ಸದ್ಯ ರಾಜ್ಯ ರಾಜಕಾರಣದಲ್ಲಿ ಬ್ರಾಹ್ಮಣ ಸಮುದಾಯದ ಸಿಎಂ ವಿಚಾರ ಸಿಕ್ಕಾಪಟ್ಟೆ ಚರ್ಚೆ ಹುಟ್ಟು ಹಾಕಿದೆ. ಕುಮಾರಸ್ವಾಮಿ ಹೇಳಿರುವಂತ ಮಾತು ಬಿಜೆಪಿ ನಾಯಕರಿಗೆ ತಲೆ ನೋವಾಗಿದೆ. ಪ್ರಹ್ಲಾದ್ ಜೋಶಿಯನ್ನು ಸಿಎಂ ಮಾಡುವುದಕ್ಕೆ ಪ್ಲ್ಯಾನ್ ನಡೀತಾ ಇದೆ ಎಂಬ ಮಾತು ಭಾರೀ ಚರ್ಚೆ ಹುಟ್ಟು ಹಾಕಿದೆ.
ಈ ಹಿಂದೊಮ್ಮೆ ಬಸವರಾಜ್ ಬೊಮ್ಮಾಯಿ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬೇಕು ಎಂಬ ಮಾತುಗಳು ಬಂದಾಗ, ಪ್ರಹ್ಲಾದ್ ಜೋಶಿ ಅವರನ್ನು ಸಿಎಂ ಮಾಡಲಿದ್ದಾರೆ ಎನ್ನಲಾಗುತ್ತಾ ಇತ್ತು. ಆದರೆ ಆ ಸಮಯದಲ್ಲಿ ಆ ವಿಚಾರ ಅಷ್ಟಾಗಿ ಏನು ಸದ್ದು ಮಾಡಲಿಲ್ಲ. ಆದರೆ ಈಗ ಅದೇ ಸತ್ಯವಿರಬೇಕು ಎಂಬ ಅನುಮಾನಗಳು ಬಿಜೆಪಿ ವಯಲದಲ್ಲಿ ಆರಂಭವಾಗಿದೆ.
ಇನ್ನು ಇದಷ್ಟೆ ಅಲ್ಲದೆ ಬಿಜೆಪಿ ನಾಯಕರಿಗೆ ಈಗ ಟೆನ್ಶನ್ ಶುರುವಾಗಿದೆ. ಯಾಕಂದ್ರೆ ಬಿಜೆಪಿಯ ಮತ ಬ್ಯಾಂಕ್ ಎಂದರೇನೆ ಅದು ಲಿಂಗಾಯತ ಸಮುದಾಯದ ವೋಟುಗಳು. ಬ್ರಾಹ್ಮಣ ಸಮುದಾಯಕ್ಕೆ ಸಿಎಂ ಸ್ಥಾನ ನೀಡಿದರೆ ಸಹಜವಾಗಿಯೇ ಲಿಂಗಾಯತ ಸಮುದಾಯ ದಂಗೆ ಏಳುತ್ತೆ. ಈ ಹಿಂದೆ ಯಡಿಯೂರಪ್ಪ ಅವರನ್ನೇ ಸಿಎಂ ಸ್ಥಾನದಿಂದ ಕೆಳಗಿಳಿಸುವಾಗ ಅಸಮಾಧಾನದ ಹೊಗೆಯಾಡುತ್ತಿತ್ತು. ಈಗ ಬ್ರಾಹ್ಮಣ ಸಿಎಂ ಅಂದ್ರೆ ಸ್ವಲ್ಪ ಯೋಚನೆ ಮಾಡುತ್ತಾರೆ.
ಇನ್ನು ಚುನಾವಣೆಗೂ ಮುನ್ನವೇ ಸಿಎಂ ಅಭ್ಯರ್ಥಿಯನ್ನು ಘೋಷಿಸುವಂತಿಲ್ಲ. ಆದ್ರೆ ಕುಮಾರಸ್ವಾಮಿ ಬಿಟ್ಟಿರುವ ಹುಳಕ್ಕೆ ಬೇಸತ್ತು, ಸಿಎಂ ಅಭ್ಯರ್ಥಿಯನ್ನು ಮೊದಲೇ ಘೋಷಣೆ ಮಾಡುವಂತೆ ಒತ್ತಡ ಕೂಡ ಹೇರಬಹುದು.