ಮಂಗಳೂರು: ಇಲ್ಲಿನ ಮಳಲಿಯ ಮದನಿ ದರ್ಗಾವನ್ನು ಇತ್ತಿಚೆಗೆ ನವೀಕರಣಕ್ಕೆಂದು ಕೆಡವಲಾಗಿತ್ತು. ಈ ವೇಳೆ ಮಸೀದಿಯ ಒಳಗೆ ದೇಗುಲದ ಕುರುಹುಗಳು ಪತ್ತೆಯಾಗಿದ್ದವು. ದೇಗುಲದ ಕಳಸ, ತೋಮರ, ಕಂಬಗಳಂತ ಮಾದರಿ ಪತ್ತೆಯಾಗಿತ್ತು. ಈ ಹಿನ್ನೆಲೆ ಅಲ್ಲಿನ ಜಿಲ್ಲಾಡಳಿತ ದರ್ಗಾ ಕಾಮಗಾರಿಯನ್ನು ಸ್ಥಗಿತಗೊಳಿಸಿತ್ತು. ಮಸೀದಿ ಜಾಗಕ್ಕೆ ಹಿಂದೂಪರ ಸಂಘಟನೆಗಳು ಭೇಟಿ ನೀಡಿ ಪರಿಶೀಲನೆಯನ್ನು ಮಾಡಿದ್ದರು. ಇಂದು ದೇಗುಲದ ಬಳಿ ತಾಂಬೂಲದ ಪ್ರಶ್ನೆಗೆ ಸಿದ್ಧತೆ ಮಾಡಿದ್ದರು.
ಇದಕ್ಕಾಗಿ ಕೇರಳದ ಪುದುವಾಲ್ ನೇತೃತ್ವದಲ್ಲಿ ತಾಂಬೂಲ ಪ್ರಶ್ನೆ ಮಾಡಿತ್ತು. ತಾಂಬೂಲ ಪ್ರಶ್ನೆಯ ಬಳಿಕ ದೈವಜ್ಞ ಗೋಪಾಲಕೃಷ್ಣ ಪಣಿಕ್ಕರ್ ಉತ್ತರ ನೀಡಿದ್ದು, ಯಜಮಾನರು 9 ತಾಂಬೂಲ ನೀಡಿದ್ದಾರೆ. ಅದಕ್ಕೆ ದೇವರ ದಯೆ ಇದೆ. ಇದು ಮೇಲ್ನೋಟಕ್ಕೆ ದೇವಸ್ಥಾನವಿದ್ದ ಭೂಮಿ ಎಂಬುದು ಗೊತ್ತಾಗಿದೆ ಎಂದಿದ್ದಾರೆ.
ಈ ಜಾಗ ಮಠ ಮತ್ತು ಆರಾಧನೆಯಾದ ಜಾಗ ಎಂಬ ಸುಳಿವು ಸಿಕ್ಕಿದೆ. ಇದರಲ್ಲಿ ಯಾವುದೇ ಅನುಮಾನವಿಲ್ಲ. ಅದು ದೈವ ಸಾನಿದ್ಯವಾದ ಭೂಮಿ. ಪೂರ್ವ ಕಾಲದಲ್ಲಿ ಮಠವಾಗಿತ್ತು ಎನಿಸುತ್ತದೆ. ಸಾಮಾನ್ಯ ತಾಂಬೂಲ ಶಾಸ್ತ್ರದಿಂದ ಇದು ಯಾವ ದೈವ ಸಾನಿದ್ಯ ಎಂಬುದು ತಿಳಿಯಲು ಸಾಧ್ಯವಿಲ್ಲ. ಆ ಜಾಗದಲ್ಲಿ ಇನ್ನೂ ಶಕ್ತಿಗಳು ಇವೆ. ಈ ಸಾನಿಧ್ಯಕ್ಕೆ ದೇವರ ಬಲ ಇದೆ. ಅಲ್ಲಿ ಅಭಿವೃದ್ಧಿ ಆಗದೆ ಇದ್ದರೆ ಊರಿಗೆ ಸಮಸ್ಯೆ ಎದುರಾಗುತ್ತದೆ ಎಂದಿದ್ದಾರೆ.