ಬೆಂಗಳೂರು: ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಆರೋಪ ವಿಚಾರವಾಗಿ ಸಚಿವ ಸುಧಾಕರ್ ಹೇಳಿಕೆ ನೀಡಿದ್ದು, ಗೃಹಸಚಿವರಾದವರು ಮುಖ್ಯಮಂತ್ರಿ ಆಗಿದ್ದಾರೆ. ಇಷ್ಟು ವೇಗವಾಗಿ ತನಿಖೆ ನಡೆಯುತ್ತಿದೆ. ಎಡಿಜಿಪಿ ಅಂತಹ ಅಧಿಕಾರಿ ಬಂಧನ ಆಗಿದೆ ಎಂದಿದ್ದಾರೆ.

ಹಿಂದೆ ಎಲ್ಲಾದ್ರೂ ಆಗಿದೆಯಾ.? ಬೇರೆ ಯಾವ ರಾಜ್ಯದಲ್ಲಾದ್ರೂ ಆಗಿದೆಯಾ ಹೇಳಿ.?. ಹಿಂದಿನ ಸರ್ಕಾರದಲ್ಲಿ ಸಮಿತಿ ಮಾಡಿದ್ರೂ ಯಾರನ್ನೂ ಬಂಧಿಸಲಿಲ್ಲ. ಅನೇಕರ ಮೇಲೆ ಆರೋಪ ಬಂದಿರೋದನ್ನ ಹಲವರು ಹೇಳಿದ್ರು. ಹಾಗಂತ ನೇರವಾಗಿ ಅವರ ಮೇಲೆ ಹೇಳಲಾಗುತ್ತಾ.? ಎಲ್ಲದಕ್ಕೂ ಸಾಕ್ಷಿ ಬೇಕಿದೆ.

ಈ ಪ್ರಕರಣದಲ್ಲಿ ಬಂಧನ ಆಗಿದೆ. ಅದನ್ನ ಸಿದ್ದರಾಮಯ್ಯ ಅವರು ಪ್ರಶಂಸೆ ಮಾಡಬೇಕು. ಅದು ಬಿಟ್ಟು ಈ ರೀತಿ ಹೇಳಿಕೆ ನೀಡಿ ವೈಯಕ್ತಿಕ ತೇಜೋವದೆ ಮಾಡಬಾರದು. ಸಿದ್ದರಾಮಯ್ಯ ಹಾಗೂ ಡಿಕೆಶಿ ಹೇಳಿದ ಮಾತ್ರಕ್ಕೆ ಯಾರೂ ಅಪರಾಧಿಗಳು ಆಗಲ್ಲ. ಏನು ದಾಖಲೆ ಇದೆ, ದಾಖಲೆ ಕೊಡಲಿ. ಅವರ ಗುರುತರ ಆಪಾದನೆ ಸರಿಯಲ್ಲ.
ಪ್ರಜಾಪ್ರಭುತ್ವದಲ್ಲಿ ಸಾಕ್ಷಿ ಇಲ್ಲದೆ ಮಾತನಾಡಬಾರದು. ಅದು ಸಿದ್ದರಾಮಯ್ಯ ಅವರ ವಯಕ್ತಿಕ ಜೀವನಕ್ಕೂ ಶೋಭೆ ತರೋದಿಲ್ಲ. ನಾನು ಒಕ್ಕಲಿಗ, ಹಾಗೆಂದ ಮಾತ್ರಕ್ಕೆ ಒಕ್ಕಲಿಗ ಅಭ್ಯರ್ಥಿಗಳೆಲ್ಲ ನನ್ನ ಸಂಬಂಧಿಕರಾಗ್ತಾರಾ.? ಎಂದು ಸಿದ್ದರಾಮಯ್ಯ ಹಾಗೂ ಡಿಕೆಶಿ ವಿರುದ್ಧ ಸುಧಾಕರ್ ಆಕ್ರೋಶ ವ್ಯಕ್ತಪಡಿಸಿದರು.

