ಮೈಸೂರು: ರಾಜ್ಯ ರಾಜಕೀಯದಲ್ಲಿ ಬಿಟ್ ಕಾಯಿನ್ ದಂಧೆ ವಿಚಾರ ಭಾರೀ ಸದ್ದು ಮಾಡ್ತಿದೆ. ಈ ಬಿಟ್ ಕಾಯಿನ್ ದಂಧೆ ವಿಚಾರ ಬಿಜೆಪಿ ಹಾಗೂ ಕಾಂಗ್ರೆಸ್ ನಡುವಿನ ಕೆಸರೆರಚಾಟವಾಗಿದೆ. ಒಬ್ಬರಿಗೊಬ್ಬರು ತಿರುಗೇಟು ನೀಡೋದಕ್ಕೆ ಶುರು ಮಾಡಿದ್ದಾರೆ.
ಇದೀಗ ಸಂಸದ ಪ್ರತಾಪ್ ಸಿಂಹ ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಸವಾಲು ಹಾಕಿದ್ದಾರೆ. ಹದಿಮೂರು ಬಾರಿ ಬಜೆಟ್ ಮಂಡಿಸಿರುವ ಅರ್ಥಶಾಸ್ತ್ರಜ್ಞ ಸಿದ್ದರಾಮಯ್ಯ ಅವರೇ ಬಿಟ್ ಕಾಯಿನ್ ಅಂದ್ರೇನು..? ಅದರ ವ್ಯವಹಾರ ಹೇಗೆ ನಡೆಯುತ್ತೆ ಅಂತ ಒಮ್ಮೆ ವಿವರಿಸಿ ಎಂದಿದ್ದಾರೆ.
ಈ ಕೇಸ್ ಗೆ ಸಂಬಂಧಿಸಿದಂತೆ ಕಾಂಗ್ರೆಸ್ ನವರು ಬಿಜೆಪಿ ವಿರುದ್ಧ ಆರೋಪಿಸಿದ್ದಾರೆ. ಆದ್ರೆ ಕಾಂಗ್ರೆಸ್ ನವರೇ ನಿರೀಕ್ಷಣಾ ಜಾಮೀನಿಗೆ ಅರ್ಜಿ ಸಲ್ಲಿಸಿದ್ದಾರೆ ಯಾಕೆ..? ಅವರಿವರ ಹೆಸರನ್ನ ಯಾಕೆ ತೇಲಿ ಬಿಡುತ್ತೀರಿ.. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗಲೇ ಇದು ಬೆಳಕಿಗೆ ಬಂದಿತ್ತು ಎಂದಿದ್ದಾರೆ.