ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳೆಗೆರೆ, ಚಳ್ಳಕೆರೆ,
ಮೊ : 84314 13188

ಚಳ್ಳಕೆರೆ, ಮಾರ್ಚ್. 29 : ತಾಲ್ಲೂಕಿನ ಹೆಗ್ಗೆರೆ ಗ್ರಾಮದ ಫ್ಯಾಕ್ಟರಿ ಸಮೀಪ ರಾಷ್ಟ್ರೀಯ ಹೆದ್ದಾರಿ 150 ಎ ಟೆಂಪೋ ಟ್ರಾವೆಲರ್ ವಾಹನಕ್ಕೆ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಆರು ಮಂದಿಗೆ ಗಂಭೀರ ಗಾಯಗಳಾಗಿವೆ.

ಬೆಂಗಳೂರಿನಿಂದ ತಮ್ಮ ಗ್ರಾಮವಾದ ತಳಕು ಜೆಮ್ಲಾ ನಾಯಕನಹಟ್ಟಿ ಗ್ರಾಮಕ್ಕೆ ಟಿ.ಟಿ ವಾಹನದಲ್ಲಿ ಬರುತ್ತಿರುವಾಗ ಟಿಪ್ಪರ್ ವಾಹನ ಟಿಟಿ ವಾಹನಕ್ಕೆ ಡಿಕ್ಕಿ ಹೊಡೆದಿದೆ. ಈ ವೇಳೆ ಟಿ.ಟಿ ವಾಹನದಲ್ಲಿ ಒಟ್ಟು ಚಾಲಕ ಸೇರಿದಂತೆ ಒಟ್ಟು 10 ಮಂದಿ ಇದ್ದು ಇವರಲ್ಲಿ ಕುಮಾರ ನಾಯ್ಕ್ (46 ವರ್ಷ) ಶಂಕರ್ ಬಾಯಿ (65) ಮತ್ತು ಶ್ವೇತ ಎ.(38) ಮೃತರು. ಗಾಯಳುಗಳಾದ ಲಕ್ಷ್ಮೀ ಬಾಯಿ,(75) ಪ್ರಶಾಂತ (38) ಶೈಲಜ (38), ಪುಷ್ಪವತಿ(19) ಟಿ.ಕೆ.ಪ್ರೀತಮ್ ಕುಮಾರ್ (16) ತಿಪ್ಪೇಸ್ವಾಮಿ(43) ಯವರಿಗೆ ಗಾಯಗಳಾಗಿದ್ದು, ಚಳ್ಳಕೆರೆ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಚಳ್ಳಕೆರೆ ಪೊಲೀಸರು ಭೇಟಿ ನೀಡಿದ್ದು ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

