ಅಮರಯಾತ್ರೆಗೆ ಆರಂಭಕ್ಕೆ ಇನ್ನೊಂದು ತಿಂಗಳಿಗೆ. ಈಗಾಗಲೇ ಯಾತ್ರೆಗೆ ಹೋಗುವವರು ಎಲ್ಲಾ ತಯಾರಿ ಮಾಡಿಕೊಂಡಿರುತ್ತಾರೆ. ಜೂನ್ 30ಕ್ಕೆ ಹೊರಡಲಿದ್ದು, ಈ ಸಂಬಂಧ ಇದೀಗ ಉಗ್ರರ ಬೆದರಿಕೆ ಪತ್ರ ಆತಂಕ ಹುಟ್ಟು ಹಾಕಿದೆ. ಆದರೆ ಯಾತ್ರೆಗೆ ನಾವೂ ಏನು ಮಾಡಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.
ಭಯೋತ್ಪಾದಕ ಸಂಘ ಟಿಆರ್ಎಫ್ ನಿಂದ ಪತ್ರ ಬಂದಿದ್ದು, ಆ ಪತ್ರದಲ್ಲಿ ಆರ್ ಎಸ್ ಎಸ್ ಮತ್ತು ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡಿರುವ ಬಗ್ಗೆ ಉಲ್ಲೇಖ ಮಾಡಲಾಗಿದೆ. ಯಾತ್ರಾರ್ಥಿಗಳ ಬಗ್ಗೆಯೂ ಬರೆದಿದ್ದು, ಯಾತ್ರಾರ್ಥಿಗಳು ಕಾಶ್ಮೀರಕ್ಕೆ ಸಮಸ್ಯೆಗೆ ಸೇರದೆ ಇರುವುದು ಉತ್ತಮ ಎಂದಿದ್ದಾರೆ.
ಈ ಆತಂಕದ ನಡುವೆಯೇ ಅಮರ ಯಾತ್ರೆಗೆ ಸಿದ್ಧತೆ ನಡೆಯುತ್ತಿದ್ದು, ಕಾಶ್ಮೀರದ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಅಮರ ಯಾತ್ರೆಗೆ ಸಂಬಂಧಿಸಿದ ಎಲ್ಲಾ ಕೆಲಸಗಳನ್ನು ಮುಗಿಸುವಂತೆ ಸೂಚನೆ ನೀಡಿದ್ದಾರೆ. ಜೂನ್ 15ರ ಒಳಗೆ ಮುಗಿಸಲು ಸೂಚಿಸಿದ್ದಾರೆ. ಜೊತೆಗೆ ಯಾತ್ರಾರ್ಥಿಗಳಿಗೆ ಉತ್ತಮ ಸೌಲಭ್ಯ ನೀಡುವುದಾಗಿಯೂ ಕಾಶ್ಮೀರ ಆಡಳಿತ ಸೂಚಿಸಿದೆ. ಇನ್ನು ಇಬ್ಬರು ಹೈಬ್ರೀಡ್ ಉಗ್ರರನ್ನು ಶ್ರೀನಗರ ಪೊಲೀಸರು ಈಗಾಗಲೇ ಬಂಧಿಸಿ, ಅವರಿಂದ ಪಿಸ್ತೂಲ್, ಸಜೀವ ಗುಂಡುಗಳನ್ನು ವಶಕ್ಕೆ ಪಡೆದಿದ್ದಾರೆ.