ಕೋಲಾರ: ಕೂಲಿ ಮಾಡಿ ಅಂದಿನ ಜೀವನ ಅಂದು ನಡೆಸಿದರೆ ಸಾಕಾಗಿರುತ್ತೆ. ಸಾವಿರ ಕನಸಿಲ್ಲದಿದ್ದರು ನಾಳೆಯ ಕನಸೊತ್ತು ಕೂಲಿಗೆ ಹೋಗುತ್ತಿದ್ದವರು ಅವರು. ಆದರೆ ಯಮರಾಯ ಇಂದು ಅವರನ್ನು ತಮ್ಮ ವಿಳಾಸಕ್ಕೆ ಕರೆದುಕೊಂಡು ಹೋಗಿದೆ. ಕೂಲಿ ಮುಗಿಸಿ ಬರುವಾಗ ಕೋಲಾರದ ಮುಖ್ಯ ರಸ್ತೆಯಲ್ಲಿಯೇ ಅಪಘಾತವಾಗಿದೆ. ಆಕ್ಸಿಡೆಂಟ್ ಆದ ರಭಸಕ್ಕೆ ನಾಲ್ವರು ಪ್ರಾಣ ಕಳೆದುಕೊಂಡಿದ್ದಾರೆ.
ಮುಳಬಾಗಿಲು ತಾಲೂಕಿನ ಎನ್. ವಡ್ಡಹಳ್ಳಿಯಿಂದ ಗುಡಿಪಲ್ಲಿ ಕಡೆಗೆ ಹೋಗುತ್ತಿದ್ದರು. ಮೃತರು ಬೈಕ್ ನಲ್ಲಿ ತೆರಳುತ್ತಿದ್ದರು. ಆದರೆ ಎದುರಿಗೆ ಬಂದಂತ ಬೊಲೆರೋ ಯರ್ರಾಬಿರ್ರಿ ಬಂದ ಕಾರಣ ನಾಲ್ವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. 45 ವರ್ಷದ ರಾಧಪ್ಪ, 45 ವರ್ಷದ ವೆಂಕಟರಾಮಪ್ಪ, 30 ವರ್ಷದ ಅಲಮೇಲಮ್ಮ, ಗಾಯತ್ರಿ ಮೃತಪಟ್ಟವರು. ಬೋಕೆರೋ ವಾಹನ ಜೋರಾಗಿ ಬಂದಿದ್ದೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ. ಸ್ಥಳದಲ್ಲಿಯೇ ನಾಲ್ವರು ಮೃತಪಟ್ಟರೆ, ಇನ್ನೊಬ್ಬರಿಗೆ ಗಂಭೀರ ಗಾಯವಾಗಿದೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಗಾಯತ್ರಿ ಹಾಗೂ ವೆಂಕಟರಾಮಪ್ಪ ದಂಪತಿ ಕೂಲಿ ಕೆಲಸ ಮುಗಿಸಿ, ತಮ್ಮ ದ್ವಿ ಚಕ್ರ ವಾಹನದಲ್ಲಿ ಮನೆಗೆ ವಾಪಾಸ್ಸಾಗುತ್ತಿದ್ದರು. ಈ ವೇಎ ಈ ದುರ್ಘಟನೆ ನಡೆದಿದೆ. ವೆಂಕಟರಾಮಪ್ಪ ಹಾಗೂ ಅಲಮೇಲಮ್ಮ ದಂಪತಿ ಆಸ್ಪತ್ರೆಗೆಂದು ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದರು. ಈ ವೇಳೆ ಬೊಲೆರೋ ವಾಹನದಿಂದಾಗಿ ಎರಡು ಜೋಡಿ ಅಂತ್ಯ ಕಂಡಿದೆ. ಸಾವು ಅನ್ನೋದು ಯಾರಿಗೆ ಯಾವಾಗ ಬರುತ್ತೆ ಅನ್ನೋದು ಗೊತ್ತಿರಲ್ಲ. ಹಾಗೇ ಗಂಡಾಂತರ ಎಂಬುದು ಇರುತ್ತದೆ. ಆ ಗಂಡಾಂತರಗಳು ಕಳೆದರು ನೂರು ವರ್ಷ ಬದುಕಿರುತ್ತಾರೆ ಎಂಬ ಮಾತಿದೆ. ಹಾಗೇ ಈ ಬೊಲೆರೋ ಗಂಡಾಂತರ ಕಳೆದಿದ್ದರೆ ಮೃತ ದಂಪತಿಗಳಿಗೆ ಆಯಸ್ಸು ಜಾಸ್ತಿ ಇರುತ್ತಾ ಇತ್ತೇನೋ.