ಶಿವಮೊಗ್ಗದಲ್ಲಿ ಭೀಕರ ಅಪಘಾತ: ಚಿತ್ರದುರ್ಗದ ಮೂವರು ಸಾವು..!

suddionenews
1 Min Read

ಶಿವಮೊಗ್ಗ: ಎರಡು ಕಾರುಗಳ ನಡುವೆ ಭೀಕರ ಅಪಘಾತ ಸಂಭವಿಸಿದ ಪರಿಣಾಮ ಸ್ಥಳದಲ್ಲೇ ಮೂರು ಜನ ಮೃತಪಟ್ಟಿದ್ದಾರೆ. ಶಿವಮೊಗ್ಗದ ಲಯನ್ ಸಫಾರಿ ಬಳಿ ಈ ದುರ್ಘಟನೆ ನಡೆದಿದ್ದು, ಮೃತರು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ದೊಡ್ಡೆರಿ ಗ್ರಾಮದವರು ಎನ್ನಲಾಗಿದೆ. ಚಂದ್ರಣ್ಣ, ಸಿದ್ದು, ಇಮಾಮ್ ಸಾಬ್ ಮೃತ ದುರ್ದೈವಿಗಳು.

 

ಮೃತ ಸಿದ್ದೇಶ್ ಸಾಗರಕ್ಕೆ ತೆರಳಿ ಅಲ್ಲಿಂದ ಪಾರ್ಶ್ವವಾಯುವಿಗೆ ಔಷಧಿ ಪಡೆದು ಹಿಂದಿರುಗುವಾಗ ಘಟನೆ ನಡೆದಿದೆ. ಶಿವಮೊಗ್ಗದಿಂದ ಸಾಗರ ಕಡೆ ತೆರಳುತ್ತಿದ್ದ ಕಾರು ಹಾಗೂ ಸಾಗರದಿಂದ ಶಿವಮೊಗ್ಗದ ಕಡೆ ಬರುತ್ತಿದ್ದ ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಮೂರು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದು, ಕಾರಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಕಂಸಿ ಸಂಚಾರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮೂವರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಅಪಘಾತದ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿದೆ. ಮೇಲ್ನೋಟಕ್ಕೆ ಅತಿವೇಗದ ಚಾಲನೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸದ್ಯ ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದ ಕಾರುಗಳನ್ನು ತೆರವು ಮಾಡಲಾಗಿದೆ. ಈ ವಿಷಯ ತಿಳಿದು ಮನೆಯವರಲ್ಲಿ ದುಃಖ ಮರುಗಟ್ಟಿದೆ. ಮಕ್ಕಳನ್ನು ಕಳೆದುಕೊಂಡ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ. ಮರಣೋತ್ತರ ಪರೀಕ್ಷೆಯ ಬಳಿಕ ಮೃತದೇಹಗಳನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಲಿದ್ದಾರೆ. ಸದ್ಯ ರಸ್ತೆಯಲ್ಲಿ ಕಾರುಗಳ ಬಿಡಿಭಾಗಗಳನ್ನೆಲ್ಲ ಎತ್ತಿಸುತ್ತಿದ್ದಾರೆ.

ಪೊಲೀಸರು ಅತಿವೇಗ ಬೇಡ ಎಂದೇ ಯಾವಾಗಲೂ ಹೇಳುತ್ತಿರುತ್ತಾರೆ. ಆದರೆ ಈ ರೀತಿಯ ಅತಿವೇಗದ ಚಾಲನೆ ಜೀವವನ್ನೇ ತೆಗೆದು ಬಿಡುತ್ತದೆ. ಪ್ರತಿ ದಿನ ಆಕ್ಸಿಡೆಂಟ್ ಗಳನ್ನ ನೋಡುತ್ತಲೇ ಇರುತ್ತೇವೆ. ವಾಹನ ಚಾಲನೆ ಮಾಡುವವರು ಕೊಂಚ ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಎಚ್ಚರಿಕೆ ತಪ್ಪಿದರೆ ಅನಾಹುತವಾಗುವುದು ಗ್ಯಾರಂಟಿ.

Share This Article
Leave a Comment

Leave a Reply

Your email address will not be published. Required fields are marked *