ಆ ಕಾರಣಕ್ಕಾಗಿ ಜೆಡಿಎಸ್ ಬಿಟ್ಟೆ : ಶಿವಲಿಂಗೇಗೌಡ

1 Min Read

 

ಹಾಸನ: ಜೆಡಿಎಸ್ ಪಕ್ಷ ಬಿಟ್ಟಿದ್ದರ ಬಗ್ಗೆ ಶಾಸಕ ಶಿವಲಿಂಗೇ ಗೌಡ ಗರಂ ಆಗಿಯೇ ಉತ್ತರ ನೀಡಿದ್ದಾರೆ. ಕರ್ನಾಟಕ ರಾಜ್ಯದಲ್ಲಿ ನನ್ನದೇ ಆದ ವ್ಯಕ್ತಿತ್ವ ಇದೆ. ನಾನು ಬೆಳೆದಿದ್ದೀನಿ, ರಾಜಕೀಯ ಏನು ಅಂಥಾನು ನನಗೆ ಗೊತ್ತಿದೆ. ನೀವೂ ಯಡಿಯೂರಪ್ಪ ಅವರಿಗೆ ಮುಖ್ಯಮಂತ್ರಿ ಸ್ಥಾನ ಕೊಡ್ತೀನಿ ಅಂತ ಹೇಳಿ ಅವರಿಗೆ ಅಧಿಕಾರ ಕೊಟ್ರಾ..? ಅವರಿಗೆ ಮೋಸ ಮಾಡಿದಂತೆ ಆಗಲ್ವಾ ಎಂದು ಜೆಡಿಎಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ನಾನು ಜೆಡಿಎಸ್ ಬಿಟ್ಟು ಹೋದರೆ ದ್ರೋಹ ಹೇಗಾಗುತ್ತೆ..? ನಾನು ಅಲ್ಲಿಯೇ ಇದ್ದಿದ್ದರೆ ಇನ್ನೊಂದು ಸೀಟ್ ಜಾಸ್ತಿ ಆಗೋದು ಅಷ್ಟೇ. ಏನು ದ್ರೋಹ ಮಾಡಿದ್ದೀನಿ ನಾನು. ರಾಜಕೀಯದಲ್ಲಿ ಇದೆಲ್ಲವೂ ಇದ್ದಿದ್ದೆ. ನಾನೇನು ಕೊಲೆ, ಮೋಸ ಮಾಡಿದ್ದೀನಾ..? ನನ್ನನ್ನು ಬೈಯ್ಯಲು ಒಂದು ಸಮಾವೇಶ ಮಾಡಿದ್ದು, ಅದರಲ್ಲಿ ಗೌಡ್ರು ಅವರ ಮಕ್ಕಳು ಭಾಷಣ ಮಾಡಿದ್ರು. ಪಾಪ ಆ ಅಜ್ಜ ಬರಲಿ, ಅವರ ಬಗ್ಗೆ ಗೌರವವಿದೆ. ಅವರ ಬಗ್ಗೆ ನಾನು ಮಾತನ್ನಾಡಲ್ಲ. ನೀವೂ ನಿಮ್ಮ ಮನೆಯವರಿಗೆ ಎಲ್ಲಾ ಸ್ಥಾನ ಕೊಡ್ತಿದ್ರಿ ಅದಕ್ಕೆ ನಾನು ಪಕ್ಷ ಬಿಟ್ಟೆ.

ನಾವು ಸಮಾವೇಶ ಮಾಡಿ ಬೈತಿವಿ. ಯಾರ‍್ಯಾರು ಏನೇನು ಮಾಡಿದ್ರು ಅವರು ಅನುಭವಿಸಿಕೊಳ್ತಾರೆ. ಸಿದ್ದರಾಮ್ರಣ್ಣ ಮೊದಲೇ ನನಗೆ ಚೆನ್ನಾಗಿ ದುಡ್ಡು ಕೊಡುತ್ತಿದ್ರು. ಮಂತ್ರಿಗಿರಿ ಕೊಟ್ಟರೆ ಅರಸೀಕೆರೆಗೆ ಒಳ್ಳೆಯದಾಗುತ್ತೆ. ಹೋರಾಟ ಮಾಡಲು ಕಾಂಗ್ರೆಸ್‍ಗೆ ಹೋದೆ. ಇನ್ನೇನೂ ನಿಮ್ಮ ಬಾಲ ಹಿಡ್ಕಂಡು ಕೂತ್ಕೋಬೇಕಾ? ಯಾವುದಾದರೂ ಸರ್ಕಾರ ಬಂದರೆ ಜೆಡಿಎಸ್‍ನವರು ರೆಡಿ ಇರ್ತಾರೆ. ರೇವಣ್ಣಂಗೆ ಒಂದು ಮಂತ್ರಿಗಿರಿ ಕೊಡ್ತಾರೆ. ನಾನು ಸಾಯುವವರೆಗೂ ಎಂಎಲ್‍ಎ ಆಗಿ ಇರಬೇಕಾ? ನಿಮಗೆ ಹೇಗೆ ಮಂತ್ರಿ ಆಗಬೇಕು ಅಂತ ಆಸೆ ಇದೆಯೋ ನನಗೂ ಅದೇ ರೀತಿ ಆಸೆ ಇದೆ. ನಾನು ಮಂತ್ರಿ ಆಗಲೇಬೇಕು ಅಂತ ಕಾಂಗ್ರೆಸ್‍ಗೆ ಹೋಗಿದ್ದೀನಿ ಎಂದಿದ್ದಾರೆ.

Share This Article