ಬೆಂಗಳೂರು: ಥಟ್ ಅಂತ ಹೇಳಿ… ಪಾವಗಡದಲ್ಲಿ ಸೋಲಾರ್ ಪಾರ್ಕ್ ನಿರ್ಮಾಣ ಯೋಜನೆಯ ಹೆಸರಲ್ಲಿ ಸಾವಿರಾರು ಕೋಟಿ ರೂಪಾಯಿ ಕೊಳ್ಳೆ ಹೊಡೆಯುವುದಲ್ಲದೇ, 295 ಚೇಲಾಗಳ ಅರ್ಜಿಗಳನ್ನು ಆಯ್ಕೆ ಮಾಡಿ ಕೇವಲ 8 ನಿಮಿಷದಲ್ಲೇ ಟೆಂಡರ್ ಪ್ರಕ್ರಿಯೆ ಮುಗಿಸಿದ್ದರು. ಯಾರವರು? ಎಂದು ಬಿಜೆಪಿ ಕರ್ನಾಟಕ ಟ್ವೀಟ್ ಮಾಡಿದೆ.
ಪಿಎಫ್ಐ ನಿಷೇಧಿಸಿದ ಬಳಿಕ ಎಸ್‌ಡಿಪಿಐ ಜತೆಗೆ ಒಪ್ಪಂದ ಮಾಡಿಕೊಂಡಿರುವ @siddaramaiah ಅವರೇ, ಆ ಒಪ್ಪಂದ ಏನು ಬಹಿರಂಗಪಡಿಸಿ. ಸಿದ್ಧಾಂತವೇ ಇಲ್ಲದೆ ಯಾರ ಜತೆಗೆ ಬೇಕಾದರೂ ಒಪ್ಪಂದಗಳನ್ನು ಮಾಡಿಕೊಳ್ಳುವ ನೀವು, ತಮ್ಮಂತೆ ಪರರನ್ನು ಬಗೆದರೆ ಹೇಗೆ?
ಉಡುಪಿಯಲ್ಲಿ ಹಿಜಾಬ್ ಗಲಾಟೆ ನಡೆದಾಗ ನೀವಾಗಲಿ ನಿಮ್ಮಪಕ್ಷವಾಗಲಿ ಅದನ್ನು ವಿರೋಧಿಸಲಿಲ್ಲ, ಮಹಿಳೆಯರ ಹಕ್ಕುಗಳನ್ನು ದಮನ ಮಾಡುವ ಶಕ್ತಿಗಳ ಪರ ನೀವು ಮೌನ ವಹಿಸಿದ್ದೇಕೆ @siddaramaiah? ಇದೀಗ ಮುಸ್ಲಿಂ ರಾಷ್ಟ್ರಗಳ ಕಾಲೇಜ್‌ಗಳಲ್ಲೂ ಹಿಜಾಬ್‌ಗೆ ನಿಷೇಧವಿದೆ. ಅಲ್ಲಿನ ಮಾಧ್ಯಮಗಳಿಗೂ ನೀವು ಹೇಳಿಕೆ ಕೊಡುವಿರಾ?
ಅದೇನೆ ಇರಲಿ ನಿಮ್ಮ ಪಕ್ಷದ ಹಾಗೂ ನಿಷೇಧಿತ ಪಿಎಫ್ಐ ನಡುವಿನ ಸಂಬಂಧ ಗುಟ್ಟಾಗೇನೂ ಉಳಿದಿರಲಿಲ್ಲ. ಅಧಿಕಾರಕ್ಕಾಗಿ ದೇಶದ ಹಲವು ಕಡೆ ಮೂಲಭೂತವಾದಿ ಇಸ್ಲಾಮಿಕ್ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಂಡಿರುವ ಕಾಂಗ್ರೆಸ್ ಪಾರ್ಟಿಗೆ ಕರ್ನಾಟಕದಲ್ಲಿ ಎಸ್‌ಡಿಪಿಐ ಆಸರೆ ಎಂಬ ಸತ್ಯ ತಾವೇ ಈ ಮೂಲಕ ಒಪ್ಪಿಕೊಂಡಿರಲ್ಲವೆ ಎಂದು ಸರಣಿ ಟ್ವೀಟ್ ಮೂಲಕ ಪ್ರಶ್ನಿಸಿದೆ.