ತೆಲಂಗಾಣ : ಕೆಲವೊಂದು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಳ ಉಡುಪು ತೆಗೆಸಿರುವುದು, ತಾಳಿ ತೆಗೆಸಿರುವುದು ಈ ಎಲ್ಲಾ ಉದಾಹರಣೆಗಳನ್ನು ನೋಡಿದ್ದೀವಿ. ಇದೀಗ ಅಂಥದ್ದೆ ಘಟನೆ ತೆಲಂಗಾಣದಲ್ಲಿ ನಡೆದಿದೆ. ಪರೀಕ್ಷೆ ವೇಳೆ ಹಿಂದೂ ಅಭ್ಯರ್ಥಿಗಳ ತಾಳಿ ತೆಗೆಸಿದ್ದಾರೆ. ಆದರೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಬುರ್ಕಾ ಧರಿಸುವುದಕ್ಕೆ ಅವಕಾಶ ನೀಡಿದ್ದಾರೆ. ಈ ಘಟನೆಗೆ ಇದೀಗ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ.

This happened yesterday at a Group-1 examination centre in Telangana.
Burqa is allowed but earrings, bangles and payal must be removed. Height of appeasement. Shameful indeed. pic.twitter.com/KL10IG054M
— Priti Gandhi (@MrsGandhi) October 18, 2022
ಅಕ್ಬೋಬರ್ 16ರಂದು ತೆಲಂಗಾಣ ರಾಜ್ಯ ಸಾರ್ವಜನಿಕ ಸೇವಾ ಪರೀಕ್ಷೆ ನಡೆದಿದೆ. ಅದಿಲಾಬಾದ್ ನ ಡಿಗ್ರಿ ಕಾಲೇಜಿನಲ್ಲಿ ಈ ಪರೀಕ್ಷೆ ನಡೆದಿದೆ. ಪರೀಕ್ಷೆಗೆ ಬಿಡುವಾಗ ನಡೆದ ಘಟನೆ ಎಲ್ಲೆಡೆ ವೈರಲ್ ಆಗಿದೆ. ಹಿಂದೂ ಮಹಿಳೆಯರ ಮಂಗಳ ಸೂತ್ರ ತೆಗೆಸಿದ್ದು ವ್ಯಾಪಕ ಚರ್ಚೆಗೆ ಕಾರಣವಾಗಿದೆ. ಅಷ್ಟೇ ಅಲ್ಲದೆ ಮುಸ್ಲಿಂ ಹೆಣ್ಣು ಮಕ್ಕಳಿಗೆ ಮಾತ್ರ ಹಾಗೆಯೇ ಬುರ್ಕಾ ಹಾಕಿಕೊಂಡಿದ್ದರು ಬಿಟ್ಟು ಕಳುಹಿಸಿದ್ದಾರೆ.

ಪರೀಕ್ಷಾ ಕೇಂದ್ರದಲ್ಲಿ ಮುಸ್ಲಿಂ ಮಹಿಳೆಯರಿಗೆ ಬುರ್ಕಾ ಹಾಕುವುದಕ್ಕೆ ಅವಕಾಶವಿದೆ. ಆದರೆ ಹಿಂದೂ ಮಹಿಳೆಯರು ತಾಳಿ, ಬಳೆ, ಕುಂಕುಮ ಇಡುವುದಕ್ಕೆ ಅವಕಾಶವಿಲ್ಲ. ಇದು ಯಾವ ರೀತಿಯ ನ್ಯಾಯ..? ಎಂದು ನೆಟ್ಟಿಗರು ತೆಲಂಗಾಣ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.


