ಮೈಸೂರು: ಚುನಾವಣೆ ಮುಗಿದೇ ಮುಗಿಯಿತು ಈಗ ಬೆಟ್ಟಿಂಗ್ ದಂಧೆ ಶುರುವಾಗಿದೆ. ಈ ಹಿಂದೆಲ್ಲ ಕ್ರಿಕೆಟ್ ನಲ್ಲಿದ್ದ ಬೆಟ್ಟಿಂಗ್ ದಂಧೆ ಈಗ ರಾಜಕೀಯಕ್ಕೂ ಬಂದಿದೆ. ಹಲವು ಜಿಲ್ಲಿಗಳಲ್ಲಿ ಈ ಬೆಟ್ಟಿಂಗ್ ದಂಧೆ ನಡೆಯುತ್ತಿದೆ. ಈಗ ಸಿದ್ದರಾಮಯ್ಯ ಗೆದ್ದೆ ಗೆಲ್ಲುತ್ತಾರೆಂದು ವ್ಯಕ್ತಿಯೊಬ್ಬ ಬೆಟ್ಟಿಂಗ್ ಕಟ್ಟಿದ್ದಾನೆ.
ವರುಣಾದಲ್ಲಿ ಸಿದ್ದರಾಮಯ್ಯ ಗೆದ್ದೆ ಗೆಲ್ಲುತ್ತಾರೆಂದು 2 ಲಕ್ಷ ಬೆಟ್ಟಿಂಗ್ ಕಟ್ಟಿದ್ದಾನೆ ಭೂಪ. ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ವಿ ಸೋಮಣ್ಣ ಸ್ಪರ್ಧೆ ಮಾಡಿರುವ ಕ್ಷೇತ್ರ ಇದಾಗಿದೆ. ಹೈವೋಲ್ಟೇಜ್ ಕ್ಷೇತ್ರದಲ್ಲಿ ಹೈವೋಲ್ಟೇಜ್ ಬೆಟ್ಟಿಂಗ್ ನಡೆಯುತ್ತಿದೆ. ಸಿದ್ದರಾಮಯ್ಯ 100ಕ್ಕೆ ನೂರರಷ್ಟು ಗೆಲ್ಲುತ್ತಾರೆಂದು ಬೆಟ್ಸ್ ಕಟ್ಟಿದ್ದಾರೆ.
ರಾಜಕಾರಣಿಗಳ ವಿಚಾರಕ್ಕೆ ಬೆಟ್ಟಿಂಗ್ ಯಾವ ಹಂತಕ್ಕೆ ಹೋಗಿದೆ ಅಂದರೆ ಕುರಿ, ಕೋಳಿ, ಜಮೀನನ್ನು ಪಣಕ್ಕೆ ಇಟ್ಟಿದ್ದಾರೆ. ಅಭಿಮಾನಿಗಳು ಮತ್ತು ಕಾರ್ಯಕರ್ತರು ಬೆಟ್ಟಿಂಗ್ ಕಟ್ಟುವ ಮೂಲಕ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಇನ್ನು ನಾಳೆ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗುತ್ತದೆ. ನಾಳೆ ಮಧ್ಯಾಹ್ನದ ಒಳಗೆ ರಾಜಕೀಯ ಚಿತ್ರಣ ಒಂದು ಹಂತಕ್ಕೆ ಸಿಕ್ಕಿ ಬಿಡುತ್ತೆ.