ಬೆಂಗಳೂರು: ಮಹಿಲಕೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚುವ ಹೆಚ್ ಡಿ ರೇವಣ್ಣ ಇನ್ನು ಸಂಕಷ್ಟದಲ್ಲಿಯೇ ಇದ್ದಾರೆ. ಮೊನ್ನೆಯಷ್ಟೇ ಜೈಲಿನಿಂದ ಷರತ್ತು ಬದ್ಧ ಜಾಮೀನು ಪಡೆದು ರಿಲೀಸ್ ಆಗಿರುವ ರೇವಣ್ಣ ಇಂದು ಮತ್ತೆ ಕೋರ್ಟ್ ಗೆ ಹಾಜರಾಗಿದ್ದರು. 42ನೇ ಎಸಿಎಂಎಂ ಜನಪ್ರತಿನಿಧಿಗಳ ಕೋರ್ಟ್ ಗೆ ಹಾಜರಾಗಿದ್ದರು. ವಿಚಾರಣೆ ನಡೆಸಿದ ಕೋರ್ಟ್ ಸೋನವಾರಕ್ಕೆ ತೀರ್ಪನ್ನು ಕಾಯ್ದಿರಿಸಿದೆ. ಈ ಮೂಲಕ ಮೂರು ದಿನಗಳ ಕಾಲ ತಾತ್ಕಾಲಿಕ ರಿಲೀಫ್ ಸಿಕ್ಕಿದೆ.
ಇಂದು ಕೂಡ ಕೋರ್ಟ್ ನಲ್ಲಿ ಸರ್ಕಾರಿ ವಕೀಲ ಹಾಗೂ ರೇವಣ್ಣ ಒರ ವಕೀಲರ ನಡುವೆ ವಾದ-ಪ್ರತಿವಾದ ನಡೆದಿದೆ. ಇಬ್ಬರು ವಕೀಲರ ವಾದ-ಪ್ರತಿವಾದವನ್ನು ಆಲಿಸಿದ ಕೋರ್ಟ್ ತೀರ್ಪನ್ನು ಕಾಯ್ದಿರಿಸಿದೆ. ಸದ್ಯಕ್ಕೆ ರೇವಣ್ಣ ಅವರ ಮದ್ಯಂತರ ಜಾಮೀನು ಮುಂದುವರಿಕೆಯಾಗಿದೆ. ಮಹಿಳೆಯ ಕಿಡ್ನ್ಯಾಪ್ ಹಾಗೂ ಲೈಂಗಿಕ ಕಿರುಕುಳಕ್ಕೆ ಸಂಬಂಧಿಸಿದಂತೆ ಬೇಲೆಬಲ್ ಸೆಕ್ಷನ್ ದಾಖಲಾದ ಹಿನ್ನೆಲೆ ರೇವಣ್ಣ ಅವರು ನಿನ್ನೆಯೇ ಕೋರ್ಟ್ ಗೆ ಹಾಜರಾಗಿದ್ದರು. ಬಳಿಕ ರೇವಣ್ಣ ಅವರಿಗೆ ಮಧ್ಯಂತರ ಜಾಮೀನು ನೀಡಲಾಗಿತ್ತು. ಇಂದು ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ತೀರ್ಪು ಕಾಯ್ದಿರಿಸಿದೆ. ಜೂನ್ 20 ಕ್ಕೆ ಮತ್ತೆ ವಿಚಾರಣೆ ನಡೆಯಲಿದೆ.
ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ಪ್ರಜ್ವಲ್ ವಿದೇಶದಲ್ಲಿಯೇ ಉಳಿದು ಬಿಟ್ಟಿದ್ದಾರೆ. ಆದರೆ ಅದೇ ಕೇಸಲ್ಲಿ ಮಹಿಳೆ ಕಿಡ್ನ್ಯಾಪ್ ಮಾಡಿದ ಪ್ರಕರಣದಲ್ಲಿ ಅವರ ತಂದೆ ರೇವಣ್ಣ ಕೋರ್ಟ್, ಕೇಸ್ ಅಂತ ಓಡಾಟ ನಡೆಸಿದ್ದಾರೆ. ಜೈಲಿನಿಂದ ಬಿಡುಗಡೆಯಾಗಿ ಬಂದಾಗಿನಿಂದ ರೇವಣ್ಣ ಅವರು ದೇವಸ್ಥಾನಗಳಿಗೆ ಓಡಾಡುತ್ತಿದ್ದಾರೆ. ದೇವರಿಗೆ ವಿಶೇಷ ಪೂಜೆ ಮಾಡಿಸುತ್ತಿದ್ದಾರೆ. ಮೇ 20ಕ್ಕೆ ಮತ್ತೆ ಕೋರ್ಟ್ ವಿಚಾರಣೆ ನಡೆಸಲಿದ್ದು, ರೇವಣ್ಣ ಅವರ ಭವಿಷ್ಯ ತಿಳಿಯಲಿದೆ.