ಬೆಂಗಳೂರು: ಚುನಾವಣೆ ಹತ್ತಿರ ಬಂದಂತೆ ರಾಜಕೀಯ ಪಕ್ಷಗಳು, ರಾಜಕಾರಣಿಗಳು ಫುಲ್ ಆಕ್ಟೀವ್ ಆಗಿ ಬಿಡುತ್ತಾರೆ. ಇದೀಗ ಮಾಜಿ ಸಿಎಂ ಕುಮಾರಸ್ವಾಮಿ ಹಾಗೂ ತೆಲಂಗಾಣ ಸಿಎಂ ಕೆಸಿಆರ್ ಭೇಟಿಯಾಗಿದ್ದಾರೆ. ಇವರ ಭೇಟಿ ರಾಜಕೀಯ ವಲಯದಲ್ಲಿ ಸಿಕ್ಕಾಪಟ್ಟೆ ಚರ್ಚೆ ಹುಟ್ಟುಹಾಕಿದೆ.
ಹೈದ್ರಾಬಾದ್ ನಲ್ಲಿರುವ ಸಿಎಂ ಅಧಿಕೃತ ನಿವಾಸದಲ್ಲಿ ಭೇಟಿಯಾಗಲಿದ್ದಾರೆ. ಈ ಸಭೆಯಲ್ಲಿ ಕರ್ನಾಟಕ ಹಾಗೂ ತೆಲಂಗಾಣದ ಇಬ್ಬರು ರಾಜಕಾರಣಿಗಳು ಕೂಡ ಇರಲಿದ್ದಾರೆ. ರಾಷ್ಟ್ರಮಟ್ಟದ ರಾಜಕಾರಣದ ವಿಚಾರ ಚರ್ಚೆಯಾಗಲಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಕುಮಾರಸ್ವಾಮಿ, ಈ ಸಂದರ್ಭದಲ್ಲಿ ಕರ್ನಾಟಕ-ತೆಲಂಗಾಣ ರಾಜ್ಯಗಳ ವಿಷಯಗಳು ಹಾಗೂ ರಾಷ್ಟ್ರ ರಾಜಕಾರಣಕ್ಕೆ ಸಂಬಂಧಿಸಿದ ಪ್ರಮುಖ ವಿಷಯಗಳ ಬಗ್ಗೆ ಚರ್ಚೆ ನಡೆಯಿತು. ಶ್ರೀ ಕೆಟಿಆರ್ ಅವರ ಆದರಾಭಿಮಾನ, ವಿಶ್ವಾಸ, ಗೌರವಕ್ಕೆ ನನ್ನ ಮನಸ್ಸು ತುಂಬಿಬಂದಿದೆ.
ತೆಲಂಗಾಣ ರಾಜ್ಯದ ಮಾನ್ಯ ಪೌರಾಡಳಿತ, ನಗರಾಭಿವೃದ್ಧಿ, ಕೈಗಾರಿಕೆ, ವಾಣಿಜ್ಯ, ಮಾಹಿತಿ ತಂತ್ರಜ್ಞಾನ ಮತ್ತು ಸಂಪರ್ಕ ಖಾತೆ ಸಚಿವರಾದ ಶ್ರೀ @KTRTRS ಅವರನ್ನು ಹೈದರಾಬಾದ್ʼನಲ್ಲಿ ಭೇಟಿ ಮಾಡಿ ಚರ್ಚೆ ನಡೆಸಲಾಯಿತು. ಪ್ರಖರ ದೂರದೃಷ್ಟಿಯುಳ್ಳ, ನವೀನ ವಿಚಾರಗಳ, ಸದೃಢ ನಾಯಕತ್ವ-ವ್ಯಕ್ತಿತ್ವದ ಅವರೊಂದಿನ ಚರ್ಚೆ ಬಹಳ ಅರ್ಥಪೂರ್ಣವಾಗಿತ್ತು ಎಂದಿದ್ದಾರೆ.