಪರಿಕರಗಳನ್ನು ಪೂರೈಸಿ ಎರಡು ವರ್ಷಗಳಾದರೂ ಇನ್ನು ಬಿಲ್ ಪಾವತಿಯಾಗಿಲ್ಲವಂತೆ. ಪ್ರಧಾನಿ ಕಾರ್ಯಾಲಯದಿಂದ ಬಿಲ್ ಪಾವತಿಗೆ ಸೂಚನೆ ನೀಡಿದ್ದರು ಅಧಿಕಾರಿಗಳು ಮಾತ್ರ ಬಿಲ್ ಪಾವತಿಸದೆ ಹಾಗೇ ಉಳಿಸಿಕೊಂಡಿದ್ದಾರಂತೆ.
ಕಡೂರು ತಾಲೂಕಿಗೆ 85 ಲಕ್ಷ, ಮೂಡಿಗೆರೆ ತಾಲೂಕಿಗೆ 35 ಲಕ್ಷ ಹಣ ಖರ್ಚಾಗಿದೆ ಎಂದು ಅಂದಾಜಿಸಲಾಗಿದೆ. ಕಡೂರು ಇಓ ದೇವರಾಜ್ ಗುತ್ತಿಗೆದಾರನಿಗೆ ಸುಮಾರು 40% ಕಮಿಷನ್ ನೀಡಿವಂತೆ ಬೇಡಿಕೆ ಇಟ್ಟಿದ್ದಾರಂತೆ. ಆದರೆ ಕಮಿಷನ್ ಕೊಡದೆ ಇರೋದಕ್ಕೆ ಬಿಲ್ ಪಾವತಿಯಾಗುತ್ತಿಲ್ಲ ಎಂಬ ಆರೋಪದ ಮೇಲೆ ದಯಾ ಮರಣಕ್ಕೆ ಅರ್ಜಿ ಹಾಕಿದ್ದಾರೆ.